عَنْ أَبِي هُرَيْرَةَ رضي الله عنه قَالَ: قَالَ رَسُولُ اللَّهِ صَلَّى اللَّهُ عَلَيْهِ وَسَلَّمَ:
«أَكْثِرُوا ذِكْرَ هَادمِ اللَّذَّاتِ» يَعْنِي الْمَوْتَ.
[حسن] - [رواه الترمذي والنسائي وابن ماجه] - [سنن ابن ماجه: 4258]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಸುಖಗಳನ್ನು ನಾಶಮಾಡುವದನ್ನು ಹೆಚ್ಚಾಗಿ ಸ್ಮರಿಸಿರಿ" – ಅಂದರೆ ಮರಣವನ್ನು.
[حسن] - [رواه الترمذي والنسائي وابن ماجه] - [سنن ابن ماجه - 4258]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮರಣವನ್ನು ಹೆಚ್ಚಾಗಿ ನೆನಪಿಸಿಕೊಳ್ಳಲು ಪ್ರೋತ್ಸಾಹಿಸಿದ್ದಾರೆ. ಅದನ್ನು ನೆನಪಿಸಿಕೊಳ್ಳುವುದರಿಂದ ಮನುಷ್ಯನು ಪರಲೋಕವನ್ನು ನೆನಪಿಸಿಕೊಳ್ಳುತ್ತಾನೆ, ಮತ್ತು ಅವನ ಹೃದಯದಲ್ಲಿರುವ ಇಹಲೋಕ ಸುಖಗಳ – ವಿಶೇಷವಾಗಿ ನಿಷಿದ್ಧವಾದವುಗಳ – ಪ್ರೀತಿಯು ನಾಶವಾಗುತ್ತದೆ.