+ -

عن أبي هريرة رضي الله عنه قال: قال رسول الله صلى الله عليه وسلم:
«أَكْمَلُ الْمُؤْمِنِينَ إِيمَانًا أَحْسَنُهُمْ خُلُقًا، وَخَيْرُكُمْ خَيْرُكُمْ لِنِسَائِهِمْ».

[حسن] - [رواه أبو داود والترمذي وأحمد] - [سنن الترمذي: 1162]
المزيــد ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಅತ್ಯುತ್ತಮ ನಡವಳಿಕೆಯನ್ನು ಹೊಂದಿರುವ ಸತ್ಯವಿಶ್ವಾಸಿಗಳೇ ಪರಿಪೂರ್ಣ ವಿಶ್ವಾಸವನ್ನು ಹೊಂದಿದವರು. ನಿಮ್ಮಲ್ಲಿ ಯಾರು ತಮ್ಮ ಮಹಿಳೆಯರೊಡನೆ ಉತ್ತಮವಾಗಿ ವರ್ತಿಸುತ್ತಾರೋ ಅವರೇ ನಿಮ್ಮಲ್ಲಿ ಅತ್ಯುತ್ತಮ ಜನರು."

[حسن] - [رواه أبو داود والترمذي وأحمد] - [سنن الترمذي - 1162]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರ ನಡವಳಿಕೆಯು ಅತ್ಯುತ್ತಮವಾಗಿದೆಯೋ ಅವನು ಜನರಲ್ಲೇ ಪರಿಪೂರ್ಣ ವಿಶ್ವಾಸವನ್ನು ಹೊಂದಿರುವವನಾಗಿದ್ದಾನೆ. ಅತ್ಯುತ್ತಮ ನಡವಳಿಕೆ ಎಂದರೆ ಮಂದಹಾಸ ಬೀರುವುದು, ಜನರಿಗೆ ಒಳಿತು ಮಾಡುವುದು, ಒಳ್ಳೆಯ ಮಾತುಗಳನ್ನಾಡುವುದು ಮತ್ತು ಜನರಿಗೆ ತೊಂದರೆ ಕೊಡದಿರುವುದು.
ಸತ್ಯವಿಶ್ವಾಸಿಗಳಲ್ಲಿ ಶ್ರೇಷ್ಠನು ತನ್ನ ಮಹಿಳೆಯರೊಂದಿಗೆ ಅತ್ಯುತ್ತಮವಾಗಿ ವರ್ತಿಸುವವನು. ಮಹಿಳೆಯರು ಎಂದರೆ ಅವನ ಪತ್ನಿಯರು, ಹೆಣ್ಣುಮಕ್ಕಳು, ಸಹೋದರಿಯರು ಮತ್ತು ಹತ್ತಿರದ ಸಂಬಂಧಿ ಸ್ತ್ರೀಯರು, ನಿಮ್ಮ ಅತ್ಯುತ್ತಮ ವರ್ತನೆಗೆ ಇತರೆಲ್ಲ ಜನರಿಗಿಂತಲೂ ಇವರು ಅತ್ಯಂತ ಹಕ್ಕುಳ್ಳವರಾಗಿದ್ದಾರೆ.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ತಮಿಳು ಬರ್ಮೀ ಥಾಯ್ ಜರ್ಮನ್ ಜಪಾನೀ ಪಶ್ತೋ الأسامية الألبانية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الكينياروندا الرومانية المجرية التشيكية المالاجاشية الإيطالية الأوكرانية
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಈ ಹದೀಸ್ ಉತ್ತಮ ನಡವಳಿಕೆಯ ಶ್ರೇಷ್ಠತೆಯನ್ನು ಮತ್ತು ಅವು ಸತ್ಯವಿಶ್ವಾಸದ ಭಾಗವಾಗಿದೆ ಎಂದು ಸೂಚಿಸುತ್ತದೆ.
  2. ಕರ್ಮಗಳು ಸತ್ಯವಿಶ್ವಾಸದ ಭಾಗವಾಗಿದೆ. ಸತ್ಯವಿಶ್ವಾಸವು ಹೆಚ್ಚಾಗುತ್ತದೆ ಮತ್ತು ಕಡಿಮೆಯಾಗುತ್ತದೆ.
  3. ಇಸ್ಲಾಂ ಮಹಿಳೆಯರನ್ನು ಗೌರವಿಸುತ್ತದೆ ಮತ್ತು ಅವರೊಡನೆ ಉತ್ತಮವಾಗಿ ವರ್ತಿಸಲು ಪ್ರೋತ್ಸಾಹಿಸುತ್ತದೆ.
ಇನ್ನಷ್ಟು