عَنْ زَيْدِ بْنِ ثَابِتٍ رَضِيَ اللَّهُ عَنْهُ قَالَ:
تَسَحَّرْنَا مَعَ النَّبِيِّ صَلَّى اللهُ عَلَيْهِ وَسَلَّمَ، ثُمَّ قَامَ إِلَى الصَّلاةِ، قُلْتُ: كَمْ كَانَ بَيْنَ الأَذَانِ وَالسَّحُورِ؟ قَالَ: قَدْرُ خَمْسِينَ آيَةً.
[صحيح] - [متفق عليه] - [صحيح البخاري: 1921]
المزيــد ...
ಝೈದ್ ಬಿನ್ ಸಾಬಿತ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
"ನಾವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆ ಸಹರಿ ಸೇವಿಸಿದೆವು. ನಂತರ ಅವರು ನಮಾಝ್ ಮಾಡಲು ನಿಂತರು. ನಾನು ಕೇಳಿದೆ: 'ಅದಾನ್ ಮತ್ತು ಸಹರಿಯ ನಡುವೆ ಎಷ್ಟು ಸಮಯವಿತ್ತು?' ಅವರು ಹೇಳಿದರು: 'ಸುಮಾರು ಐವತ್ತು ಆಯತ್‌ಗಳಷ್ಟು.'"
[صحيح] - [متفق عليه] - [صحيح البخاري - 1921]
ಕೆಲವು ಸಹಾಬಾಗಳು (ಅಲ್ಲಾಹು ಅವರೆಲ್ಲರ ಬಗ್ಗೆ ಸಂಪ್ರೀತನಾಗಲಿ) ಪ್ರವಾದಿಯವರ ಜೊತೆ ಸಹರಿ ಸೇವಿಸಿದರು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಫಜ್ರ್ ನಮಾಝ್ ನಿರ್ವಹಿಸಲು ಹೊರಟರು. ಆಗ ಅನಸ್ ಝೈದ್ ಬಿನ್ ಸಾಬಿತ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರೊಡನೆ ಕೇಳಿದರು: "ಅದಾನ್ ಮತ್ತು ಸಹರಿಯ ನಡುವಿನ ಸಮಯದ ಪ್ರಮಾಣ ಎಷ್ಟು?" ಝೈದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: "ಸುಮಾರು ಐವತ್ತು ಮಧ್ಯಮ ಆಯತ್‌ಗಳನ್ನು ಪಠಿಸುವಷ್ಟು ಸಮಯ. ಅವು ಉದ್ದವೂ ಅಲ್ಲ ಮತ್ತು ಚಿಕ್ಕದೂ ಅಲ್ಲ. ಹಾಗೆಯೇ ಅದು ವೇಗದ ಪಠಣವೂ ಅಲ್ಲ, ನಿಧಾನದ ಪಠಣವೂ ಅಲ್ಲ."