عَنْ عَائِشَةَ أُمِّ المؤْمِنينَ رَضِيَ اللهُ عَنْهَا:
كَانَ رَسُولُ اللهِ صَلَّى اللهُ عَلَيْهِ وَسَلَّمَ يَجْتَهِدُ فِي الْعَشْرِ الْأَوَاخِرِ مَا لَا يَجْتَهِدُ فِي غَيْرِهِ.
[صحيح] - [رواه مسلم] - [صحيح مسلم: 1175]
المزيــد ...
ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ.
"ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಮದಾನಿನ ಕೊನೆಯ ಹತ್ತು ದಿನಗಳಲ್ಲಿ ಇತರ ದಿನಗಳಲ್ಲಿ ಪರಿಶ್ರಮಿಸದಷ್ಟು ಪರಿಶ್ರಮಿಸುತ್ತಿದ್ದರು."
[صحيح] - [رواه مسلم] - [صحيح مسلم - 1175]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಮದಾನಿನ ಕೊನೆಯ ಹತ್ತು ದಿನಗಳು ಬಂದಾಗ, ಅವರು ಆ ದಿನಗಳನ್ನು ಆರಾಧನೆ ಮತ್ತು ಅನುಸರಣೆಯಲ್ಲಿ ಕಳೆಯಲು ಪರಿಶ್ರಮಿಸುತ್ತಿದ್ದರು. ಅವರು ಇತರ ದಿನಗಳಲ್ಲಿ ಶ್ರಮವಹಿಸುವುದಕ್ಕಿಂತ ಹೆಚ್ಚಾಗಿ ಈ ದಿನಗಳಲ್ಲಿ ವಿವಿಧ ರೀತಿಯ ಸತ್ಕರ್ಮಗಳು, ದಾನಧರ್ಮಗಳು ಮತ್ತು ಆರಾಧನೆಗಳನ್ನು ನಿರ್ವಹಿಸಲು ಶ್ರಮವಹಿಸುತ್ತಿದ್ದರು. ಇದಕ್ಕೆ ಕಾರಣ ಆ ರಾತ್ರಿಗಳ ಶ್ರೇಷ್ಠತೆ ಮತ್ತು ಅನುಗ್ರಹಗಳಾಗಿದ್ದವು ಮತ್ತು ಲೈಲತುಲ್ ಕದ್ರ್‌ನ ರಾತ್ರಿಯನ್ನು ಪಡೆಯುವ ಬಯಕೆಯಾಗಿತ್ತು.