عن عثمان رضي الله عنه عن النبي صلى الله عليه وسلم قال:
«خَيْرُكُمْ مَنْ تَعَلَّمَ الْقُرْآنَ وَعَلَّمَهُ».
[صحيح] - [رواه البخاري] - [صحيح البخاري: 5027]
المزيــد ...
ಉಸ್ಮಾನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಕುರ್‌ಆನ್ ಅನ್ನು ಕಲಿಯುವವರು ಮತ್ತು ಅದನ್ನು ಕಲಿಸುವವರು ನಿಮ್ಮಲ್ಲಿ ಅತ್ಯುತ್ತಮರು."
[صحيح] - [رواه البخاري] - [صحيح البخاري - 5027]
ಪವಿತ್ರ ಕುರ್‌ಆನ್ ಅನ್ನು ಪಠಿಸುವವರು, ಕಂಠಪಾಠ ಮಾಡುವವರು, ಸುಶ್ರಾವ್ಯವಾಗಿ ಪಾರಾಯಣ ಮಾಡುವವರು, ಅದರಿಂದ ಜ್ಞಾನವನ್ನು ಪಡೆಯುವವರು, ಅದರ ವ್ಯಾಖ್ಯಾನವನ್ನು ಕಲಿಯುವವರು ಅದರ ಪ್ರಕಾರ ಜೀವನವನ್ನು ರೂಪಿಸಿಕೊಳ್ಳುವುದರ ಜೊತೆಗೆ ತನ್ನಲ್ಲಿರುವ ಕುರ್‌ಆನಿನ ಜ್ಞಾನವನ್ನು ಇತರರಿಗೆ ಕಲಿಸಿಕೊಡುವವರು ಮುಸಲ್ಮಾನರ ಪೈಕಿ ಅತ್ಯುತ್ತಮರು ಮತ್ತು ಅಲ್ಲಾಹನ ಬಳಿ ಉನ್ನತ ಸ್ಥಾನಮಾನಗಳನ್ನು ಪಡೆಯುವವರು ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುತ್ತಿದ್ದಾರೆ.