عن عُمر بن أبي سلمة رضي الله عنه قال:
كُنْتُ غُلَامًا فِي حَجْرِ رَسُولِ اللهِ صَلَّى اللهُ عَلَيْهِ وَسَلَّمَ، وَكَانَتْ يَدِي تَطِيشُ فِي الصَّحْفَةِ، فَقَالَ لِي رَسُولُ اللهِ صَلَّى اللهُ عَلَيْهِ وَسَلَّمَ: «يَا غُلَامُ، سَمِّ اللهَ، وَكُلْ بِيَمِينِكَ، وَكُلْ مِمَّا يَلِيكَ» فَمَا زَالَتْ تِلْكَ طِعْمَتِي بَعْدُ.
[صحيح] - [متفق عليه] - [صحيح البخاري: 5376]
المزيــد ...
ಉಮರ್ ಬಿನ್ ಅಬೂ ಸಲಮ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ನಾನು ಮಗುವಾಗಿದ್ದಾಗ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆರೈಕೆಯಲ್ಲಿದ್ದೆ. ನನ್ನ ಕೈ, ಬಟ್ಟಲಲ್ಲಿ ಅತ್ತಿತ್ತ ಹರಿದಾಡುತ್ತಿತ್ತು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಮಗೂ, ಅಲ್ಲಾಹನ ಹೆಸರನ್ನು ಉಚ್ಛರಿಸು, ನಿನ್ನ ಬಲಗೈಯಿಂದ ಸೇವಿಸು, ಮತ್ತು ನಿನ್ನ ಹತ್ತಿರದಲ್ಲಿರುವುದನ್ನೇ ಸೇವಿಸು." ನಂತರ ಇದೇ ನನ್ನ ಆಹಾರ ಸೇವನೆಯ ವಿಧಾನವಾಯಿತು.
[صحيح] - [متفق عليه] - [صحيح البخاري - 5376]
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪತ್ನಿ ಉಮ್ಮು ಸಲಮಾರ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ಪುತ್ರನಾದ ಉಮರ್ ಬಿನ್ ಅಬೂ ಸಲಮ (ಅವರಿಬ್ಬರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ)—ಅವರು ಚಿಕ್ಕವರಿದ್ದಾಗ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆರೈಕೆ ಮತ್ತು ಪಾಲನೆಯಲ್ಲಿ ಬೆಳೆಯುತ್ತಿದ್ದರು—ಇಲ್ಲಿ ತಿಳಿಸುವುದೇನೆಂದರೆ, ಅವರು ಆಹಾರ ಸೇವಿಸುವಾಗ ಅವರ ಕೈ ಬಟ್ಟಲಿನ ಎಲ್ಲಾ ಭಾಗಗಳಲ್ಲೂ ಹರಿದಾಡುತ್ತಿತ್ತು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಆಹಾರ ಸೇವನೆಯ ಮೂರು ಶಿಷ್ಟಾಚಾರಗಳನ್ನು ಕಲಿಸಿಕೊಟ್ಟರು:
1. ಆಹಾರ ಸೇವನೆಯ ಆರಂಭದಲ್ಲಿ ಬಿಸ್ಮಿಲ್ಲಾಹ್ ಎಂದು ಹೇಳುವುದು.
2. ಬಲಗೈಯಿಂದ ಆಹಾರ ಸೇವಿಸುವುದು.
3. ತನಗೆ ಹತ್ತಿರವಾದ ಮುಂದಿನ ಭಾಗದಿಂದ ಆಹಾರವನ್ನು ಸೇವಿಸುವುದು.