عَنِ ابْنِ عَبَّاسٍ رضي الله عنهما قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«لَا يَنْظُرُ اللهُ إِلَى رَجُلٍ أَتَى رَجُلًا أَوِ امْرَأَةً فِي دُبُرٍ».
[صحيح] - [رواه الترمذي والنسائي في الكبرى] - [السنن الكبرى للنسائي: 8952]
المزيــد ...
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು ಒಬ್ಬ ಪುರುಷನನ್ನು ಅಥವಾ ಮಹಿಳೆಯನ್ನು ಗುದದ್ವಾರದಲ್ಲಿ ಸಂಭೋಗಿಸುತ್ತಾರೋ, ಅವನ ಕಡೆಗೆ ಅಲ್ಲಾಹು ದೃಷ್ಟಿ ಹಾಯಿಸುವುದಿಲ್ಲ."
[صحيح] - - [السنن الكبرى للنسائي - 8952]
ಇನ್ನೊಬ್ಬ ಪುರುಷನ ಗುದದ್ವಾರದಲ್ಲಿ ಅಥವಾ ಮಹಿಳೆಯ ಗುದದ್ವಾರದಲ್ಲಿ ಸಂಭೋಗಿಸುವವನ ಕಡೆಗೆ ಅಲ್ಲಾಹು ದಯೆಯ ದೃಷ್ಟಿಯನ್ನು ಬೀರುವುದಿಲ್ಲ ಮತ್ತು ಅದು ಮಹಾಪಾಪಗಳಲ್ಲಿ ಒಂದಾಗಿದೆ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಕಠಿಣ ಎಚ್ಚರಿಕೆ ನೀಡುತ್ತಿದ್ದಾರೆ.