+ -

عَنْ ‌سَهْلٍ رَضِيَ اللهُ عَنْهُ عَنِ النَّبِيِّ صَلَّى اللهُ عَلَيْهِ وَسَلَّمَ قَالَ:
«إِنَّ فِي الْجَنَّةِ بَابًا يُقَالُ لَهُ الرَّيَّانُ، يَدْخُلُ مِنْهُ الصَّائِمُونَ يَوْمَ الْقِيَامَةِ، لَا يَدْخُلُ مِنْهُ أَحَدٌ غَيْرُهُمْ، يُقَالُ: أَيْنَ الصَّائِمُونَ، فَيَقُومُونَ لَا يَدْخُلُ مِنْهُ أَحَدٌ غَيْرُهُمْ، فَإِذَا دَخَلُوا أُغْلِقَ، فَلَمْ يَدْخُلْ مِنْهُ أَحَدٌ».

[صحيح] - [متفق عليه] - [صحيح البخاري: 1896]
المزيــد ...

ಸಹ್ಲ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಖಂಡಿತವಾಗಿಯೂ ಸ್ವರ್ಗದಲ್ಲಿ 'ರಯ್ಯಾನ್' ಎಂಬ ಒಂದು ಬಾಗಿಲಿದೆ. ಉಪವಾಸ ಆಚರಿಸಿದವರು ಪುನರುತ್ಥಾನ ದಿನದಂದು ಅದರ ಮೂಲಕ ಪ್ರವೇಶಿಸುವರು. ಅವರಲ್ಲದೆ ಬೇರೆ ಯಾರೂ ಅದರ ಮೂಲಕ ಪ್ರವೇಶಿಸುವುದಿಲ್ಲ. (ಆ ದಿನ) 'ಉಪವಾಸಿಗರು ಎಲ್ಲಿ?' ಎಂದು ಕರೆಯಲಾಗುವುದು. ಆಗ ಅವರು ಎದ್ದು ನಿಲ್ಲುವರು. ಅವರಲ್ಲದೆ ಬೇರೆ ಯಾರೂ ಅದರ ಮೂಲಕ ಪ್ರವೇಶಿಸುವುದಿಲ್ಲ. ಅವರೆಲ್ಲರೂ ಪ್ರವೇಶಿಸಿದ ನಂತರ ಅದನ್ನು ಮುಚ್ಚಲಾಗುವುದು. ನಂತರ ಬೇರೆ ಯಾರೂ ಅದರ ಮೂಲಕ ಪ್ರವೇಶಿಸುವುದಿಲ್ಲ".

[صحيح] - [متفق عليه] - [صحيح البخاري - 1896]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಸ್ವರ್ಗದ ಬಾಗಿಲುಗಳಲ್ಲಿ ಒಂದು ಬಾಗಿಲನ್ನು 'ಬಾಬು ರ್ರಯ್ಯಾನ್' ಎಂದು ಕರೆಯಲಾಗುತ್ತದೆ. ಉಪವಾಸ ಆಚರಿಸಿದವರು ಪುನರುತ್ಥಾನ ದಿನದಂದು ಅದರ ಮೂಲಕ ಪ್ರವೇಶಿಸುವರು, ಅವರಲ್ಲದೆ ಬೇರೆ ಯಾರೂ ಅದರ ಮೂಲಕ ಪ್ರವೇಶಿಸುವುದಿಲ್ಲ. 'ಉಪವಾಸಿಗರು ಎಲ್ಲಿ?' ಎಂದು ಕರೆಯಲಾಗುವುದು. ಆಗ ಅವರು ಎದ್ದು ನಿಂತು ಪ್ರವೇಶಿಸುವರು. ಅವರಲ್ಲದೆ ಬೇರೆ ಯಾರೂ ಅದರ ಮೂಲಕ ಪ್ರವೇಶಿಸುವುದಿಲ್ಲ. ಅವರಲ್ಲಿ ಕೊನೆಯವರು ಪ್ರವೇಶಿಸಿದ ನಂತರ ಅದನ್ನು ಮುಚ್ಚಲಾಗುವುದು. ನಂತರ ಯಾರೂ ಅದರ ಮೂಲಕ ಪ್ರವೇಶಿಸುವುದಿಲ್ಲ.

ಹದೀಸಿನ ಪ್ರಯೋಜನಗಳು

  1. ಇಮಾಮ್ ನವವಿ ಹೇಳುತ್ತಾರೆ: "ಈ ಹದೀಸ್‌ನಲ್ಲಿ ಉಪವಾಸದ ಶ್ರೇಷ್ಠತೆಯನ್ನು ಮತ್ತು ಉಪವಾಸಿಗರ ಗೌರವವನ್ನು ತಿಳಿಸಲಾಗಿದೆ."
  2. ಅಲ್ಲಾಹು ಉಪವಾಸಿಗರಿಗಾಗಿ ಸ್ವರ್ಗದ ಎಂಟು ಬಾಗಿಲುಗಳಲ್ಲಿ ಒಂದು ಬಾಗಿಲನ್ನು ವಿಶೇಷವಾಗಿ ಮೀಸಲಿಟ್ಟಿದ್ದಾನೆ. ಅವರು ಪ್ರವೇಶಿಸಿದ ನಂತರ ಅದನ್ನು ಮುಚ್ಚಲಾಗುತ್ತದೆ.
  3. ಸ್ವರ್ಗಕ್ಕೆ ಬಾಗಿಲುಗಳಿವೆ ಎಂದು ವಿವರಿಸಲಾಗಿದೆ.
  4. ಸಿಂದಿ ಹೇಳುತ್ತಾರೆ: "ಅವರ ಮಾತು: 'ಉಪವಾಸಿಗರು ಎಲ್ಲಿ?'. ಇದರ ಉದ್ದೇಶ ಬಹುಶಃ ಉಪವಾಸವನ್ನು ಹೆಚ್ಚಾಗಿ ಆಚರಿಸುವವರು ಆಗಿರಬಹುದು. ಹೇಗೆ 'ಆದಿಲ್' (ನ್ಯಾಯವಂತ) ಅಥವಾ 'ಝಾಲಿಮ್' (ಅನ್ಯಾಯಗಾರ) ಎಂದು ಆ ಗುಣವನ್ನು ರೂಢಿ ಮಾಡಿಕೊಂಡವರಿಗೆ ಹೇಳಲಾಗುತ್ತದೆಯೋ ಹಾಗೆ. ಒಮ್ಮೆ ಮಾತ್ರ ಮಾಡಿದವರಿಗೆ ಇದು ಅನ್ವಯಿಸುವುದಿಲ್ಲ."
  5. 'ಅರ್-ರಯ್ಯಾನ್' ಅಂದರೆ ದಾಹವನ್ನು ನೀಗಿಸುವವನು. ಏಕೆಂದರೆ ಉಪವಾಸಿಗರು ದಾಹವನ್ನು ಅನುಭವಿಸುತ್ತಾರೆ. ವಿಶೇಷವಾಗಿ ಬೇಸಿಗೆಯ ದೀರ್ಘ, ಬಿಸಿ ದಿನಗಳಲ್ಲಿ. ಆದ್ದರಿಂದ ಅವರಿಗೆ ವಿಶೇಷವಾಗಿರುವ ಹೆಸರನ್ನು (ಬಾಬು ರ್ರಯ್ಯಾನ್) ಈ ಬಾಗಿಲಿಗೆ ನೀಡುವ ಮೂಲಕ ಅವರಿಗೆ ಪ್ರತಿಫಲ ನೀಡಲಾಗುತ್ತದೆ. 'ರಯ್ಯಾನ್' ಎಂದರೆ ಅತ್ಯಧಿಕ 'ರಯ್' (ದಾಹ ನೀಗುವುದು) ದಿಂದ ಬಂದಿದ್ದು, 'ಅತಶ್' (ದಾಹ) ದ ವಿರುದ್ಧ ಪದವಾಗಿದೆ ಎಂದೂ ಹೇಳಲಾಗಿದೆ. ಉಪವಾಸಿಗಳ ದಾಹ ಮತ್ತು ಹಸಿವಿಗೆ ಪ್ರತಿಫಲವಾಗಿ ಅದಕ್ಕೆ ಈ ಹೆಸರಿಡಲಾಗಿದೆ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ الأسامية الأمهرية الهولندية الغوجاراتية الدرية الرومانية المجرية الموري الأوكرانية الجورجية المقدونية الخميرية الماراثية
ಅನುವಾದಗಳನ್ನು ತೋರಿಸಿ
ಇನ್ನಷ್ಟು