ಉಪವರ್ಗಗಳು

ಹದೀಸ್‌ಗಳ ಪಟ್ಟಿ

ಯಹೂದಿಗಳು ಮತ್ತು ಕ್ರೈಸ್ತರ ಮೇಲೆ ಅಲ್ಲಾಹನ ಶಾಪವಿರಲಿ. ಏಕೆಂದರೆ, ಅವರು ತಮ್ಮ ಪ್ರವಾದಿಗಳ ಸಮಾಧಿಗಳನ್ನು ಆರಾಧನಾ ಸ್ಥಳಗಳನ್ನಾಗಿ ಮಾಡಿಕೊಂಡರು
عربي ಆಂಗ್ಲ ಉರ್ದು
ನಾನು ಸಹಭಾಗಿಗಳ ಅಗತ್ಯದಿಂದ ಸಂಪೂರ್ಣ ಮುಕ್ತನಾಗಿರುವವನು. ಯಾರು ಒಂದು ಕರ್ಮವನ್ನು ಮಾಡಿ ಅದರಲ್ಲಿ ನನ್ನೊಂದಿಗೆ ಇತರರನ್ನು ಸಹಭಾಗಿಯಾಗಿ ಮಾಡುತ್ತಾನೋ, ನಾನು ಅವನನ್ನು ಮತ್ತು ಅವನ ಸಹಭಾಗಿತ್ವವನ್ನು ತೊರೆದು ಬಿಡುವೆನು
عربي ಆಂಗ್ಲ ಉರ್ದು
ನಿಮ್ಮ ಪೈಕಿ ಯಾರನ್ನಾದರೂ ಆಪ್ತಮಿತ್ರನನ್ನಾಗಿ ಮಾಡಿಕೊಳ್ಳುವುದರಿಂದ ನಾನು ಅಲ್ಲಾಹನ ಮುಂದೆ ಸಂಪೂರ್ಣ ವಿಮುಕ್ತನಾಗಿದ್ದೇನೆ. ಏಕೆಂದರೆ ಸರ್ವಶಕ್ತನಾದ ಅಲ್ಲಾಹು ಇಬ್ರಾಹೀಮರನ್ನು ಆಪ್ತಮಿತ್ರನನ್ನಾಗಿ ಮಾಡಿಕೊಂಡಂತೆ ನನ್ನನ್ನು ಕೂಡ ಅವನ ಆಪ್ತಮಿತ್ರನನ್ನಾಗಿ ಮಾಡಿಕೊಂಡಿದ್ದಾನೆ
عربي ಆಂಗ್ಲ ಉರ್ದು
“ಕ್ರೈಸ್ತರು ಮರ್ಯಮರ ಮಗನನ್ನು ಮಿತಿಮೀರಿ ಪ್ರಶಂಸಿಸಿದಂತೆ ನೀವು ನನ್ನನ್ನು ಮಿತಿಮೀರಿ ಪ್ರಶಂಸಿಸಬೇಡಿ. ಏಕೆಂದರೆ ನಾನು ಅಲ್ಲಾಹನ ಒಬ್ಬ ದಾಸ ಮಾತ್ರ. ಆದ್ದರಿಂದ ನೀವು ಅಲ್ಲಾಹನ ದಾಸ ಮತ್ತು ಸಂದೇಶವಾಹಕ ಎಂದು ಹೇಳಿರಿ.”
عربي ಆಂಗ್ಲ ಉರ್ದು
ಪುನರುತ್ಥಾನ ದಿನ ಜನರ ಪೈಕಿ ನನ್ನ ಶಿಫಾರಸ್ಸನ್ನು ಪಡೆಯುವ ಅತ್ಯಂತ ಸೌಭಾಗ್ಯವಂತನು ಯಾರೆಂದರೆ, ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯರಿಲ್ಲ ಎಂದು ತನ್ನ ಹೃದಯ ಮತ್ತು ಮನಸ್ಸಿನಿಂದ ನಿಷ್ಕಳಂಕವಾಗಿ ಹೇಳಿದವನು.”
عربي ಆಂಗ್ಲ ಉರ್ದು
ಯಾರು ಅಲ್ಲಾಹನ ಹೊರತಾಗಿ ಬೇರೆಯವರನ್ನು ಪ್ರಾರ್ಥಿಸುವ ಸ್ಥಿತಿಯಲ್ಲಿ ಸಾವನ್ನಪ್ಪುತ್ತಾರೋ ಅವರು ನರಕವನ್ನು ಪ್ರವೇಶಿಸುವರು
عربي ಆಂಗ್ಲ ಉರ್ದು
“ತೀವ್ರವಾದಿಗಳು ನಾಶವಾದರು
عربي ಆಂಗ್ಲ ಉರ್ದು
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನನ್ನು ಕಳುಹಿಸಿದ ಅದೇ ಕೆಲಸಕ್ಕಾಗಿ ನಾನು ತಮ್ಮನ್ನು ಕಳುಹಿಸಲೇ? ತಾವು ಒಂದೇ ಒಂದು ಪ್ರತಿಮೆಯನ್ನು ಅಳಿಸದೆ ಬಿಡಬಾರದು ಮತ್ತು ಎತ್ತರಿಸಲ್ಪಟ್ಟ ಒಂದೇ ಒಂದು ಸಮಾಧಿಯನ್ನು ನೆಲಸಮ ಮಾಡದೆ ಬಿಡಬಾರದು
عربي ಆಂಗ್ಲ ಉರ್ದು
ಒಂಟೆಯ ಕೊರಳಲ್ಲಿ ಬಿಲ್ಲಿನ ತಂತಿಯಿಂದ ಮಾಡಿದ ಹಾರ ಅಥವಾ ಬೇರೆ ಯಾವುದೇ ಹಾರವಿದ್ದರೂ ಅದನ್ನು ಕತ್ತರಿಸದೆ ಬಿಟ್ಟು ಬಿಡಬೇಡ
عربي ಆಂಗ್ಲ ಉರ್ದು
ಯಾರು ಅಲ್ಲಾಹನ ಹೊರತು ಆರಾಧಿಸಲು ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂದು ಹೇಳುತ್ತಾರೋ ಮತ್ತು ಅಲ್ಲಾಹನ ಹೊರತಾಗಿ ಆರಾಧಿಸಲಾಗುವ ಎಲ್ಲವನ್ನೂ ನಿಷೇಧಿಸುತ್ತಾರೋ, ಅವರ ಆಸ್ತಿ ಮತ್ತು ಪ್ರಾಣವು ಪವಿತ್ರವಾಗಿವೆ. ಅವರನ್ನು ವಿಚಾರಣೆ ಮಾಡುವ ಹೊಣೆ ಅಲ್ಲಾಹನದ್ದಾಗಿದೆ
عربي ಆಂಗ್ಲ ಉರ್ದು
ಅವರು ಹೇಳಿದ ಆ ಮಾತು ಮಾತ್ರ ಸತ್ಯವಾಗಿದೆ. ಜಿನ್ನ್‌ಗಳು ಆ ಮಾತನ್ನು (ಆಕಾಶದಿಂದ) ಕಸಿದುಕೊಂಡು ಅವರ ಗೆಳೆಯರ (ಜ್ಯೋತಿಷಿಗಳ) ಕಿವಿಯಲ್ಲಿ ಕೋಳಿ ಕುಕ್ಕುವಂತೆ ಸದ್ದುಮಾಡುತ್ತಾ ಪಿಸುಗುಡುತ್ತಾರೆ. ಅವರು (ಜ್ಯೋತಿಷಿಗಳು) ಅದಕ್ಕೆ ನೂರಕ್ಕಿಂತಲೂ ಹೆಚ್ಚು ಸುಳ್ಳುಗಳನ್ನು ಬೆರೆಸುತ್ತಾರೆ
عربي ಆಂಗ್ಲ ಉರ್ದು
ಸಮಾಧಿಗಳ ಮೇಲೆ ಕೂರಬೇಡಿ ಮತ್ತು ಅವುಗಳ ಕಡೆಗೆ ನಮಾಝ್ ಮಾಡಬೇಡಿ
عربي ಆಂಗ್ಲ ಉರ್ದು
ಅವರು ಎಂತಹ ಜನರೆಂದರೆ, ಅವರಲ್ಲಿ ಒಬ್ಬ ನೀತಿವಂತ ದಾಸ ಅಥವಾ ಒಬ್ಬ ನೀತಿವಂತ ವ್ಯಕ್ತಿ ಮರಣಹೊಂದಿದರೆ, ಅವರು ಅವನ ಸಮಾಧಿಯ ಮೇಲೆ ಆರಾಧನಾಲಯವನ್ನು ನಿರ್ಮಿಸುತ್ತಿದ್ದರು
عربي ಆಂಗ್ಲ ಉರ್ದು
ಅಲ್ಲಾಹನನ್ನು ಮಾತ್ರ ಆರಾಧಿಸುವುದು ಹಾಗೂ ಅವನೊಂದಿಗೆ ಏನನ್ನೂ ಸಹಭಾಗಿತ್ವ (ಶಿರ್ಕ್) ಮಾಡದಿರುವುದು ದಾಸರ ಮೇಲಿರುವ ಅಲ್ಲಾಹನ ಹಕ್ಕಾಗಿದೆ. ತನ್ನೊಂದಿಗೆ ಏನನ್ನೂ ಸಹಭಾಗಿತ್ವ (ಶಿರ್ಕ್) ಮಾಡದವರನ್ನು ಶಿಕ್ಷಿಸದಿರುವುದು ಅಲ್ಲಾಹನ ಮೇಲಿರುವ ದಾಸರ ಹಕ್ಕಾಗಿದೆ
عربي ಆಂಗ್ಲ ಉರ್ದು
ಅಲ್ಲಾಹನೊಡನೆ ಸಹಭಾಗಿತ್ವ (ಶಿರ್ಕ್) ಮಾಡದ ಸ್ಥಿತಿಯಲ್ಲಿ ನಿಧನರಾಗುವವರು ಸ್ವರ್ಗವನ್ನು ಪ್ರವೇಶಿಸುತ್ತಾರೆ; ಮತ್ತು ಅಲ್ಲಾಹನೊಡನೆ ಸಹಭಾಗಿತ್ವ ಮಾಡಿದ ಸ್ಥಿತಿಯಲ್ಲಿ ನಿಧನರಾಗುವವರು ನರಕವನ್ನು ಪ್ರವೇಶಿಸುತ್ತಾರೆ
عربي ಆಂಗ್ಲ ಉರ್ದು
ನಿಶ್ಚಯವಾಗಿಯೂ ನಿಮ್ಮ ತಂದೆಯರ ಮೇಲೆ ಆಣೆ ಮಾಡುವುದನ್ನು ಸರ್ವಶಕ್ತನಾದ ಅಲ್ಲಾಹು ನಿಮಗೆ ವಿರೋಧಿಸುತ್ತಾನೆ
عربي ಆಂಗ್ಲ ಉರ್ದು
ಅಲ್ಲಾಹು ಇಚ್ಛಿಸಿದ್ದು ಮತ್ತು ಇಂತಿಂತಹವನು ಇಚ್ಛಿಸಿದ್ದು ಎಂದು ಹೇಳಬೇಡಿ. ಬದಲಿಗೆ, ಅಲ್ಲಾಹು ಇಚ್ಛಿಸಿದ್ದು ನಂತರ ಇಂತಿಂತಹವನು ಇಚ್ಛಿಸಿದ್ದು ಎಂದು ಹೇಳಿರಿ
عربي ಆಂಗ್ಲ ಉರ್ದು
ಅದ್ವಾ (ಅಂಟುರೋಗ) ಇಲ್ಲ ಮತ್ತು ತಿಯರ (ಅಪಶಕುನ) ಇಲ್ಲ. ಆದರೆ ಫಅಲ್ (ಶುಭಶಕುನ) ನನಗಿಷ್ಟವಾಗಿದೆ." ಅವರೊಡನೆ ಕೇಳಲಾಯಿತು: "ಶುಭಶಕುನ ಎಂದರೇನು?" ಅವರು ಉತ್ತರಿಸಿದರು: "ಒಳ್ಳೆಯ ಮಾತು
عربي ಆಂಗ್ಲ ಉರ್ದು
ಯಾವುದರ ಬಗ್ಗೆ ನಾವು ನಿಮಗೆ ನಿಷ್ಠೆಯ ಪ್ರತಿಜ್ಞೆ ಮಾಡಬೇಕು?" ಅವರು ಉತ್ತರಿಸಿದರು: "ನೀವು ಅಲ್ಲಾಹನನ್ನು ಮಾತ್ರ ಆರಾಧಿಸುತ್ತೀರಿ ಮತ್ತು ಅವನೊಂದಿಗೆ ಏನನ್ನೂ ಸಹಭಾಗಿಯಾಗಿ ಮಾಡುವುದಿಲ್ಲ, ನೀವು ಐದು ವೇಳೆಯ ನಮಾಝ್‌ಗಳನ್ನು ನಿರ್ವಹಿಸುತ್ತೀರಿ, ನೀವು ಅನುಸರಿಸುತ್ತೀರಿ, — ಮತ್ತು ಅವರು ರಹಸ್ಯವಾಗಿ ಹೇಳಿದರು — ಜನರಲ್ಲಿ ಏನನ್ನೂ ಬೇಡುವುದಿಲ್ಲ ಎಂದು ನಿಷ್ಠೆಯ ಪ್ರತಿಜ್ಞೆ ಮಾಡಬೇಕು
عربي ಆಂಗ್ಲ ಉರ್ದು
ನನ್ನ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ನಿಶ್ಚಯವಾಗಿಯೂ ನೀವು ನಿಮಗಿಂತ ಮೊದಲಿನವರ ಚರ್ಯೆಗಳನ್ನು ಹಿಂಬಾಲಿಸುವಿರಿ
عربي ಆಂಗ್ಲ ಉರ್ದು
ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಅವರೊಡನೆ ಕೆಲವು ವಿಷಯಗಳ ಬಗ್ಗೆ ಮಾತನಾಡಿದರು. ಅವರು ಹೇಳಿದರು: "ಅಲ್ಲಾಹು ಮತ್ತು ತಾವು ಇಚ್ಛಿಸಿದ್ದು." ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಏನು ನೀವು ನನ್ನನ್ನು ಅಲ್ಲಾಹನಿಗೆ ಸಮಾನಗೊಳಿಸಿದ್ದೀರಾ? ಅಲ್ಲಾಹು ಮಾತ್ರ ಇಚ್ಛಿಸಿದ್ದು ಎಂದು ಹೇಳಿರಿ
عربي ಆಂಗ್ಲ ಉರ್ದು
ತಾಯಿತ ಕಟ್ಟಿದವನು ಶಿರ್ಕ್ (ದೇವ ಸಹಭಾಗಿತ್ವ) ಮಾಡಿದನು
عربي ಆಂಗ್ಲ ಉರ್ದು