عَنْ أَبِي هُرَيْرَةَ رضي الله عنه عَنِ النَّبِيِّ صَلَّى اللهُ عَلَيْهِ وَسَلَّمَ قَالَ:
«مَنْ كَانَتْ لَهُ امْرَأَتَانِ فَمَالَ إِلَى إِحْدَاهُمَا، جَاءَ يَوْمَ الْقِيَامَةِ وَشِقُّهُ مَائِلٌ».
[صحيح] - [رواه أبو داود والترمذي والنسائي وابن ماجه وأحمد] - [سنن أبي داود: 2133]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರಿಗೆ ಇಬ್ಬರು ಪತ್ನಿಯರಿದ್ದು ಅವನು ಅವರಲ್ಲಿ ಒಬ್ಬಳ ಕಡೆಗೆ ವಾಲಿದರೆ, ಪುನರುತ್ಥಾನ ದಿನದಂದು ಅವನು ಒಂದು ಪಾರ್ಶ್ವಕ್ಕೆ ವಾಲಿದವನಂತೆ ಬರುವನು."
[صحيح] - - [سنن أبي داود - 2133]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರಿಗೆ ಒಂದಕ್ಕಿಂತ ಹೆಚ್ಚು ಪತ್ನಿಯರಿದ್ದು ಅವನು ತನ್ನ ಪತ್ನಿಯರ ನಡುವೆ ತನಗೆ ಸಾಧ್ಯವಾಗುವಷ್ಟು ನ್ಯಾಯವನ್ನು ಪಾಲಿಸುವುದಿಲ್ಲವೋ, ಅಂದರೆ ಅವರಿಗೆ ಸಮಾನವಾಗಿ ಖರ್ಚು, ವಸತಿ, ಉಡುಪು ಮತ್ತು ರಾತ್ರಿಯನ್ನು ನೀಡುವುದಿಲ್ಲವೋ, ಅವನಿಗೆ ಪುನರುತ್ಥಾನ ದಿನದಂದು ನೀಡಲಾಗುವ ಶಿಕ್ಷೆಯೇನೆಂದರೆ ಅವರ ದೇಹದ ಅರ್ಧಭಾಗವು ವಾಲಿಕೊಂಡಿರುವುದು. ಹೀಗೆ ವಾಲಿಕೊಂಡಿರುವುದು ಅವನು ಮಾಡಿದ ಅನ್ಯಾಯಕ್ಕೆ ಅಂದರೆ ತನ್ನ ವರ್ತನೆಯಲ್ಲಿ ಒಂದು ಕಡೆ ವಾಲಿದ್ದಕ್ಕೆ ಶಿಕ್ಷೆಯಾಗಿದೆ.