عَنْ أَبِي عُبَيْدٍ، مَوْلَى ابْنِ أَزْهَرَ، قَالَ:
شَهِدْتُ العِيدَ مَعَ عُمَرَ بْنِ الخَطَّابِ رَضِيَ اللَّهُ عَنْهُ، فَقَالَ: هَذَانِ يَوْمَانِ نَهَى رَسُولُ اللَّهِ صَلَّى اللهُ عَلَيْهِ وَسَلَّمَ عَنْ صِيَامِهِمَا: يَوْمُ فِطْرِكُمْ مِنْ صِيَامِكُمْ، وَاليَوْمُ الآخَرُ تَأْكُلُونَ فِيهِ مِنْ نُسُكِكُمْ.
[صحيح] - [متفق عليه] - [صحيح البخاري: 1990]
المزيــد ...
ಇಬ್ನ್ ಅಝ್‌ಹರ್‌ರ ವಿಮೋಚಿತ ಗುಲಾಮ ಅಬೂ ಉಬೈದ್ ರಿಂದ ವರದಿ.
"ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರೊಂದಿಗೆ ನಾನು ಒಂದು ಈದ್‌ನಲ್ಲಿ ಪಾಲ್ಗೊಂಡಿದ್ದೆ. ಅವರು ಹೇಳಿದರು: 'ಇವೆರಡು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉಪವಾಸ ಆಚರಿಸುವುದನ್ನು ನಿಷೇಧಿಸಿದ ದಿನಗಳಾಗಿವೆ: ನಿಮ್ಮ ಉಪವಾಸವನ್ನು ಕೊನೆಗೊಳಿಸುವ ದಿನ ಮತ್ತು ನೀವು ನಿಮ್ಮ ಬಲಿಮೃಗದಿಂದ ತಿನ್ನುವ ದಿನ."
[صحيح] - [متفق عليه] - [صحيح البخاري - 1990]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈದುಲ್-ಫಿತ್ರ್ ಮತ್ತು ಈದುಲ್-ಅದ್‌ಹಾ ಹಬ್ಬದ ದಿನಗಳಲ್ಲಿ ಉಪವಾಸ ಆಚರಿಸುವುದನ್ನು ನಿಷೇಧಿಸಿದರು. ಈದುಲ್-ಫಿತ್ರ್ ಎಂದರೆ ರಮದಾನ್ ತಿಂಗಳ ಉಪವಾಸವನ್ನು ಕೊನೆಗೊಳಿಸುವ ದಿನವಾಗಿದೆ ಮತ್ತು ಈದುಲ್-ಅದ್‌ಹಾ ಎಂದರೆ ಬಲಿ ನೀಡಿದ ಮೃಗಗಳ ಮಾಂಸವನ್ನು ತಿನ್ನುವ ದಿನವಾಗಿದೆ.