عَنْ عَلِيٍّ رَضِيَ اللَّهُ عَنْهُ عَنِ النَّبِيِّ صَلَّى اللَّهُ عَلَيْهِ وَسَلَّمَ قَالَ:
«مَنْ أَصَابَ حَدًّا فَعُجِّلَ عُقُوبَتَهُ فِي الدُّنْيَا فَاللَّهُ أَعْدَلُ مِنْ أَنْ يُثَنِّيَ عَلَى عَبْدِهِ العُقُوبَةَ فِي الآخِرَةِ، وَمَنْ أَصَابَ حَدًّا فَسَتَرَهُ اللَّهُ عَلَيْهِ وَعَفَا عَنْهُ فَاللَّهُ أَكْرَمُ مِنْ أَنْ يَعُودَ فِي شَيْءٍ قَدْ عَفَا عَنْهُ».
[حسن] - [رواه الترمذي وابن ماجه] - [سنن الترمذي: 2626]
المزيــد ...
ಅಲೀ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು ಒಂದು 'ಹದ್ದ್' ಗೆ (ಶರೀಅತ್ ದಂಡನೆಗೆ) ಗುರಿಯಾಗುತ್ತಾನೋ, ಮತ್ತು ಅವನಿಗೆ ಈ ಪ್ರಪಂಚದಲ್ಲಿಯೇ ಶೀಘ್ರವಾಗಿ ಶಿಕ್ಷೆ ನೀಡಲಾಗುತ್ತದೆಯೋ, ಅಲ್ಲಾಹು ತನ್ನ ಆ ದಾಸನಿಗೆ ಪರಲೋಕದಲ್ಲಿ ಎರಡನೇ ಬಾರಿ ಶಿಕ್ಷೆ ವಿಧಿಸುವುದಕ್ಕಿಂತ ಹೆಚ್ಚು ನ್ಯಾಯವಂತನಾಗಿದ್ದಾನೆ. ಹಾಗೆಯೇ, ಯಾರು ಒಂದು 'ಹದ್ದ್' ಗೆ ಗುರಿಯಾಗುತ್ತಾನೋ, ಮತ್ತು ಅಲ್ಲಾಹು ಅದನ್ನು ಅವನಿಗೆ ಮರೆಮಾಚಿ, ಅವನನ್ನು ಕ್ಷಮಿಸುತ್ತಾನೋ (ಅವನಿಗೆ ಈ ಜಗತ್ತಿನಲ್ಲಿ ಶಿಕ್ಷೆ ನೀಡುವುದಿಲ್ಲವೋ), ಅಲ್ಲಾಹು ತಾನು ಈಗಾಗಲೇ ಕ್ಷಮಿಸಿದ ವಿಷಯದ ಬಗ್ಗೆ ಪುನಃ ಶಿಕ್ಷಿಸುವುದಕ್ಕಿಂತ ಹೆಚ್ಚು ಉದಾರಿಯಾಗಿದ್ದಾನೆ".
[حسن] - [رواه الترمذي وابن ماجه] - [سنن الترمذي - 2626]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸುವುದೇನೆಂದರೆ, ಯಾರು ಶರೀಅತ್ ಪ್ರಕಾರ 'ಹದ್ದ್' ಗೆ (ದಂಡನೆಗೆ) ಗುರಿಯಾಗುವ ಪಾಪಗಳನ್ನು, ಉದಾಹರಣೆಗೆ ವ್ಯಭಿಚಾರ ಮತ್ತು ಕಳ್ಳತನದಂತಹ ಪಾಪವನ್ನು ಮಾಡುತ್ತಾನೋ, ಮತ್ತು ಅವನು ಶಿಕ್ಷೆಯನ್ನು ಪಡೆದು ಈ ಪ್ರಪಂಚದಲ್ಲಿ ಅವನ ಮೇಲೆ 'ಹದ್ದ್' ಜಾರಿಗೊಳಿಸಲಾಗುತ್ತದೆಯೋ; ಖಂಡಿತವಾಗಿಯೂ ಆ 'ಹದ್ದ್' ಅವನ ಆ ಪಾಪವನ್ನು ಅಳಿಸಿಹಾಕುತ್ತದೆ ಮತ್ತು ಪರಲೋಕದಲ್ಲಿ ಅದರ ಶಿಕ್ಷೆಯನ್ನು ರದ್ದುಗೊಳಿಸುತ್ತದೆ. ಏಕೆಂದರೆ ಅಲ್ಲಾಹು ತನ್ನ ದಾಸನ ಮೇಲೆ ಎರಡು ಶಿಕ್ಷೆಗಳನ್ನು ಜೊತೆಗೂಡಿಸಲಾರ. ಅವನು ಅದಕ್ಕಿಂತ ಹೆಚ್ಚು ಉದಾರಿ ಮತ್ತು ಕರುಣಾಮಯಿಯಾಗಿದ್ದಾನೆ. ಹಾಗೆಯೇ, ಯಾರನ್ನು ಅಲ್ಲಾಹು ಈ ಪ್ರಪಂಚದಲ್ಲಿ (ಶಿಕ್ಷೆಗೆ ಗುರಿಯಾಗದ ರೀತಿಯಲ್ಲಿ ಅವನ ಪಾಪವನ್ನು) ಮರೆಮಾಚುತ್ತಾನೋ, ಮತ್ತು ಆ ಪಾಪಕ್ಕಾಗಿ ಅವನನ್ನು ಶಿಕ್ಷಿಸುವುದಿಲ್ಲವೋ, ಮತ್ತು ಅಲ್ಲಾಹು ಅವನ ಆ ಪಾಪವನ್ನು ಮನ್ನಿಸುತ್ತಾನೋ ಮತ್ತು ಕ್ಷಮಿಸುತ್ತಾನೋ; ತಾನು ಈಗಾಗಲೇ ಕ್ಷಮಿಸಿದ ಮತ್ತು ಮನ್ನಿಸಿದ ಆ ಪಾಪಕ್ಕೆ ಪುನಃ ಶಿಕ್ಷಿಸುವುದಕ್ಕಿಂತಲೂ ಅವನು ಹೆಚ್ಚು ಉದಾರಿಯಾಗಿದ್ದಾನೆ.