عَنْ ابْنَ عُمَرَ رَضِيَ اللَّهُ عَنْهُمَا قَالَ: سَمِعْتُ رَسُولَ اللَّهِ صَلَّى اللهُ عَلَيْهِ وَسَلَّمَ يَقُولُ:
«إِذَا رَأَيْتُمُوهُ فَصُومُوا، وَإِذَا رَأَيْتُمُوهُ فَأَفْطِرُوا، فَإِنْ غُمَّ عَلَيْكُمْ فَاقْدُرُوا لَهُ».
[صحيح] - [متفق عليه] - [صحيح البخاري: 1900]
المزيــد ...
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ನೀವು ಅದನ್ನು (ಚಂದ್ರನನ್ನು) ಕಂಡರೆ ಉಪವಾಸವನ್ನು ಪ್ರಾರಂಭಿಸಿರಿ, ಮತ್ತು ನೀವು ಅದನ್ನು ಕಂಡರೆ ಉಪವಾಸವನ್ನು ನಿಲ್ಲಿಸಿರಿ. ಮೋಡಗಳ ಕಾರಣ ನಿಮಗೆ ಅದನ್ನು ಕಾಣಲಾಗದಿದ್ದರೆ ಮೂವತ್ತು ದಿನಗಳನ್ನು ಪೂರ್ಣಗೊಳಿಸಿರಿ."
[صحيح] - [متفق عليه] - [صحيح البخاري - 1900]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ರಮದಾನ್ ತಿಂಗಳ ಪ್ರಾರಂಭ ಮತ್ತು ಅಂತ್ಯವನ್ನು ವಿವರಿಸುತ್ತಾ ಹೇಳುವುದೇನೆಂದರೆ: ನೀವು ರಮದಾನ್ ತಿಂಗಳ ಚಂದ್ರನನ್ನು ಕಂಡರೆ ಉಪವಾಸ ಆರಂಭಿಸಿರಿ. ನಿಮ್ಮ ಮತ್ತು ಅದರ ಮಧ್ಯೆ ಮೋಡಗಳಿದ್ದು ಅದು ಮರೆಯಾದರೆ ಶಅಬಾನ್ ತಿಂಗಳ ಮೂವತ್ತು ದಿನಗಳನ್ನು ಪೂರ್ಣಗೊಳಿಸಿರಿ. ನಂತರ ನೀವು ಶವ್ವಾಲ್ ತಿಂಗಳ ಚಂದ್ರನನ್ನು ಕಂಡರೆ ಉಪವಾಸ ಕೊನೆಗೊಳಿಸಿರಿ. ನಿಮ್ಮ ಮತ್ತು ಅದರ ಮಧ್ಯೆ ಮೋಡಗಳಿದ್ದು ಅದು ಮರೆಯಾದರೆ ರಮದಾನ್ ತಿಂಗಳ ಮೂವತ್ತು ದಿನಗಳನ್ನು ಪೂರ್ಣಗೊಳಿಸಿರಿ.