عَنِ ابْنِ عَبَّاسٍ رضي الله عنهما:
أَنَّ رَجُلًا أَتَى النَّبِيَّ صَلَّى اللهُ عَلَيْهِ وَسَلَّمَ، فَكَلَّمَهُ فِي بَعْضِ الْأَمْرِ، فَقَالَ: مَا شَاءَ اللهُ وَشِئْتَ، فَقَالَ النَّبِيُّ صَلَّى اللهُ عَلَيْهِ وَسَلَّمَ: «أَجَعَلْتَنِي لِلَّهِ عَدْلًا؟ قُلْ: مَا شَاءَ اللهُ وَحْدَهُ».
[إسناده حسن] - [رواه ابن ماجه والنسائي في الكبرى وأحمد] - [السنن الكبرى للنسائي: 10759]
المزيــد ...
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ.
ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಅವರೊಡನೆ ಕೆಲವು ವಿಷಯಗಳ ಬಗ್ಗೆ ಮಾತನಾಡಿದರು. ಅವರು ಹೇಳಿದರು: "ಅಲ್ಲಾಹು ಮತ್ತು ತಾವು ಇಚ್ಛಿಸಿದ್ದು." ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಏನು ನೀವು ನನ್ನನ್ನು ಅಲ್ಲಾಹನಿಗೆ ಸಮಾನಗೊಳಿಸಿದ್ದೀರಾ? ಅಲ್ಲಾಹು ಮಾತ್ರ ಇಚ್ಛಿಸಿದ್ದು ಎಂದು ಹೇಳಿರಿ."
[إسناده حسن] - [رواه ابن ماجه والنسائي في الكبرى وأحمد] - [السنن الكبرى للنسائي - 10759]
ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಯಾವುದೋ ವಿಷಯದ ಬಗ್ಗೆ ಮಾತನಾಡಿದರು. ನಂತರ ಹೇಳಿದರು: " "ಅಲ್ಲಾಹು ಮತ್ತು ತಾವು ಇಚ್ಛಿಸಿದ್ದು." ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆ ಮಾತಿಗೆ ಆಕ್ಷೇಪವೆತ್ತಿದರು. 'ಮತ್ತು' ಎಂಬ ಪದದ ಮೂಲಕ ಸೃಷ್ಟಿಗಳ ಇಚ್ಛೆ ಹಾಗೂ ಅಲ್ಲಾಹನ ಇಚ್ಛೆಯನ್ನು ಸೇರಿಸಿ ಹೇಳುವುದು ಸಣ್ಣ ಶಿರ್ಕ್ (ದೇವ ಸಹಭಾಗಿತ್ವ) ಆಗಿದ್ದು, ಮುಸಲ್ಮಾನನು ಆ ಮಾತನ್ನು ಹೇಳಬಾರದೆಂದು ತಿಳಿಸಿದರು. ನಂತರ, "ಅಲ್ಲಾಹು ಮಾತ್ರ ಇಚ್ಛಿಸಿದ್ದು" ಎಂಬ ಸತ್ಯವಾದ ಮಾತಿನ ಕಡೆಗೆ ಮಾರ್ಗದರ್ಶನ ಮಾಡಿದರು. ಇಚ್ಛಿಸುವ ವಿಷಯದಲ್ಲಿ ಅಲ್ಲಾಹು ಏಕಾಂಗಿಯಾಗಿದ್ದು, ಇತರ ಯಾರ ಇಚ್ಛೆಯನ್ನು ಅವನ ಇಚ್ಛೆಯೊಂದಿಗೆ ಸೇರಿಸಬಾರದು.