عَنْ عَلِيٍّ رضي الله عنه قَالَ: قَالَ لِي رَسُولُ اللهِ صَلَّى اللهُ عَلَيْهِ وَسَلَّمَ:
«قُلِ اللهُمَّ اهْدِنِي وَسَدِّدْنِي، وَاذْكُرْ بِالْهُدَى هِدَايَتَكَ الطَّرِيقَ، وَالسَّدَادِ سَدَادَ السَّهْمِ».
[صحيح] - [رواه مسلم] - [صحيح مسلم: 2725]
المزيــد ...
ಅಲಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನೊಡನೆ ಹೇಳಿದರು:
"ಓ ಅಲ್ಲಾಹ್! ನನಗೆ ಮಾರ್ಗದರ್ಶನ ನೀಡು ಮತ್ತು ನನ್ನನ್ನು ನೇರವಾಗಿಡು. ಮಾರ್ಗದರ್ಶನವನ್ನು ಬೇಡುವಾಗ ನೇರವಾದ ಮಾರ್ಗದಲ್ಲಿ ಮುನ್ನಡೆಸುವಂತೆ ಬೇಡು ಮತ್ತು ನೇರವಾಗಿರುವುದನ್ನು ಬೇಡುವಾಗ ಬಾಣದಷ್ಟು ನೇರವಾಗಿರುವುದನ್ನು ಬೇಡು."
[صحيح] - [رواه مسلم] - [صحيح مسلم - 2725]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲೀ ಬಿನ್ ಅಬೂ ತಾಲಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಗೆ ಈ ಪ್ರಾರ್ಥನೆಯನ್ನು ಪ್ರಾರ್ಥಿಸುವಂತೆ ಆದೇಶಿಸುತ್ತಾರೆ: "ಓ ಅಲ್ಲಾಹ್! ನನಗೆ ಮಾರ್ಗದರ್ಶನ ನೀಡು" ಅಂದರೆ, ನನಗೆ ದಾರಿ ತೋರಿಸು "ಮತ್ತು ನನ್ನನ್ನು ನೇರವಾಗಿಡು" ಅಂದರೆ, ನನ್ನ ಎಲ್ಲಾ ಕೆಲಸ-ಕಾರ್ಯಗಳಲ್ಲಿ ನೇರವಾಗಿ ನಿಲ್ಲುವ ಸೌಭಾಗ್ಯವನ್ನು ಕರುಣಿಸು ಮತ್ತು ನನ್ನನ್ನು ಅವುಗಳಲ್ಲಿ ನೇರವಾಗಿ ನೆಲೆಗೊಳಿಸು.
ಮಾರ್ಗದರ್ಶನವನ್ನು ಪಡೆಯುವುದು ಎಂದರೆ, ಸತ್ಯವನ್ನು ಸಂಕ್ಷಿಪ್ತವಾಗಿ ಮತ್ತು ವಿಸ್ತಾರವಾಗಿ ತಿಳಿಯುವುದು ಮತ್ತು ಅದನ್ನು ಬಾಹ್ಯವಾಗಿ ಮತ್ತು ಆಂತರಿಕವಾಗಿ ಅನುಸರಿಸುವ ಸೌಭಾಗ್ಯವನ್ನು ಪಡೆಯುವುದು.
ನೇರವಾಗಿರುವುದು ಎಂದರೆ, ಸತ್ಯದ ಆಧಾರದಲ್ಲಿ ಸರಿಯಾಗಿರುವ ಎಲ್ಲಾ ವಿಷಯಗಳಲ್ಲೂ ಕರುಣಿಸಲಾಗುವ ಸೌಭಾಗ್ಯ ಮತ್ತು ಸ್ಥಿರತೆ. ಅಂದರೆ, ಮಾತು, ಕ್ರಿಯೆ ಮತ್ತು ವಿಶ್ವಾಸದಲ್ಲಿ ನೇರವಾದ ಮಾರ್ಗದಲ್ಲಿರುವುದು.
ಭೌತಿಕ ವಿಷಯಗಳನ್ನು ಅನುಭವದ ಮೂಲಕ ತಿಳಿಯಲು ಸಾಧ್ಯವಾಗುವುದರಿಂದ, ಈ ಪ್ರಾರ್ಥನೆಯನ್ನು ಪ್ರಾರ್ಥಿಸುವಾಗ ನೀವು ಈ ವಿಷಯವನ್ನು ಮನಸ್ಸಿಗೆ ತಂದುಕೊಳ್ಳಬೇಕು. ಅದೇನೆಂದರೆ, ನೀವು ಮಾರ್ಗದರ್ಶನವನ್ನು ಬೇಡುವಾಗ ನೇರವಾದ ಮಾರ್ಗದಲ್ಲಿ ಮುನ್ನಡೆಸುವಂತೆ ಬೇಡಿರಿ. ಪ್ರಯಾಣ ಮಾಡುವವನು ದಾರಿ ಕೇಳುವಂತೆ ನೀವು ಅಲ್ಲಾಹನಲ್ಲಿ ಮಾರ್ಗದರ್ಶನವನ್ನು ಬೇಡಿರಿ. ಏಕೆಂದರೆ, ಅವನು ದಾರಿ ತಪ್ಪದಿರುವುದಕ್ಕಾಗಿ ತನ್ನ ದಾರಿಯಿಂದ ಬಲಕ್ಕೆ ಅಥವಾ ಎಡಕ್ಕೆ ಹೋಗಲು ಬಯಸುವುದಿಲ್ಲ. ಇದರಿಂದ ಅವನು ಸುರಕ್ಷಿತವಾಗಿ ಮತ್ತು ವೇಗವಾಗಿ ತನ್ನ ಗುರಿಯನ್ನು ತಲುಪುತ್ತಾನೆ.
"ನೇರವಾಗಿರುವುದನ್ನು ಬೇಡುವಾಗ ಬಾಣದಂತೆ ನೇರವಾಗಿರುವುದನ್ನು ಬೇಡಿರಿ." ನೀವು ಬಾಣ ಬಿಡುವಾಗ ಅದು ಅದರ ಗುರಿಯನ್ನು ನೇರವಾಗಿ ಮತ್ತು ವೇಗವಾಗಿ ತಲುಪುವುದನ್ನು ನೋಡುತ್ತೀರಿ. ಬಿಲ್ಲುಗಾರನು ಬಾಣ ಬಿಡುವಾಗ ಗುರಿಗೆ ನೇರವಾಗಿಟ್ಟು ಬಾಣ ಬಿಡುತ್ತಾನೆ. ಅದೇ ರೀತಿ, ಅಲ್ಲಾಹನಲ್ಲಿ ನೇರವಾಗಿರುವುದನ್ನು ಬೇಡುವಾಗ ಬಾಣದಂತೆ ನೇರವಾಗಿರುವುದನ್ನು ಬೇಡಿರಿ. ನಿಮ್ಮ ಪ್ರಾರ್ಥನೆಯಲ್ಲಿ ಪರಮೋಚ್ಛ ಗುರಿ ಮತ್ತು ಪರಮೋಚ್ಛ ನೇರದ ಪ್ರಸ್ತಾಪವಿರಲಿ.
ಆದ್ದರಿಂದ, ಅಲ್ಲಾಹನಲ್ಲಿ ನೇರವಾಗಿರುವುದನ್ನು ಬೇಡುವಾಗ, ಬಾಣ ಬಿಡುವಾಗ ನೀವು ಬಳಸುವ ಅದೇ ನೇರವಾದ ವಿಧವನ್ನು ಬೇಡಿಕೊಳ್ಳಿರಿ.