عَنْ أَبِي هُرَيْرَةَ رَضِيَ اللَّهُ عَنْهُ قَالَ: سَمِعْتُ رَسُولَ اللَّهِ صَلَّى اللهُ عَلَيْهِ وَسَلَّمَ يَقُولُ:
«لاَ يَزَالُ قَلْبُ الكَبِيرِ شَابًّا فِي اثْنَتَيْنِ: فِي حُبِّ الدُّنْيَا وَطُولِ الأَمَلِ».
[صحيح] - [رواه البخاري] - [صحيح البخاري: 6420]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ವೃದ್ಧನ ಹೃದಯವು ಎರಡು ವಿಷಯಗಳಲ್ಲಿ ಯುವಕನಂತೆ ಇರುತ್ತದೆ: ಭೂಲೋಕದ ಪ್ರೀತಿಯಲ್ಲಿ ಮತ್ತು ಸುದೀರ್ಘ ಆಸೆಯಲ್ಲಿ (ಹೆಚ್ಚು ಕಾಲ ಬದುಕಬೇಕೆಂಬ ಆಸೆಯಲ್ಲಿ)".
[صحيح] - [رواه البخاري] - [صحيح البخاري - 6420]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ವೃದ್ಧನ ದೇಹವು ವಯಸ್ಸಾಗಿ ದುರ್ಬಲಗೊಳ್ಳುತ್ತದೆ, ಆದರೆ ಅವನ ಹೃದಯವು ಎರಡು ವಿಷಯಗಳ ಪ್ರೀತಿಯಲ್ಲಿ ಯುವಕನಂತಿರುತ್ತದೆ: ಮೊದಲನೆಯದು: ಸಂಪತ್ತು ಶೇಖರಿಸುವ ಮೂಲಕ ಭೂಲೋಕವನ್ನು ಪ್ರೀತಿಸುವುದು. ಎರಡನೆಯದು: ದೀರ್ಘ ಜೀವನ, ಆಯಸ್ಸು, ಬದುಕು ಮತ್ತು ಆಸೆಗಳು.