ಹದೀಸ್‌ಗಳ ಪಟ್ಟಿ

ಈ ಕುರ್‌ಆನಿನ ಬಗ್ಗೆ ನಿಗಾ ವಹಿಸಿರಿ. ಏಕೆಂದರೆ ಮುಹಮ್ಮದರ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ಒಂಟೆಗಳು ಅವುಗಳನ್ನು ಕಟ್ಟಿಹಾಕಲಾದ ಹಗ್ಗಗಳಿಂದ ತಪ್ಪಿಸಿಕೊಳ್ಳುವುದಕ್ಕಿಂತಲೂ ವೇಗವಾಗಿ ಕುರ್‌ಆನ್ ನೆನಪಿನಿಂದ ಮಾಸಿ ಹೋಗುತ್ತದೆ
عربي ಆಂಗ್ಲ ಉರ್ದು
ಕುರ್‌ಆನ್ ಅನ್ನು ಕಲಿಯುವವರು ಮತ್ತು ಅದನ್ನು ಕಲಿಸುವವರು ನಿಮ್ಮಲ್ಲಿ ಅತ್ಯುತ್ತಮರು
عربي ಆಂಗ್ಲ ಉರ್ದು
ಯಾರು ಅಲ್ಲಾಹನ ಗ್ರಂಥದಿಂದ ಒಂದು ಅಕ್ಷರವನ್ನು ಪಠಿಸುತ್ತಾರೋ ಅವರಿಗೆ ಒಂದು ಒಳಿತು ಮಾಡಿದ ಪ್ರತಿಫಲವಿದೆ. ಒಂದು ಒಳಿತು ಅದರ ಹತ್ತು ಪಟ್ಟು ಒಳಿತುಗಳ ಪ್ರತಿಫಲವನ್ನು ಒಳಗೊಂಡಿದೆ
عربي ಆಂಗ್ಲ ಉರ್ದು
ಕುರ್‌ಆನ್ ಪಠಿಸುವ ಸತ್ಯವಿಶ್ವಾಸಿಯನ್ನು ಮಾದಳ ಹಣ್ಣಿಗೆ ಹೋಲಿಸಬಹುದು. ಅದರ ಸುವಾಸನೆ ಆಹ್ಲಾದಕರವಾಗಿದೆ ಮತ್ತು ರುಚಿ ಉತ್ತಮವಾಗಿದೆ. ಕುರ್‌ಆನ್ ಪಠಿಸದ ಸತ್ಯವಿಶ್ವಾಸಿಯನ್ನು ಖರ್ಜೂರಕ್ಕೆ ಹೋಲಿಸಬಹುದು. ಅದಕ್ಕೆ ಸುವಾಸನೆಯಿಲ್ಲ, ಆದರೆ ಅದರ ರುಚಿ ಸಿಹಿಯಾಗಿದೆ
عربي ಆಂಗ್ಲ ಉರ್ದು
ಕುರ್‌ಆನ್‌ನಲ್ಲಿ ಪರಿಣಿತನಾದವನು ಗೌರವಾನ್ವಿತ, ವಿಧೇಯ ಬರಹಗಾರರೊಂದಿಗೆ (ದೇವದೂತರು) ಇರುವನು. ಯಾರು ಕುರ್‌ಆನ್ ಓದುವಾಗ ಅದರಲ್ಲಿ ತಡವರಿಸುತ್ತಾನೋ, ಮತ್ತು ಅದು ಅವನಿಗೆ ಕಷ್ಟಕರವಾಗಿದೆಯೋ, ಅವನಿಗೆ ಎರಡು ಪ್ರತಿಫಲಗಳಿವೆ
عربي ಆಂಗ್ಲ ಉರ್ದು
ಕುರ್‌ಆನಿನ ವ್ಯಕ್ತಿಯೊಡನೆ ಹೇಳಲಾಗುವುದು: ಪಠಿಸು ಮತ್ತು ಏರುತ್ತಾ ಹೋಗು. ಇಹಲೋಕದಲ್ಲಿ ಸಾವಧಾನದಿಂದ ಪಠಿಸುತ್ತಿದ್ದಂತೆ ಪಠಿಸು. ನೀನು ಪಠಿಸುವ ಕೊನೆಯ ವಚನದ ಬಳಿ ನಿನ್ನ ಪದವಿಯಿದೆ
عربي ಆಂಗ್ಲ ಉರ್ದು