ಹದೀಸ್‌ಗಳ ಪಟ್ಟಿ

ಆಹಾರವನ್ನು ಸೇವಿಸಿ ಅದಕ್ಕಾಗಿ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವ ಮತ್ತು ಪಾನೀಯವನ್ನು ಸೇವಿಸಿ ಅದಕ್ಕಾಗಿ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವ ದಾಸನನ್ನು ಅಲ್ಲಾಹು ಪ್ರೀತಿಸುತ್ತಾನೆ
عربي الإنجليزية الأوردية
ಮಗೂ, ಅಲ್ಲಾಹನ ಹೆಸರನ್ನು ಉಚ್ಛರಿಸು, ನಿನ್ನ ಬಲಗೈಯಿಂದ ಸೇವಿಸು, ಮತ್ತು ನಿನ್ನ ಹತ್ತಿರದಲ್ಲಿರುವುದನ್ನೇ ಸೇವಿಸು
عربي الإنجليزية الأوردية
ನಿಮ್ಮಲ್ಲೊಬ್ಬನು ಆಹಾರ ಸೇವಿಸುವಾಗ ಬಲಗೈಯಿಂದ ಸೇವಿಸಲಿ ಮತ್ತು ಕುಡಿಯುವಾಗ ಬಲಗೈಯಿಂದ ಕುಡಿಯಲಿ. ಏಕೆಂದರೆ ಶೈತಾನನು ಎಡಗೈಯಿಂದ ಆಹಾರ ಸೇವಿಸುತ್ತಾನೆ ಮತ್ತು ಎಡಗೈಯಿಂದ ಕುಡಿಯುತ್ತಾನೆ
عربي الإنجليزية الأوردية
ನಿಮ್ಮಲ್ಲೊಬ್ಬರು ಮೂತ್ರ ವಿಸರ್ಜನೆ ಮಾಡುವಾಗ ತನ್ನ ಜನನಾಂಗವನ್ನು ಬಲಗೈಯಲ್ಲಿ ಹಿಡಿಯಬಾರದು, ಬಲಗೈಯಿಂದ ಶೌಚವನ್ನು ಒರೆಸಬಾರದು, ಮತ್ತು ಪಾತ್ರೆಯೊಳಗೆ ಶ್ವಾಸ ಬಿಡಬಾರದು
عربي الإنجليزية الأوردية
ಒಮ್ಮೆ ಒಬ್ಬ ವ್ಯಕ್ತಿ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಎಡಗೈಯಿಂದ ಆಹಾರ ಸೇವಿಸಿದನು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಬಲಗೈಯಿಂದ ಸೇವಿಸಿರಿ." ಆ ವ್ಯಕ್ತಿ ಉತ್ತರಿಸಿದನು: "ನನಗೆ ಅದು ಸಾಧ್ಯವಿಲ್ಲ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮಗೆ ಅದು ಸಾಧ್ಯವಾಗದಿರಲಿ
عربي الإنجليزية الأوردية
ಖಂಡಿತವಾಗಿಯೂ ಯಾವ ಆಹಾರದ ಮೇಲೆ ಅಲ್ಲಾಹನ ಹೆಸರನ್ನು ಉಚ್ಚರಿಸಲಾಗುವುದಿಲ್ಲವೋ ಅದನ್ನು ಶೈತಾನನು ತನಗಾಗಿ ಹಲಾಲ್ ಮಾಡಿಕೊಳ್ಳುತ್ತಾನೆ
عربي الإنجليزية الأوردية
ನೀವು ನಿಮ್ಮ ಆಹಾರವನ್ನು ಒಟ್ಟುಗೂಡಿ ಸೇವಿಸಿರಿ, ಮತ್ತು ಅದರ ಮೇಲೆ ಅಲ್ಲಾಹನ ಹೆಸರನ್ನು ಉಚ್ಚರಿಸಿರಿ. ನಿಮಗೆ ಅದರಲ್ಲಿ ಬರಕತ್ (ಸಮೃದ್ಧಿ) ನೀಡಲಾಗುವುದು
عربي الإنجليزية الأوردية