عَنْ أَبِي هُرَيْرَةَ رَضِيَ اللهُ عَنْهُ قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«مَنْ نَسِيَ وَهُوَ صَائِمٌ، فَأَكَلَ أَوْ شَرِبَ، فَلْيُتِمَّ صَوْمَهُ، فَإِنَّمَا أَطْعَمَهُ اللهُ وَسَقَاهُ».
[صحيح] - [متفق عليه] - [صحيح مسلم: 1155]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರಾದರೂ ಉಪವಾಸದಲ್ಲಿದ್ದಾಗ ಮರೆತು ತಿಂದರೆ ಅಥವಾ ಕುಡಿದರೆ, ಅವನು ತನ್ನ ಉಪವಾಸವನ್ನು ಪೂರ್ಣಗೊಳಿಸಲಿ. ಏಕೆಂದರೆ ಅಲ್ಲಾಹನೇ ಅವನಿಗೆ ಆಹಾರ ಮತ್ತು ಪಾನೀಯವನ್ನು ನೀಡಿದ್ದಾನೆ."
[صحيح] - [متفق عليه] - [صحيح مسلم - 1155]
ಪ್ರವಾದಿಯವರು ಇಲ್ಲಿ ವಿವರಿಸುವುದೇನೆಂದರೆ, ಉಪವಾಸ ಕಡ್ಡಾಯವಾಗಿರಲಿ ಅಥವಾ ಐಚ್ಛಿಕವಾಗಿರಲಿ, ಉಪವಾಸದಲ್ಲಿದ್ದಾಗ ಯಾರಾದರು ಮರೆತು ತಿಂದರೆ ಅಥವಾ ಕುಡಿದರೆ, ಅವನು ತನ್ನ ಉಪವಾಸವನ್ನು ಪೂರ್ಣಗೊಳಿಸಬೇಕು ಮತ್ತು ಮುರಿಯಬಾರದು. ಏಕೆಂದರೆ ಅವನು ಉಪವಾಸವನ್ನು ಮುರಿಯಲು ಉದ್ದೇಶಿಸಿರಲಿಲ್ಲ. ಬದಲಿಗೆ, ಅದು ಅಲ್ಲಾಹು ಅವನಿಗೆ ಒದಗಿಸಿದ ಆಹಾರವಾಗಿದೆ ಮತ್ತು ಅಲ್ಲಾಹನೇ ಅವನಿಗೆ ಆಹಾರ ಮತ್ತು ಪಾನೀಯವನ್ನು ನೀಡಿದವನು.