عن ابن عمر رضي الله عنهما أن رسول الله صلى الله عليه وسلم قال:
«إِذَا أَكَلَ أَحَدُكُمْ فَلْيَأْكُلْ بِيَمِينِهِ، وَإِذَا شَرِبَ فَلْيَشْرَبْ بِيَمِينِهِ، فَإِنَّ الشَّيْطَانَ يَأْكُلُ بِشِمَالِهِ، وَيَشْرَبُ بِشِمَالِهِ».
[صحيح] - [رواه مسلم] - [صحيح مسلم: 2020]
المزيــد ...
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಿಮ್ಮಲ್ಲೊಬ್ಬನು ಆಹಾರ ಸೇವಿಸುವಾಗ ಬಲಗೈಯಿಂದ ಸೇವಿಸಲಿ ಮತ್ತು ಕುಡಿಯುವಾಗ ಬಲಗೈಯಿಂದ ಕುಡಿಯಲಿ. ಏಕೆಂದರೆ ಶೈತಾನನು ಎಡಗೈಯಿಂದ ಆಹಾರ ಸೇವಿಸುತ್ತಾನೆ ಮತ್ತು ಎಡಗೈಯಿಂದ ಕುಡಿಯುತ್ತಾನೆ."
[صحيح] - [رواه مسلم] - [صحيح مسلم - 2020]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮುಸ್ಲಿಮರಿಗೆ ಬಲಗೈಯಿಂದ ಆಹಾರ-ಪಾನೀಯಗಳನ್ನು ಸೇವಿಸಲು ಆದೇಶಿಸುತ್ತಿದ್ದಾರೆ ಮತ್ತು ಎಡಗೈಯಿಂದ ಆಹಾರ-ಪಾನೀಯ ಸೇವಿಸುವುದನ್ನು ವಿರೋಧಿಸುತ್ತಿದ್ದಾರೆ. ಅದೇಕೆಂದರೆ, ಶೈತಾನನು ಎಡಗೈಯಿಂದ ಆಹಾರ-ಪಾನೀಯಗಳನ್ನು ಸೇವಿಸುತ್ತಾನೆ.