عَنْ أَبِي هُرَيْرَةَ رَضِيَ اللهُ عَنْهُ أَنَّ رَسُولَ اللهِ صَلَّى اللهُ عَلَيْهِ وَسَلَّمَ، قَالَ:
«إِذَا جَاءَ رَمَضَانُ فُتِّحَتْ أَبْوَابُ الْجَنَّةِ، وَغُلِّقَتْ أَبْوَابُ النَّارِ، وَصُفِّدَتِ الشَّيَاطِينُ».
[صحيح] - [متفق عليه] - [صحيح مسلم: 1079]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ರಮದಾನ್ ತಿಂಗಳು ಬಂದರೆ, ಸ್ವರ್ಗದ ಬಾಗಿಲುಗಳನ್ನು ತೆರೆಯಲಾಗುತ್ತದೆ, ನರಕದ ಬಾಗಿಲುಗಳನ್ನು ಮುಚ್ಚಲಾಗುತ್ತದೆ ಮತ್ತು ಶೈತಾನರನ್ನು ಸರಪಳಿಗಳಿಂದ ಬಂಧಿಸಲಾಗುತ್ತದೆ."
[صحيح] - [متفق عليه] - [صحيح مسلم - 1079]
ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ರಮದಾನ್ ತಿಂಗಳು ಬಂದರೆ ಮೂರು ವಿಷಯಗಳು ಸಂಭವಿಸುತ್ತವೆ: ಮೊದಲನೆಯದು: ಸ್ವರ್ಗದ ಬಾಗಿಲುಗಳನ್ನು ತೆರೆಯಲಾಗುತ್ತದೆ. ಅವುಗಳಲ್ಲಿ ಯಾವುದೇ ಬಾಗಿಲು ಮುಚ್ಚಿರುವುದಿಲ್ಲ. ಎರಡನೆಯದು: ನರಕದ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಅವುಗಳಲ್ಲಿ ಯಾವುದೇ ಬಾಗಿಲು ತೆರೆದಿರುವುದಿಲ್ಲ. ಮೂರನೆಯದು: ಶೈತಾನರನ್ನು ಮತ್ತು ಬಂಡುಕೋರ ಜಿನ್ನ್‌ಗಳನ್ನು ಸರಪಳಿಗಳಿಂದ ಬಂಧಿಸಲಾಗುತ್ತದೆ. ಆದ್ದರಿಂದ ಅವರು ರಮದಾನ್ ಅಲ್ಲದ ಇತರ ತಿಂಗಳುಗಳಲ್ಲಿ ಮಾಡುತ್ತಿದ್ದಂತಹ ಕೆಡುಕನ್ನು ಈ ತಿಂಗಳಲ್ಲಿ ಮಾಡಲು ಸಾಧ್ಯವಾಗುವುದಿಲ್ಲ. ಇವೆಲ್ಲವೂ ಈ ತಿಂಗಳ ಮಹತ್ವವನ್ನು ಹೆಚ್ಚಿಸುವುದಕ್ಕಾಗಿದೆ. ಹಾಗೆಯೇ ಪ್ರಾರ್ಥನೆ, ದಾನ, ಧಿಕ್ರ್ (ಅಲ್ಲಾಹುವಿನ ಸ್ಮರಣೆ), ಕುರ್‌ಆನ್ ಪಠಣ ಮತ್ತು ಇತರ ಸತ್ಕರ್ಮಗಳನ್ನು ಹೆಚ್ಚು ಹೆಚ್ಚಾಗಿ ನಿರ್ವಹಿಸಲು ಹಾಗೂ ಪಾಪಗಳು ಮತ್ತು ದುಷ್ಕೃತ್ಯಗಳಿಂದ ದೂರವಿರಲು ಪ್ರೋತ್ಸಾಹವಾಗಿದೆ.