عَنْ أَبِي وَاقِدٍ اللَّيْثِيِّ رضي الله عنه:
أَنَّ رَسُولَ اللهِ صَلَّى اللَّهُ عَلَيْهِ وَسَلَّمَ لَمَّا خَرَجَ إِلَى حُنَيْنٍ مَرَّ بِشَجَرَةٍ لِلْمُشْرِكِينَ يُقَالُ لَهَا: ذَاتُ أَنْوَاطٍ يُعَلِّقُونَ عَلَيْهَا أَسْلِحَتَهُمْ، فَقَالُوا: يَا رَسُولَ اللهِ، اجْعَلْ لَنَا ذَاتَ أَنْوَاطٍ كَمَا لَهُمْ ذَاتُ أَنْوَاطٍ، فَقَالَ النَّبِيُّ صَلَّى اللَّهُ عَلَيْهِ وَسَلَّمَ: «سُبْحَانَ اللهِ! هَذَا كَمَا قَالَ قَوْمُ مُوسَى {اجْعَلْ لَنَا إِلَهًا كَمَا لَهُمْ آلِهَةٌ} [الأعراف: 138] وَالَّذِي نَفْسِي بِيَدِهِ لَتَرْكَبُنَّ سُنَّةَ مَنْ كَانَ قَبْلَكُمْ».
[صحيح] - [رواه الترمذي وأحمد] - [سنن الترمذي: 2180]
المزيــد ...
ಅಬೂ ವಾಕಿದ್ ಲೈಸಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ.
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹುನೈನ್ ಯುದ್ಧಕ್ಕೆ ಹೊರಟಾಗ, ಬಹುದೇವವಿಶ್ವಾಸಿಗಳ 'ಝಾತ್ ಅನ್ವಾತ್' ಎಂಬ ಹೆಸರಿನ ಮರದ ಬಳಿಯಿಂದ ಸಾಗಿದರು. ಅವರು ಅದರಲ್ಲಿ ತಮ್ಮ ಆಯುಧಗಳನ್ನು ತೂಗಿಸುತ್ತಿದ್ದರು. ಆಗ ಅವರು (ಸಹಾಬಿಗಳು) ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಅವರಿಗೆ ಒಂದು ‘ಝಾತ್ ಅನ್ವಾತ್’ ಇರುವಂತೆ ನಮಗೂ ಒಂದು ‘ಝಾತ್ ಅನ್ವಾತ್’ ನಿಶ್ಚಯಿಸಿಕೊಡಿ. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ಪರಿಶುದ್ಧನು! ಇದು ಮೂಸಾರ ಜನರು ಹೇಳಿದಂತೆ ಆಗಿದೆ. "ಅವರಿಗೆ ಒಬ್ಬ ದೇವರು ಇರುವಂತೆ ನಮಗೂ ಒಬ್ಬ ದೇವರನ್ನು ನಿಶ್ಚಯಿಸಿಕೊಡು." [ಅಅ್‌ರಾಫ್: 138] ನನ್ನ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ನಿಶ್ಚಯವಾಗಿಯೂ ನೀವು ನಿಮಗಿಂತ ಮೊದಲಿನವರ ಚರ್ಯೆಗಳನ್ನು ಹಿಂಬಾಲಿಸುವಿರಿ."
[صحيح] - [رواه الترمذي وأحمد] - [سنن الترمذي - 2180]
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹುನೈನ್ ಯುದ್ಧಕ್ಕೆ ಹೊರಟರು. ಅದು ಮಕ್ಕಾ ಮತ್ತು ತಾಯಿಫ್‌ನ ಮಧ್ಯದಲ್ಲಿರುವ ಒಂದು ಕಣಿವೆಯಾಗಿದೆ. ಅವರ ಜೊತೆಗೆ ತೀರಾ ಇತ್ತೀಚೆಗೆ ಇಸ್ಲಾಂ ಧರ್ಮ ಸ್ವೀಕರಿಸಿದ ಕೆಲವು ಸಹಾಬಿಗಳಿದ್ದರು. ಅವರು 'ಝಾತ್ ಅನ್ವಾತ್' (ತೂಗಿಸಲ್ಪಡುವ ವಸ್ತುಗಳಿರುವಂತದ್ದು) ಎಂಬ ಹೆಸರಿನ ಮರದ ಬಳಿಯಿಂದ ಸಾಗಿದರು. ಬಹುದೇವವಿಶ್ವಾಸಿಗಳು ಅದನ್ನು ಗೌರವಿಸುತ್ತಿದ್ದರು ಮತ್ತು ಆಶೀರ್ವಾದ ಪಡೆಯಲು ಅದರಲ್ಲಿ ತಮ್ಮ ಆಯುಧಗಳನ್ನು ತೂಗಿಸುತ್ತಿದ್ದರು. ಆಗ, ಇದು ಅನುಮತಿಯಿರುವ ವಿಷಯವೆಂದು ಭಾವಿಸಿ, ಅವರು (ಸಹಾಬಿಗಳು) ಆಶೀರ್ವಾದ ಪಡೆಯುವುದಕ್ಕಾಗಿ ತಮ್ಮ ಆಯುಧಗಳನ್ನು ತೂಗಿಸಲು ತಮಗೂ ಅಂತಹ ಒಂದು ಮರವನ್ನು ನಿಶ್ಚಯಿಸಿಕೊಡಲು ಅಲ್ಲಾಹನ ಸಂದೇಶವಾಹಕರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿನಂತಿಸಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಮಾತಿಗೆ ತಮ್ಮ ಅಸಮ್ಮತಿಯನ್ನು ಸೂಚಿಸುತ್ತಾ ಮತ್ತು ಅಲ್ಲಾಹನನ್ನು ಮಹತ್ವಪಡಿಸುತ್ತಾ ಸುಬ್‌ಹಾನಲ್ಲಾಹ್ (ಅಲ್ಲಾಹು ಪರಿಶುದ್ಧನು) ಎಂದು ಹೇಳಿದರು. ನಂತರ ಅವರು ಹೇಳಿದರು: ನಿಶ್ಚಯವಾಗಿಯೂ, ಈ ಮಾತು ಮೂಸಾರ ಜನರು ಅವರೊಡನೆ ಹೇಳಿದ, "ಅವರಿಗೆ ಒಬ್ಬ ದೇವರು ಇರುವಂತೆ ನಮಗೂ ಒಬ್ಬ ದೇವರನ್ನು ನಿಶ್ಚಯಿಸಿಕೊಡು" ಎಂಬ ಮಾತನ್ನು ಹೋಲುತ್ತದೆ. ಅವರು (ಮೂಸಾರ ಜನರು) ವಿಗ್ರಹಗಳನ್ನು ಪೂಜಿಸುವ ಜನರನ್ನು ಕಂಡಾಗ, ಬಹುದೇವವಿಶ್ವಾಸಿಗಳಿಗೆ ವಿಗ್ರಹಗಳಿರುವಂತೆ ತಮಗೂ ವಿಗ್ರಹಗಳನ್ನು ಮಾಡಿಕೊಡುವಂತೆ ಮೂಸಾರಲ್ಲಿ ವಿನಂತಿಸಿದ್ದರು. ನೀವು ಹೇಳಿದ ಈ ಮಾತು ಅವರ ಮಾರ್ಗವನ್ನು ಹಿಂಬಾಲಿಸುವುದಾಗಿದೆ. ನಂತರ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದರ ಬಗ್ಗೆ ಎಚ್ಚರಿಸುತ್ತಾ, ಈ ಸಮುದಾಯವು ಯಹೂದಿಗಳು ಮತ್ತು ಕ್ರೈಸ್ತರ ಮಾರ್ಗವನ್ನು ಹಿಂಬಾಲಿಸಿ ಅವರು ಮಾಡುವುದೆಲ್ಲವನ್ನೂ ಮಾಡಲಿದೆ ಎಂದು ತಿಳಿಸಿದರು.