+ -

عَنْ مُعَاوِيَةَ الْقُشَيْرِيِّ رضي الله عنه قَالَ:
قُلْتُ: يَا رَسُولَ اللَّهِ، مَا حَقُّ زَوْجَةِ أَحَدِنَا عَلَيْهِ؟، قَالَ: «أَنْ تُطْعِمَهَا إِذَا طَعِمْتَ، وَتَكْسُوَهَا إِذَا اكْتَسَيْتَ، أَوِ اكْتَسَبْتَ، وَلَا تَضْرِبِ الْوَجْهَ، وَلَا تُقَبِّحْ، وَلَا تَهْجُرْ إِلَّا فِي الْبَيْتِ»

[حسن] - [رواه أبو داود وابن ماجه وأحمد] - [سنن أبي داود: 2142]
المزيــد ...

ಮುಆವಿಯಾ ಅಲ್-ಖುಶೈರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
ನಾನು ಕೇಳಿದೆ: ಓ ಅಲ್ಲಾಹನ ಸಂದೇಶವಾಹಕರೇ! ನಮ್ಮಲ್ಲೊಬ್ಬರ ಪತ್ನಿಯ ಅವಳ ಗಂಡನ ಮೇಲೆ ಏನೇನು ಹಕ್ಕುಗಳಿವೆ? ಅವರು ಉತ್ತರಿಸಿದರು: "ನೀವು ಆಹಾರ ಸೇವಿಸುವಾಗ ಅವಳಿಗೂ ಆಹಾರ ನೀಡಿರಿ ಮತ್ತು ನೀವು ಬಟ್ಟೆ ಧರಿಸುವಾಗ ಅಥವಾ ನೀವು ಸಂಪಾದಿಸಿದಾಗ ಅವಳಿಗೂ ಉಡಿಸಿರಿ. ಅವಳ ಮುಖಕ್ಕೆ ಹೊಡೆಯಬೇಡಿ, ಮತ್ತು ಅಸಹ್ಯವಾಗಿ ನೋಡಬೇಡಿ ಮತ್ತು (ಕೋಪ ಬಂದಾಗ) ಮನೆಯಲ್ಲಿ ಬಿಟ್ಟು ಬೇರೆಲ್ಲೂ ಅವಳಿಂದ ದೂರವಿರಬೇಡಿ."

[حسن] - [رواه أبو داود وابن ماجه وأحمد] - [سنن أبي داود - 2142]

ವಿವರಣೆ

ಹೆಂಡತಿಗೆ ಗಂಡನ ಮೇಲೆ ಏನೇನು ಹಕ್ಕುಗಳಿವೆ ಎಂದು ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಶ್ನಿಸಲಾಯಿತು? ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೆಲವು ವಿಷಯಗಳನ್ನು ತಿಳಿಸಿದರು. ಅವು ಏನೆಂದರೆ:
ಮೊದಲನೆಯದಾಗಿ: ನೀವು ಮಾತ್ರ ಆಹಾರ ಸೇವಿಸಬೇಡಿ; ಬದಲಿಗೆ ನೀವು ಆಹಾರ ಸೇವಿಸುವಾಗಲೆಲ್ಲಾ ಅವಳಿಗೂ ನೀಡಿರಿ.
ಎರಡನೆಯದಾಗಿ: ನೀವು ಮಾತ್ರ ಉಡುಪು ಮತ್ತು ಬಟ್ಟೆಯನ್ನು ತೊಟ್ಟುಕೊಳ್ಳಬೇಡಿ. ಬದಲಿಗೆ ನೀವು ಉಟ್ಟಾಗ, ನೀವು ಸಂಪಾದಿಸಿದಾಗ ಮತ್ತು ಶಕ್ತರಾದಾಗ ಅವಳಿಗೂ ಉಡಿಸಿರಿ.
ಮೂರನೆಯದಾಗಿ: ವಿನಾಕಾರಣ ಮತ್ತು ಅನಗತ್ಯವಾಗಿ ಹೊಡೆಯಬೇಡಿರಿ. ಇನ್ನು ನೀವು ಶಿಸ್ತಿಗಾಗಿ ಅಥವಾ ಕೆಲವು ಕಡ್ಡಾಯ ಕರ್ತವ್ಯಗಳನ್ನು ತ್ಯಜಿಸಿದ್ದಕ್ಕಾಗಿ ಹೊಡೆಯುವುದಿದ್ದರೆ, ನೋವುಂಟು ಮಾಡದ ರೀತಿಯಲ್ಲಿ ಹೊಡೆಯಿರಿ. ಮುಖಕ್ಕೆ ಹೊಡೆಯಬೇಡಿ. ಏಕೆಂದರೆ ಮುಖವು ಅತಿಶ್ರೇಷ್ಠ ಮತ್ತು ಹೊರಗೆ ಕಾಣುವ ಅಂಗವಾಗಿದೆ ಮತ್ತು ಅದು ಗೌರವಯುತ ಭಾಗಗಳು ಹಾಗೂ ಸೂಕ್ಷ್ಮ ಅಂಗಗಳನ್ನು ಒಳಗೊಂಡಿದೆ.
ನಾಲ್ಕನೆಯದಾಗಿ: ನಿಂದಿಸಬೇಡಿ ಅಥವಾ "ಅಲ್ಲಾಹು ನಿನ್ನ ಮುಖವನ್ನು ಅಸಹ್ಯಗೊಳಿಸಲಿ" ಎಂದು ಹೇಳಬೇಡಿ. ಆಕೆಯ ಮುಖವನ್ನು ಅಥವಾ ಆಕೆಯ ದೇಹದ ಯಾವುದೇ ಭಾಗವನ್ನು ವಿರೂಪವಾಗಿದೆಯೆಂದು ಹೇಳಬೇಡಿ. ಏಕೆಂದರೆ ಮನುಷ್ಯನ ಮುಖ ಮತ್ತು ದೇಹವನ್ನು ರೂಪಿಸಿದವನು ಅಲ್ಲಾಹು. ಅವನು ತಾನು ಸೃಷ್ಟಿಸಿದ ಪ್ರತಿಯೊಂದು ವಸ್ತುವನ್ನೂ ಸುಂದರವಾಗಿಸಿದ್ದಾನೆ. ಸೃಷ್ಟಿಯನ್ನು ದೂಷಿಸುವುದು ಸೃಷ್ಟಿಕರ್ತನನ್ನು ದೂಷಿಸುವುದಂತಾಗುತ್ತದೆ. (ಅಲ್ಲಾಹು ಕಾಪಾಡಲಿ).
ಐದನೆಯದಾಗಿ: ಮಲಗುವ ಸ್ಥಳದಲ್ಲಿ ಮಾತ್ರ ಅವಳಿಂದ ದೂರವಿರಿ. ಅವಳನ್ನು ಬಿಟ್ಟು ಬೇರೆ ಹೋಗಬೇಡಿ ಮತ್ತು ಅವಳನ್ನು ಇನ್ನೊಂದು ಮನೆಗೆ ಸ್ಥಳಾಂತರಿಸಬೇಡಿ. ಬಹುಶಃ ಇದು ಪತಿ-ಪತ್ನಿಯ ನಡುವೆ ವಿರಸಕ್ಕೆ ಕಾರಣವಾಗಬಹುದು.

ಹದೀಸಿನ ಪ್ರಯೋಜನಗಳು

  1. ಸಹಾಬಾಗಳು ತಮ್ಮ ಮೇಲೆ ಇತರರಿಗಿರುವ ಹಕ್ಕುಗಳನ್ನು ತಿಳಿಯಲು ಮತ್ತು ಇತರರ ಮೇಲೆ ತಮಗಿರುವ ಹಕ್ಕುಗಳನ್ನು ತಿಳಿಯಲು ಉತ್ಸುಕರಾಗಿದ್ದರು.
  2. ಪತಿ ಪತ್ನಿಗಾಗಿ ಖರ್ಚು, ಬಟ್ಟೆ-ಬರೆ ಮತ್ತು ವಸತಿ ಸೌಲಭ್ಯ ಮಾಡುವುದು ಕಡ್ಡಾಯವಾಗಿದೆ.
  3. ಮಾನಸಿಕವಾಗಿ ಅಥವಾ ದೈಹಿಕವಾಗಿ ಇನ್ನೊಬ್ಬರನ್ನು ಅಸಹ್ಯವಾಗಿ ಕಾಣುವುದನ್ನು ನಿಷೇಧಿಸಲಾಗಿದೆ.
  4. ನೀನು ನೀಚ ಕುಲಕ್ಕೆ ಹುಟ್ಟಿದವಳು, ನೀನು ನೀಚ ಕುಟುಂಬಕ್ಕೆ ಸೇರಿದವಳು ಮುಂತಾದ ಮಾತುಗಳ ಮೂಲಕ ನಿಂದಿಸುವುದು ನಿಷೇಧಿಸಲಾಗಿದೆ.
ಅನುವಾದ: ಆಂಗ್ಲ ಉರ್ದು ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية السويدية الأمهرية الهولندية الغوجاراتية النيبالية الدرية الرومانية المجرية الموري الولوف الأوكرانية الجورجية المقدونية الخميرية الماراثية
ಅನುವಾದಗಳನ್ನು ತೋರಿಸಿ
ಇನ್ನಷ್ಟು