عن أسامة بن زيد رضي الله عنهما عن النبي صلى الله عليه وسلم قال:
«مَا تَرَكْتُ بَعْدِي فِتْنَةً أَضَرَّ عَلَى الرِّجَالِ مِنَ النِّسَاءِ».
[صحيح] - [متفق عليه] - [صحيح البخاري: 5096]
المزيــد ...
ಉಸಾಮ ಬಿನ್ ಝೈದ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಮಹಿಳೆಯರಿಗಿಂತಲೂ ಹೆಚ್ಚು ಹಾನಿ ಮಾಡುವ ಒಂದು ಪರೀಕ್ಷೆಯನ್ನು ನಾನು ನನ್ನ ನಂತರ ಪುರುಷರಿಗೆ ಬಿಟ್ಟು ಹೋಗುವುದಿಲ್ಲ."
[صحيح] - [متفق عليه] - [صحيح البخاري - 5096]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಅವರು ಅವರ ಮರಣಾನಂತರ ಮಹಿಳೆಯರಿಗಿಂತಲೂ ಹೆಚ್ಚು ಹಾನಿ ಮಾಡುವ ಒಂದು ಪರೀಕ್ಷೆಯನ್ನು ಒಬ್ಬ ಪುರುಷನಿಗೆ ಬಿಟ್ಟು ಹೋಗುವುದಿಲ್ಲ. ಆ ಮಹಿಳೆ ಅವನ ಹೆಂಡತಿಯಾಗಿದ್ದರೆ ಧರ್ಮಕ್ಕೆ ವಿರುದ್ಧವಾದ ರೀತಿಯಲ್ಲಿ ಅವಳನ್ನು ಅನುಸರಿಸುವ ಮೂಲಕ ಅವನು ಈ ಪರೀಕ್ಷೆಯನ್ನು ಎದುರಿಸುತ್ತಾನೆ. ಆಕೆ ಅನ್ಯ ಮಹಿಳೆಯಾಗಿದ್ದರೆ ಅವಳೊಂದಿಗೆ ಬೆರೆಯುವ, ಅಥವಾ ಅವಳೊಂದಿಗೆ ಏಕಾಂತದಲ್ಲಿರುವಾಗ ಮತ್ತು ಅದರಿಂದ ಉಂಟಾಗುವ ಕೆಟ್ಟ ಸಂಗತಿಗಳ ಮೂಲಕ ಅವನು ಈ ಪರೀಕ್ಷೆಯನ್ನು ಎದುರಿಸುತ್ತಾನೆ.