عَنْ جَابِرِ بْنِ عَبْدِ اللَّهِ رَضِيَ اللَّهُ عَنْهُما قَالَ:
كَانَ رَسُولُ اللَّهِ صَلَّى اللهُ عَلَيْهِ وَسَلَّمَ فِي سَفَرٍ، فَرَأَى زِحَامًا وَرَجُلًا قَدْ ظُلِّلَ عَلَيْهِ، فَقَالَ: «مَا هَذَا؟»، فَقَالُوا: صَائِمٌ، فَقَالَ: «لَيْسَ مِنَ البِرِّ الصَّوْمُ فِي السَّفَرِ»، وَفِي لَفْظٍ لِمُسلِمٍ: «عَلَيْكُمْ بِرُخْصَةِ اللهِ الَّذِي رَخَّصَ لَكُمْ».
[صحيح] - [متفق عليه] - [صحيح البخاري: 1946]
المزيــد ...
ಜಾಬಿರ್ ಇಬ್ನ್ ಅಬ್ದುಲ್ಲಾ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಪ್ರಯಾಣದಲ್ಲಿದ್ದರು. ಆಗ ಅವರು ಜನರು ಗುಂಪುಗೂಡಿ ಒಬ್ಬ ವ್ಯಕ್ತಿಗೆ ನೆರಳು ನೀಡುತ್ತಿರುವುದನ್ನು ಕಂಡರು. ಅವರು (ಪ್ರವಾದಿ) ಕೇಳಿದರು: "ಇದೇನು?". ಜನರು ಹೇಳಿದರು: "ಆತ ಉಪವಾಸದಲ್ಲಿದ್ದಾನೆ". ಆಗ ಅವರು (ಪ್ರವಾದಿ) ಹೇಳಿದರು: "ಪ್ರಯಾಣದ ಸಂದರ್ಭದಲ್ಲಿ ಉಪವಾಸ ಆಚರಿಸುವುದು ಪುಣ್ಯಕಾರ್ಯವಲ್ಲ". ಇಮಾಮ್ ಮುಸ್ಲಿಂ ರವರ ಇನ್ನೊಂದು ವರದಿಯಲ್ಲಿ ಹೀಗಿದೆ: "ಅಲ್ಲಾಹು ನಿಮಗೆ ನೀಡಿದ ರಿಯಾಯಿತಿಯನ್ನು ಸ್ವೀಕರಿಸಿಕೊಳ್ಳಿರಿ".
[صحيح] - [متفق عليه] - [صحيح البخاري - 1946]
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಪ್ರಯಾಣದಲ್ಲಿದ್ದರು. ಆಗ ಅವರು ಒಬ್ಬ ವ್ಯಕ್ತಿಯನ್ನು ಕಂಡರು, ಜನರು ಅವನ ಸುತ್ತಲೂ ಒಟ್ಟುಗೂಡಿದ್ದರು ಮತ್ತು ಬಿಸಿಲಿನ ತಾಪ ಹಾಗೂ ತೀವ್ರ ಬಾಯಾರಿಕೆಯಿಂದಾಗಿ ಅವನಿಗೆ ನೆರಳು ನೀಡುತ್ತಿದ್ದರು. ಆಗ ಅವರು (ಪ್ರವಾದಿ) ಕೇಳಿದರು: ಅವನಿಗೆ ಏನಾಗಿದೆ? ಜನರು ಹೇಳಿದರು: ಅವನು ಉಪವಾಸದಲ್ಲಿದ್ದಾನೆ. ಅವರು (ಪ್ರವಾದಿ) ಹೇಳಿದರು: ಪ್ರಯಾಣದಲ್ಲಿ (ಹೀಗೆ ಕಷ್ಟಪಟ್ಟು) ಉಪವಾಸ ಆಚರಿಸುವುದು ಪುಣ್ಯವಲ್ಲ. ಅಲ್ಲಾಹು ನಿಮಗೆ ನೀಡಿದ ರಿಯಾಯಿತಿಯನ್ನು (ಅಂದರೆ ಪ್ರಯಾಣದಲ್ಲಿ ಉಪವಾಸ ಬಿಡುವುದನ್ನು) ಸ್ವೀಕರಿಸಿಕೊಳ್ಳಿ.