ಹದೀಸ್‌ಗಳ ಪಟ್ಟಿ

ಯಾರು ವಿಶ್ವಾಸ ಮತ್ತು ಪ್ರತಿಫಲಾಪೇಕ್ಷೆಯಿಂದ ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುತ್ತಾನೋ, ಅವನಿಗೆ ಅವನ ಹಿಂದಿನ ಪಾಪಗಳನ್ನು ಕ್ಷಮಿಸಲಾಗುವುದು.”
عربي ಆಂಗ್ಲ ಉರ್ದು
ಯಾರು ವಿಶ್ವಾಸ ಮತ್ತು ಪ್ರತಿಫಲಾಪೇಕ್ಷೆಯಿಂದ ಕದರ್‌ನ ರಾತ್ರಿಯಲ್ಲಿ ನಮಾಝ್ ನಿರ್ವಹಿಸುತ್ತಾನೋ, ಅವನಿಗೆ ಅವನ ಹಿಂದಿನ ಪಾಪಗಳನ್ನು ಕ್ಷಮಿಸಲಾಗುವುದು.”
عربي ಆಂಗ್ಲ ಉರ್ದು
ಇಸ್ಲಾಂ ಧರ್ಮವನ್ನು ಐದು (ಸ್ತಂಭಗಳ) ಮೇಲೆ ನಿರ್ಮಿಸಲಾಗಿದೆ
عربي ಆಂಗ್ಲ ಉರ್ದು
ಅಲ್ಲಾಹು ಹೇಳಿದನು: ಆದಮರ ಪುತ್ರ ಮಾಡುವ ಎಲ್ಲಾ ಕರ್ಮಗಳು ಅವನಿಗೇ ಆಗಿವೆ; ಉಪವಾಸದ ಹೊರತು. ಅದು ನನಗಾಗಿದೆ ಮತ್ತು ನಾನೇ ಅದಕ್ಕೆ ಪ್ರತಿಫಲವನ್ನು ನೀಡುತ್ತೇನೆ
عربي ಆಂಗ್ಲ ಉರ್ದು
ನನ್ನ ಗೆಳೆಯ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನಗೆ ಮೂರು ವಿಷಯಗಳ ಉಪದೇಶ ಮಾಡಿದರು: ಪ್ರತೀ ತಿಂಗಳಲ್ಲಿ ಮೂರು ದಿನ ಉಪವಾಸ ಆಚರಿಸುವುದು, ಎರಡು ರಕ್‌ಅತ್ ದುಹಾ ನಮಾಝ್ ನಿರ್ವಹಿಸುವುದು ಮತ್ತು ಮಲಗುವುದಕ್ಕೆ ಮೊದಲು ವಿತ್ರ್ ನಮಾಝ್ ನಿರ್ವಹಿಸುವುದು
عربي ಆಂಗ್ಲ ಉರ್ದು
ನೀವು ಅದನ್ನು (ಚಂದ್ರನನ್ನು) ಕಂಡರೆ ಉಪವಾಸವನ್ನು ಪ್ರಾರಂಭಿಸಿರಿ, ಮತ್ತು ನೀವು ಅದನ್ನು ಕಂಡರೆ ಉಪವಾಸವನ್ನು ನಿಲ್ಲಿಸಿರಿ. ಮೋಡಗಳ ಕಾರಣ ನಿಮಗೆ ಅದನ್ನು ಕಾಣಲಾಗದಿದ್ದರೆ ಮೂವತ್ತು ದಿನಗಳನ್ನು ಪೂರ್ಣಗೊಳಿಸಿರಿ
عربي ಆಂಗ್ಲ ಉರ್ದು
ವಿವಾಹವಾಗುವ ಸಾಮರ್ಥ್ಯವಿರುವವರು ವಿವಾಹವಾಗಬೇಕು. ಏಕೆಂದರೆ, ದೃಷ್ಟಿಯನ್ನು ತಗ್ಗಿಸಲು ಮತ್ತು ಪರಿಶುದ್ಧತೆಯನ್ನು ಕಾಪಾಡಲು ಅದು ಹೆಚ್ಚು ಪರಿಣಾಮಕಾರಿಯಾಗಿದೆ. ವಿವಾಹವಾಗುವ ಸಾಮರ್ಥ್ಯವಿಲ್ಲದವರು ಉಪವಾಸ ಆಚರಿಸಬೇಕು. ಏಕೆಂದರೆ, ಅದು ಅವನಿಗೆ ಗುರಾಣಿಯಾಗಿದೆ
عربي ಆಂಗ್ಲ ಉರ್ದು
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನರಲ್ಲೇ ಅತ್ಯಂತ ಉದಾರಿಯಾಗಿದ್ದರು. ರಮದಾನ್ ತಿಂಗಳಲ್ಲಿ ಜಿಬ್ರೀಲ್ ಅವರನ್ನು ಭೇಟಿಯಾಗುವಾಗ ಅವರು ಹಿಂದೆಂದಿಗಿಂತಲೂ ಹೆಚ್ಚು ಉದಾರಿಯಾಗುತ್ತಿದ್ದರು
عربي ಆಂಗ್ಲ ಉರ್ದು
ನಾನು ಬನೂ ಸಅದ್ ಗೋತ್ರಕ್ಕೆ ಸೇರಿದ ದಿಮಾಮ್ ಬಿನ್ ಸಅಲಬ
عربي ಆಂಗ್ಲ ಉರ್ದು