عَنْ عَبْدِ اللهِ بْنِ عُمَرَ رَضِيَ اللهُ عَنْهُمَا:
أَنَّ تَلْبِيَةَ رَسُولِ اللهِ صَلَّى اللهُ عَلَيْهِ وَسَلَّمَ: «لَبَّيْكَ اللهُمَّ، لَبَّيْكَ، لَبَّيْكَ لَا شَرِيكَ لَكَ لَبَّيْكَ، إِنَّ الْحَمْدَ وَالنِّعْمَةَ لَكَ وَالْمُلْكَ لَا شَرِيكَ لَكَ» قَالَ: وَكَانَ عَبْدُ اللهِ بْنُ عُمَرَ رَضِيَ اللهُ عَنْهُمَا يَزِيدُ فِيهَا: لَبَّيْكَ لَبَّيْكَ، وَسَعْدَيْكَ، وَالْخَيْرُ بِيَدَيْكَ، لَبَّيْكَ وَالرَّغْبَاءُ إِلَيْكَ وَالْعَمَلُ.  
                        
[صحيح] - [متفق عليه] - [صحيح مسلم: 1184]
                        
 المزيــد ... 
                    
ಅಬ್ದುಲ್ಲಾ ಬಿನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:
ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಲ್ಬಿಯ ಹೀಗಿತ್ತು: "ಲಬ್ಬೈಕ ಅಲ್ಲಾಹುಮ್ಮ ಲಬ್ಬೈಕ್, ಲಬ್ಬೈಕ ಲಾ ಶರೀಕ ಲಕ ಲಬ್ಬೈಕ್, ಇನ್ನಲ್-ಹಮ್ದ ವನ್ನಿಅಮತ ಲಕ ವಲ್-ಮುಲ್ಕ್, ಲಾ ಶರೀಕ ಲಕ್." (ಓ ಅಲ್ಲಾಹ್, ನಾನು ನಿನ್ನ ಕರೆಗೆ ಓಗೊಡುತ್ತೇನೆ, ನಾನು ಓಗೊಡುತ್ತೇನೆ. ನಾನು ನಿನ್ನ ಕರೆಗೆ ಓಗೊಡುತ್ತೇನೆ, ನಿನಗೆ ಯಾವುದೇ ಸಹಭಾಗಿಗಳಿಲ್ಲ, ನಾನು ಓಗೊಡುತ್ತೇನೆ. ಖಂಡಿತವಾಗಿಯೂ ಸ್ತುತಿ, ಅನುಗ್ರಹ ಮತ್ತು ಸಾರ್ವಭೌಮತ್ವವು ನಿನಗೆ ಸೇರಿದ್ದು. ಅದರಲ್ಲಿ ನಿನಗೆ ಯಾವುದೇ ಸಹಭಾಗಿಗಳಿಲ್ಲ). ಅಬ್ದುಲ್ಲಾ ಇಬ್ನ್ ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅದಕ್ಕೆ ಇದನ್ನು ಸೇರಿಸುತ್ತಿದ್ದರು: ಲಬ್ಬೈಕ ಲಬ್ಬೈಕ, ವ ಸಅದಯ್ಕ, ವಲ್-ಖೈರು ಬಿಯದೈಕ್. ಲಬ್ಬೈಕ ವರ್ರಗ್ಬಾಉ ಇಲೈಕ ವಲ್-ಅಮಲ್ (ನಾನು ನಿನ್ನ ಕರೆಗೆ ಓಗೊಡುತ್ತೇನೆ, ನಾನು ನಿನ್ನ ಕರೆಗೆ ಓಗೊಡುತ್ತೇನೆ, ಮತ್ತು ನಿನ್ನ ಕರೆಗೆ ಓಗೊಡುವುದರಲ್ಲೇ ನನ್ನ ಸೌಭಾಗ್ಯವಿದೆ. ಒಳಿತೆಲ್ಲವೂ ನಿನ್ನ ಕೈಯಲ್ಲಿದೆ. ನಾನು ನಿನ್ನ ಕರೆಗೆ ಓಗೊಡುತ್ತೇನೆ, ಬಯಕೆಗಳು ನಿನ್ನ ಕಡೆಗಿದೆ ಮತ್ತು ಕರ್ಮಗಳು ನಿನಗಾಗಿಯೇ ಇದೆ). 
                                                     
                                                                                                    
[صحيح] - [متفق عليه] - [صحيح مسلم - 1184]                                            
ಹಜ್ಜ್ ಅಥವಾ ಉಮ್ರಾದ ಆಚರಣೆಗಳನ್ನು ಪ್ರಾರಂಭಿಸಲು ಉದ್ದೇಶಿಸಿದಾಗ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಿದ್ದ ತಲ್ಬಿಯ ಹೀಗಿತ್ತು: "ಓ ಅಲ್ಲಾಹ್, ನಾನು ನಿನ್ನ ಕರೆಗೆ ಓಗೊಡುತ್ತೇನೆ, ನಾನು ಓಗೊಡುತ್ತೇನೆ." ನಿಷ್ಕಳಂಕತೆ, ಏಕದೇವಾರಾಧನೆ, ಹಜ್ಜ್ ಮುಂತಾದವುಗಳು ಸೇರಿದಂತೆ ನೀನು ನಮ್ಮನ್ನು ಕರೆದ ವಿಷಯಗಳಿಗೆ ಸಂಬಂಧಿಸಿದಂತೆ ಮತ್ತೆ ಮತ್ತೆ ಓಗೊಡುತ್ತಿದ್ದೇನೆ. "ನಾನು ನಿನ್ನ ಕರೆಗೆ ಓಗೊಡುತ್ತೇನೆ, ನಿನಗೆ ಯಾವುದೇ ಸಹಭಾಗಿಗಳಿಲ್ಲ, ನಾನು ಓಗೊಡುತ್ತೇನೆ." ಏಕೆಂದರೆ ನೀನು ಮಾತ್ರ ಆರಾಧನೆಗೆ ಅರ್ಹನು. ನಿನ್ನ ಪ್ರಭುತ್ವ, ಆರಾಧನೆ, ಹೆಸರುಗಳು ಮತ್ತು ಗುಣಲಕ್ಷಣಗಳಲ್ಲಿ ನಿನಗೆ ಯಾವುದೇ ಸಹಭಾಗಿಗಳಿಲ್ಲ. "ಖಂಡಿತವಾಗಿಯೂ ಸ್ತುತಿ", ಕೃತಜ್ಞತೆ, ಪ್ರಶಂಸೆ "ಮತ್ತು ಅನುಗ್ರಹವು" ನಿನ್ನಿಂದಾಗಿವೆ, ನೀನೇ ಅವುಗಳನ್ನು ನೀಡುವವನು. "ಸಾರ್ವಭೌಮತ್ವವು" ಎಲ್ಲಾ ಸಂದರ್ಭಗಳಲ್ಲಿಯೂ ನಿನಗೇ ಅರ್ಹವಾಗಿದೆ. "ನಿನಗೆ ಯಾವುದೇ ಸಹಭಾಗಿಗಳಿಲ್ಲ". ಏಕೆಂದರೆ ಅವುಗಳೆಲ್ಲವೂ ನಿನಗೆ ಮಾತ್ರ ಸೇರಿದ್ದು. ಇಬ್ನ್ ಉಮರ್ ಅದರಲ್ಲಿ ಇನ್ನೂ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಸೇರಿಸುತ್ತಿದ್ದರು: "ನಾನು ನಿನ್ನ ಕರೆಗೆ ಓಗೊಡುತ್ತೇನೆ, ನಾನು ನಿನ್ನ ಕರೆಗೆ ಓಗೊಡುತ್ತೇನೆ, ಮತ್ತು ನಿನ್ನ ಕರೆಗೆ ಓಗೊಡುವುದರಲ್ಲೇ ನನ್ನ ಸೌಭಾಗ್ಯವಿದೆ." ಅಂದರೆ, ನನಗೆ ಸೌಭಾಗ್ಯದ ನಂತರ ಸೌಭಾಗ್ಯವನ್ನು ಕರುಣಿಸು. "ಒಳಿತೆಲ್ಲವೂ ನಿನ್ನ ಕೈಯಲ್ಲಿದೆ." ಎಲ್ಲವೂ ನಿನ್ನ ಅನುಗ್ರಹ ಮತ್ತು ಕೃಪೆಯಿಂದಲೇ ಆಗಿದೆ. "ನಾನು ನಿನ್ನ ಕರೆಗೆ ಓಗೊಡುತ್ತೇನೆ, ಬಯಕೆಗಳು ನಿನ್ನ ಕಡೆಗಿದೆ." ಯಾರ ಕೈಯಲ್ಲಿ ಒಳಿತುಗಳಿವೆಯೋ ಅವನ ಕಡೆಗೇ ಮನವಿ ಮತ್ತು ಬೇಡಿಕೆಗಳನ್ನಿಡಲಾಗುತ್ತದೆ. "ಮತ್ತು ಕರ್ಮಗಳು ನಿನಗಾಗಿಯೇ ಇದೆ" ಏಕೆಂದರೆ ಆರಾಧನೆಗೆ ನೀನು ಮಾತ್ರ ಅರ್ಹನು.