عَنْ أَبِي هُرَيْرَةَ رضي الله عنه قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«إِنَّ اللهَ يَرْضَى لَكُمْ ثَلَاثًا، وَيَكْرَهُ لَكُمْ ثَلَاثًا، فَيَرْضَى لَكُمْ: أَنْ تَعْبُدُوهُ، وَلَا تُشْرِكُوا بِهِ شَيْئًا، وَأَنْ تَعْتَصِمُوا بِحَبْلِ اللهِ جَمِيعًا وَلَا تَفَرَّقُوا، وَيَكْرَهُ لَكُمْ: قِيلَ وَقَالَ، وَكَثْرَةَ السُّؤَالِ، وَإِضَاعَةِ الْمَالِ».
[صحيح] - [رواه مسلم] - [صحيح مسلم: 1715]
المزيــد ...
ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಖಂಡಿತವಾಗಿಯೂ ಅಲ್ಲಾಹು ನಿಮಗೆ ಮೂರು ವಿಷಯಗಳನ್ನು ಇಷ್ಟಪಡುತ್ತಾನೆ ಮತ್ತು ನಿಮಗೆ ಮೂರು ವಿಷಯಗಳನ್ನು ದ್ವೇಷಿಸುತ್ತಾನೆ. ಅವನು ನಿಮಗೆ ಇಷ್ಟಪಡುವ ವಿಷಯಗಳೆಂದರೆ: ನೀವು ಅವನನ್ನು (ಮಾತ್ರ) ಆರಾಧಿಸುವುದು ಹಾಗೂ ಅವನೊಂದಿಗೆ ಯಾವುದನ್ನೂ ಸಹಭಾಗಿಯಾಗಿ ಮಾಡದಿರುವುದು, ನೀವೆಲ್ಲರೂ ಒಗ್ಗೂಡಿ ಅಲ್ಲಾಹನ ಹಗ್ಗವನ್ನು (ಧರ್ಮವನ್ನು) ಗಟ್ಟಿಯಾಗಿ ಹಿಡಿದುಕೊಳ್ಳುವುದು ಮತ್ತು ನೀವು ಭಿನ್ನರಾಗದಿರುವುದು. ಅವನು ನಿಮಗೆ ದ್ವೇಷಿಸುವ ವಿಷಯಗಳೆಂದರೆ: 'ಹೀಗೆ ಹೇಳಲಾಯಿತು ಹಾಗೆ ಹೇಳಲಾಯಿತು' ಎಂಬ ಅನಗತ್ಯ ಮಾತುಗಳನ್ನು ಹೇಳುವುದು, ಅತಿಯಾದ ಪ್ರಶ್ನೆಗಳನ್ನು ಕೇಳುವುದು, ಮತ್ತು ಸಂಪತ್ತನ್ನು ವ್ಯರ್ಥ ಮಾಡುವುದು".
[صحيح] - [رواه مسلم] - [صحيح مسلم - 1715]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಅಲ್ಲಾಹು ತನ್ನ ದಾಸರಲ್ಲಿ ಮೂರು ಗುಣಗಳನ್ನು ಪ್ರೀತಿಸುತ್ತಾನೆ ಮತ್ತು ಮೂರು ಗುಣಗಳನ್ನು ದ್ವೇಷಿಸುತ್ತಾನೆ. ಅವನು ಅವರಲ್ಲಿ ಪ್ರೀತಿಸುವುದೇನೆಂದರೆ: ಅವರು ಅವನ ಏಕತ್ವವನ್ನು (ತೌಹೀದ್) ಪಾಲಿಸುವುದು ಮತ್ತು ಅವನೊಂದಿಗೆ ಯಾವುದನ್ನೂ ಸಹಭಾಗಿಯಾಗಿ ಮಾಡದಿರುವುದು, ಅಲ್ಲಾಹನ ಕರಾರು, ಕುರ್‌ಆನ್ ಮತ್ತು ಅವನ ಪ್ರವಾದಿಯ ಸುನ್ನತ್‌ಗೆ ಎಲ್ಲರೂ ಒಗ್ಗೂಡಿ ಬದ್ಧರಾಗಿರುವುದು, ಮತ್ತು ಮುಸ್ಲಿಂ ಸಮುದಾಯದಿಂದ (ಜಮಾಅತ್ ನಿಂದ) ಬೇರ್ಪಡದಿರುವುದು. ಅವನು ಅವರಿಗೆ ದ್ವೇಷಿಸುವುದೇನೆಂದರೆ: ವ್ಯರ್ಥ ಮಾತುಗಳನ್ನು ಹೇಳುವುದು ಮತ್ತು ತಮಗೆ ಸಂಬಂಧಿಸದ ವಿಷಯಗಳಲ್ಲಿ ಅನಗತ್ಯವಾಗಿ ಮಾತನಾಡುವುದು, ಸಂಭವಿಸದ ವಿಷಯಗಳ ಬಗ್ಗೆ (ಊಹಾತ್ಮಕ) ಪ್ರಶ್ನೆಗಳನ್ನು ಕೇಳುವುದು, ಅಥವಾ ಜನರಲ್ಲಿ ಅವರ ಸಂಪತ್ತನ್ನು ಮತ್ತು ಅವರ ಕೈಯಲ್ಲಿರುವುದನ್ನು ಕೇಳುವುದು (ಯಾಚಿಸುವುದು) ಮತ್ತು ಅಗತ್ಯವಿಲ್ಲದಿದ್ದರೂ ಪ್ರಶ್ನೆಗಳನ್ನು ಕೇಳುವುದು, ಹಾಗೂ ಸಂಪತ್ತನ್ನು ವ್ಯರ್ಥ ಮಾಡುವುದು, ಅದನ್ನು ಧರ್ಮವು ಅನುಮೋದಿಸದ ಮಾರ್ಗಗಳಲ್ಲಿ ಖರ್ಚು ಮಾಡುವುದು ಮತ್ತು ಅದನ್ನು ನಾಶಕ್ಕೆ ಒಡ್ಡುವುದು.