+ -

عن عبد الله بن عمرو رضي الله عنهما أن رسول الله صلى الله عليه وسلم قال:
«الدُّنْيَا مَتَاعٌ، وَخَيْرُ مَتَاعِ الدُّنْيَا الْمَرْأَةُ الصَّالِحَةُ».

[صحيح] - [رواه مسلم] - [صحيح مسلم: 1467]
المزيــد ...

ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಇಹಲೋಕವು ಒಂದು ಆನಂದವಾಗಿದೆ ಮತ್ತು ಇಹಲೋಕದ ಆನಂದಗಳಲ್ಲಿ ಅತ್ಯುತ್ತಮವಾದುದು ಧರ್ಮನಿಷ್ಠೆ ಮಹಿಳೆಯಾಗಿದ್ದಾಳೆ."

[صحيح] - [رواه مسلم] - [صحيح مسلم - 1467]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಇಹಲೋಕ ಮತ್ತು ಅದರಲ್ಲಿರುವ ವಸ್ತುಗಳು ಸ್ವಲ್ಪ ಸಮಯದವರೆಗೆ ಆನಂದಿಸುವ ಮತ್ತು ನಂತರ ಕೊನೆಗೊಳ್ಳುವ ವಿಷಯಗಳಾಗಿವೆ. ಧರ್ಮನಿಷ್ಠೆಯಾದ ಪತ್ನಿ ಇವುಗಳಲ್ಲಿ ಅತಿಶ್ರೇಷ್ಠ ಆನಂದವಾಗಿದ್ದಾಳೆ. ಧರ್ಮನಿಷ್ಠೆ ಪತ್ನಿ ಯಾರೆಂದರೆ ಗಂಡ ಅವಳನ್ನು ನೋಡಿದಾಗ ಅವಳು ಅವನಿಗೆ ಸಂತೋಷಪಡಿಸುತ್ತಾಳೆ, ಅವನು ಏನಾದರೂ ಆಜ್ಞಾಪಿಸಿದರೆ ಅವಳು ಅನುಸರಿಸುತ್ತಾಳೆ ಮತ್ತು ಅವನ ಅನುಪಸ್ಥಿತಿಯಲ್ಲಿ ಅವಳು ತನ್ನ ಮಾನವನ್ನು ಮತ್ತು ಅವನ ಆಸ್ತಿಯನ್ನು ಸಂರಕ್ಷಿಸುತ್ತಾಳೆ.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ತಮಿಳು ಬರ್ಮೀ ಥಾಯ್ ಜರ್ಮನ್ ಜಪಾನೀ ಪಶ್ತೋ الأسامية الألبانية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الطاجيكية الكينياروندا الرومانية المجرية التشيكية الموري المالاجاشية الإيطالية الولوف البلغارية الأذربيجانية الأوكرانية الجورجية
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಅಲ್ಲಾಹು ತನ್ನ ದಾಸರಿಗೆ ಅನುಮತಿಸಿದ ಇಹಲೋಕದ ಉತ್ತಮ ವಸ್ತುಗಳನ್ನು ದುರ್ವ್ಯಯ ಮತ್ತು ಅಹಂಭಾವ ತೋರದೆ ಆನಂದಿಸಬಹುದೆಂದು ಈ ಹದೀಸ್ ತಿಳಿಸುತ್ತದೆ.
  2. ಧರ್ಮನಿಷ್ಠೆ ಪತ್ನಿಯನ್ನು ಆರಿಸಲು ಈ ಹದೀಸ್ ಪ್ರೋತ್ಸಾಹಿಸುತ್ತದೆ. ಏಕೆಂದರೆ ಅಲ್ಲಾಹನಿಗೆ ವಿಧೇಯತೆ ತೋರಲು ಅವಳು ಗಂಡನಿಗೆ ಸಹಾಯ ಮಾಡುತ್ತಾಳೆ.
  3. ಅಲ್ಲಾಹನಿಗೆ ವಿಧೇಯರಾಗಿ ಬದುಕಲು ಬಳಸುವ ಮತ್ತು ಅದಕ್ಕಾಗಿ ಸಹಾಯ ಮಾಡುವ ವಸ್ತುಗಳೇ ಇಹಲೋಕದ ಆನಂದಗಳಲ್ಲಿ ಅತ್ಯುತ್ತಮವಾಗಿವೆ.