عَنْ عَائِشَةَ رضي الله عنها قَالَتْ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«الْمَاهِرُ بِالْقُرْآنِ مَعَ السَّفَرَةِ الْكِرَامِ الْبَرَرَةِ، وَالَّذِي يَقْرَأُ الْقُرْآنَ وَيَتَتَعْتَعُ فِيهِ، وَهُوَ عَلَيْهِ شَاقٌّ، لَهُ أَجْرَانِ».
[صحيح] - [متفق عليه] - [صحيح مسلم: 798]
المزيــد ...
ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಕುರ್‌ಆನ್‌ನಲ್ಲಿ ಪರಿಣಿತನಾದವನು ಗೌರವಾನ್ವಿತ, ವಿಧೇಯ ಬರಹಗಾರರೊಂದಿಗೆ (ದೇವದೂತರು) ಇರುವನು. ಯಾರು ಕುರ್‌ಆನ್ ಓದುವಾಗ ಅದರಲ್ಲಿ ತಡವರಿಸುತ್ತಾನೋ, ಮತ್ತು ಅದು ಅವನಿಗೆ ಕಷ್ಟಕರವಾಗಿದೆಯೋ, ಅವನಿಗೆ ಎರಡು ಪ್ರತಿಫಲಗಳಿವೆ".
[صحيح] - [متفق عليه] - [صحيح مسلم - 798]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಯಾರು ಕುರ್‌ಆನ್ ಓದುತ್ತಾರೋ, ಮತ್ತು ಅವರು ಅದನ್ನು ಚೆನ್ನಾಗಿ ಕಂಠಪಾಠ ಮಾಡಿ ಅದರಲ್ಲಿ ಪ್ರವೀಣರಾಗಿರುತ್ತಾರೋ, ಮತ್ತು ಅದರ ಪಠಣದಲ್ಲಿ ಪರಿಣಿತರಾಗಿರುತ್ತಾರೋ, ಅವರಿಗೆ ಪರಲೋಕದಲ್ಲಿ ಗೌರವಾನ್ವಿತ, ವಿಧೇಯ ಬರಹಗಾರರಾದ ಮಲಕ್‌ಗಳೊಂದಿಗೆ ಸ್ಥಾನಮಾನವಿರುತ್ತದೆ. ಯಾರು ಕುರ್‌ಆನ್ ಓದುತ್ತಾರೋ ಮತ್ತು ತಮ್ಮ ದುರ್ಬಲ ಕಂಠಪಾಠದ ಕಾರಣ ಅದರಲ್ಲಿ ತಡವರಿಸುತ್ತಾರೋ ಮತ್ತು ಹಿಂಜರಿಯುತ್ತಾರೋ; ಆದರೂ ಅವರು ಅದನ್ನು ಅಭ್ಯಸಿಸುತ್ತಾರೋ, ಮತ್ತು ಅದು ಅವರಿಗೆ ತೀವ್ರ ಮತ್ತು ಕಷ್ಟಕರವಾಗಿದೆಯೋ, ಅವರಿಗೆ ಎರಡು ಪ್ರತಿಫಲಗಳಿವೆ. ಒಂದು ಪಠಣಕ್ಕಾಗಿ ಮತ್ತು ಇನ್ನೊಂದು ಕಷ್ಟಕ್ಕಾಗಿ ಮತ್ತು ಪಠಣದಲ್ಲಿನ ಅವರ ಹಿಂಜರಿಕೆಗಾಗಿ.