عَنْ إِيَاسِ بْنِ عَبْدِ اللَّهِ بْنِ أَبِي ذُبَابٍ رَضيَ اللهُ عنه قَالَ: قَالَ رَسُولُ اللَّهِ صَلَّى اللهُ عَلَيْهِ وَسَلَّمَ:
«لَا تَضْرِبُوا إِمَاءَ اللَّهِ» فَجَاءَ عُمَرُ إِلَى رَسُولِ اللَّهِ صَلَّى اللهُ عَلَيْهِ وَسَلَّمَ فَقَالَ: ذَئِرْنَ النِّسَاءُ عَلَى أَزْوَاجِهِنَّ، فَرَخَّصَ فِي ضَرْبِهِنَّ، فَأَطَافَ بِآلِ رَسُولِ اللَّهِ صَلَّى اللهُ عَلَيْهِ وَسَلَّمَ نِسَاءٌ كَثِيرٌ يَشْكُونَ أَزْوَاجَهُنَّ، فَقَالَ النَّبِيُّ صَلَّى اللهُ عَلَيْهِ وَسَلَّمَ: «لَقَدْ طَافَ بِآلِ مُحَمَّدٍ نِسَاءٌ كَثِيرٌ يَشْكُونَ أَزْوَاجَهُنَّ، لَيْسَ أُولَئِكَ بِخِيَارِكُمْ».
[صحيح] - [رواه أبو داود وابن ماجه] - [سنن أبي داود: 2146]
المزيــد ...
ಇಯಾಸ್ ಇಬ್ನ್ ಅಬ್ದುಲ್ಲಾ ಇಬ್ನ್ ಅಬೀ ದುಬಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಅಲ್ಲಾಹನ ದಾಸಿಯರನ್ನು (ಮಹಿಳೆಯರನ್ನು) ಹೊಡೆಯಬೇಡಿ". ಆಗ ಉಮರ್ (ಇಬ್ನುಲ್-ಖತ್ತಾಬ್) ರವರು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು, ಹೇಳಿದರು: "(ಈ ಆದೇಶದಿಂದ) ಮಹಿಳೆಯರು ತಮ್ಮ ಪತಿಯರ ವಿರುದ್ಧ ಧೈರ್ಯಶಾಲಿಗಳಾಗಿದ್ದಾರೆ." ಆಗ ಅವರು (ಪ್ರವಾದಿ) ಅವರನ್ನು ಹೊಡೆಯಲು ರಿಯಾಯಿತಿ ನೀಡಿದರು. (ಅದರ ನಂತರ) ಅನೇಕ ಮಹಿಳೆಯರು, ತಮ್ಮ ಪತಿಯರ ಬಗ್ಗೆ ದೂರು ಹೇಳುತ್ತಾ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕುಟುಂಬದವರ ಬಳಿಗೆ ಬಂದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ ಅನೇಕ ಮಹಿಳೆಯರು, ತಮ್ಮ ಪತಿಯರ ಬಗ್ಗೆ ದೂರು ಹೇಳುತ್ತಾ ಮುಹಮ್ಮದ್ ರವರ ಕುಟುಂಬದವರ ಬಳಿಗೆ ಬಂದಿದ್ದಾರೆ. ಅಂಥವರು (ತಮ್ಮ ಹೆಂಡತಿಯರನ್ನು ಹೊಡೆಯುವವರು) ನಿಮ್ಮಲ್ಲಿ ಉತ್ತಮರಲ್ಲ."
[صحيح] - [رواه أبو داود وابن ماجه] - [سنن أبي داود - 2146]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪತ್ನಿಯರನ್ನು ಹೊಡೆಯುವುದನ್ನು ನಿಷೇಧಿಸಿದರು. ಆಗ ಸತ್ಯವಿಶ್ವಾಸಿಗಳ ನಾಯಕ (ಅಮೀರುಲ್-ಮುಅ್‌ಮಿನೀನ್) ಉಮರ್ ಇಬ್ನುಲ್-ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಬಂದು ಹೇಳಿದರು: ಓ ಅಲ್ಲಾಹನ ಸಂದೇಶವಾಹಕರೇ, ಮಹಿಳೆಯರು ತಮ್ಮ ಪತಿಯರ ವಿರುದ್ಧ ಧೈರ್ಯಶಾಲಿಗಳಾಗಿದ್ದಾರೆ ಮತ್ತು ಅವರ ನಡತೆ ಕೆಟ್ಟದಾಗಿದೆ. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಕಾರಣವಿದ್ದರೆ ಅವರನ್ನು (ಮಹಿಳೆಯರನ್ನು) ತೀವ್ರವಲ್ಲದ ರೀತಿಯಲ್ಲಿ ಹೊಡೆಯಲು ರಿಯಾಯಿತಿ ನೀಡಿದರು. ಉದಾಹರಣೆಗೆ ಅವರು ಪತಿಯ ಹಕ್ಕನ್ನು ಪೂರೈಸಲು ನಿರಾಕರಿಸಿದಾಗ ಮತ್ತು ಪತಿಗೆ ಅವಿಧೇಯರಾದಾಗ ಮುಂತಾದ ಸಂದರ್ಭಗಳಲ್ಲಿ. ಅದರ ನಂತರ ಮಹಿಳೆಯರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪತ್ನಿಯರ ಬಳಿ ಬಂದು, ತಮ್ಮ ಪತಿಯರು ತಮಗೆ ತೀವ್ರವಾಗಿ ಹೊಡೆಯುವುದರ ಬಗ್ಗೆ ಮತ್ತು ಈ ರಿಯಾಯಿತಿಯನ್ನು ದುರುಪಯೋಗಪಡಿಸಿಕೊಳ್ಳುವುದರ ಬಗ್ಗೆ ದೂರು ನೀಡಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಯಾವ ಪುರುಷರು ತಮ್ಮ ಮಹಿಳೆಯರನ್ನು ತೀವ್ರವಾಗಿ ಹೊಡೆಯುತ್ತಾರೋ, ಅವರು ನಿಮ್ಮಲ್ಲಿ ಉತ್ತಮರಲ್ಲ.