عن أبي موسى الأشعري رضي الله عنه عن النبي صلى الله عليه وسلم قال:
«تَعَاهَدُوا هَذَا الْقُرْآنَ، فَوَالَّذِي نَفْسُ مُحَمَّدٍ بِيَدِهِ لَهُوَ أَشَدُّ تَفَلُّتًا مِنَ الْإِبِلِ فِي عُقُلِهَا».
[صحيح] - [متفق عليه] - [صحيح مسلم: 791]
المزيــد ...
ಅಬೂ ಮೂಸಾ ಅಶ್‌ಅರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಈ ಕುರ್‌ಆನಿನ ಬಗ್ಗೆ ನಿಗಾ ವಹಿಸಿರಿ. ಏಕೆಂದರೆ ಮುಹಮ್ಮದರ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ಒಂಟೆಗಳು ಅವುಗಳನ್ನು ಕಟ್ಟಿಹಾಕಲಾದ ಹಗ್ಗಗಳಿಂದ ತಪ್ಪಿಸಿಕೊಳ್ಳುವುದಕ್ಕಿಂತಲೂ ವೇಗವಾಗಿ ಕುರ್‌ಆನ್ ನೆನಪಿನಿಂದ ಮಾಸಿ ಹೋಗುತ್ತದೆ."
[صحيح] - [متفق عليه] - [صحيح مسلم - 791]
ಕುರ್‌ಆನಿನ ಬಗ್ಗೆ ನಿಗಾ ವಹಿಸಬೇಕೆಂದು ಮತ್ತು ಅದನ್ನು ಕಂಠಪಾಠ ಮಾಡಿದ ನಂತರ ಅದು ಮರೆತು ಹೋಗದಿರಲು ಅದನ್ನು ನಿರಂತರ ಪಠಿಸುತ್ತಿರಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಆದೇಶಿಸುತ್ತಿದ್ದಾರೆ. ನಂತರ ತಮ್ಮ ಮಾತಿಗೆ ಒತ್ತು ಕೊಡುತ್ತಾ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನ ಮೇಲೆ ಆಣೆಮಾಡಿ ಹೇಳುವುದೇನೆಂದರೆ, ತಮ್ಮ ಮುಂಗಾಲಿನ ಮಧ್ಯದಲ್ಲಿ ಹಗ್ಗದಿಂದ ಕಟ್ಟಿ ಹಾಕಲಾಗಿರುವ ಒಂಟೆಗಳು ತಪ್ಪಿಸಿಕೊಳ್ಳುವುದಕ್ಕಿಂತಲೂ ವೇಗವಾಗಿ ಪವಿತ್ರ ಕುರ್‌ಆನ್ ಸ್ಮೃತಿ ಪಟಲದಿಂದ ಮಾಸಿ ಹೋಗುತ್ತದೆ. ಮನುಷ್ಯನು ಅದರ ಬಗ್ಗೆ ನಿಗಾ ವಹಿಸಿದರೆ, ಅದು ಅವನೊಂದಿಗೆ ಇರುತ್ತದೆ. ಆದರೆ, ಅವನು ಅದನ್ನು ನಿರ್ಲಕ್ಷಿಸಿದರೆ, ಅದು ಹೊರಟು ಹೋಗುತ್ತದೆ ಮತ್ತು ಕಳೆದು ಹೋಗುತ್ತದೆ.