عَنِ ابْنِ عُمَرَ رَضِيَ اللَّهُ عَنْهُمَا:
أَنَّ رِجَالًا مِنْ أَصْحَابِ النَّبِيِّ صَلَّى اللهُ عَلَيْهِ وَسَلَّمَ أُرُوا لَيْلَةَ القَدْرِ فِي المَنَامِ فِي السَّبْعِ الأَوَاخِرِ، فَقَالَ رَسُولُ اللَّهِ صَلَّى اللهُ عَلَيْهِ وَسَلَّمَ: «أَرَى رُؤْيَاكُمْ قَدْ تَوَاطَأَتْ فِي السَّبْعِ الأَوَاخِرِ، فَمَنْ كَانَ مُتَحَرِّيهَا فَلْيَتَحَرَّهَا فِي السَّبْعِ الأَوَاخِرِ».
[صحيح] - [متفق عليه] - [صحيح البخاري: 2015]
المزيــد ...
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ.
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಹಚರರಲ್ಲಿ ಕೆಲವರಿಗೆ ಲೈಲತುಲ್ ಖದ್ರ್ ಕೊನೆಯ ಏಳು ರಾತ್ರಿಗಳಲ್ಲಿ ಎಂದು ಕನಸಿನಲ್ಲಿ ತೋರಿಸಲಾಯಿತು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮ ಕನಸುಗಳೆಲ್ಲವೂ ಕೊನೆಯ ಏಳರಲ್ಲಿ ಒಗ್ಗೂಡುತ್ತಿರುವುದನ್ನು ನಾನು ಕಾಣುತ್ತಿದ್ದೇನೆ. ಆದ್ದರಿಂದ ಯಾರಾದರೂ ಲೈಲತುಲ್ ಖದ್ರ್ ಅನ್ನು ಹುಡುಕುತ್ತಿದ್ದರೆ, ಅವರು ಅದನ್ನು ಕೊನೆಯ ಏಳರಲ್ಲಿ ಹುಡುಕಲಿ."
[صحيح] - [متفق عليه] - [صحيح البخاري - 2015]
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಹಾಬಿಗಳಲ್ಲಿ ಕೆಲವರು ಲೈಲತುಲ್ ಖದ್ರ್ ರಮದಾನ್ ತಿಂಗಳ ಕೊನೆಯ ಏಳು ರಾತ್ರಿಗಳಲ್ಲಿ ಬರುತ್ತದೆ ಎಂದು ಕನಸು ಕಂಡರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ನಿಮ್ಮ ಕನಸುಗಳು ರಮದಾನ್ ತಿಂಗಳ ಕೊನೆಯ ಏಳು ರಾತ್ರಿಗಳಲ್ಲಿ ಒಂದುಗೂಡುತ್ತಿವೆ. ಆದ್ದರಿಂದ ಯಾರಾದರೂ ಲೈಲತುಲ್ ಖದ್ರ್ ಅನ್ನು ಹುಡುಕುತ್ತಿದ್ದರೆ, ಅದನ್ನು ಪಡೆಯಲು ಅವರು ಸತ್ಕರ್ಮಗಳು ಹೆಚ್ಚಿಸುತ್ತಾ ಪ್ರಯತ್ನಿಸಲಿ. ಅದು ಕೊನೆಯ ಏಳು ರಾತ್ರಿಗಳಲ್ಲಿ ಬರಬಹುದೆಂಬ ನಿರೀಕ್ಷೆಯಿದೆ. ಆ ವರ್ಷದ ರಮದಾನ್ ತಿಂಗಳು ಮೂವತ್ತು ದಿನಗಳಾಗಿದ್ದರೆ, ಅದನ್ನು ಇಪ್ಪತ್ತನಾಲ್ಕನೇ ರಾತ್ರಿಯಿಂದ ಹುಡುಕಲು ಪ್ರಾರಂಭಿಸಬೇಕು. ಆದರೆ, ಅದು ಇಪ್ಪತ್ತೊಂಬತ್ತು ದಿನಗಳಿದ್ದರೆ, ಇಪ್ಪತ್ತಮೂರನೇ ರಾತ್ರಿಯಿಂದ ಹುಡುಕಲು ಪ್ರಾರಂಭಿಸಬೇಕು.