عَنْ أَبِي سَعِيدٍ الْخُدْرِيِّ رَضِيَ اللهُ عَنْهُ قَالَ: سَمِعْتُ رَسُولَ اللهِ صَلَّى اللهُ عَلَيْهِ وَسَلَّمَ يَقُولُ:
«مَنْ صَامَ يَوْمًا فِي سَبِيلِ اللهِ بَاعَدَ اللهُ وَجْهَهُ عَنِ النَّارِ سَبْعِينَ خَرِيفًا».
[صحيح] - [متفق عليه] - [صحيح مسلم: 1153]
المزيــد ...
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ಯಾರು ಅಲ್ಲಾಹನ ಮಾರ್ಗದಲ್ಲಿ ಒಂದು ದಿನ ಉಪವಾಸವನ್ನು ಆಚರಿಸುತ್ತಾನೋ, ಅಲ್ಲಾಹು ಅವನ ಮುಖವನ್ನು ನರಕದಿಂದ ಎಪ್ಪತ್ತು ಶರತ್ಕಾಲಗಳಷ್ಟು ದೂರ ಮಾಡುತ್ತಾನೆ."
[صحيح] - [متفق عليه] - [صحيح مسلم - 1153]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಯಾರು ಜಿಹಾದಿನಲ್ಲಿ - ಜಿಹಾದ್ ಮತ್ತು ಇತರ [ಸಂದರ್ಭಗಳಲ್ಲಿ] ಎಂದು ಕೂಡ ಹೇಳಲಾಗಿದೆ - ಅಲ್ಲಾಹನಿಂದ ಪ್ರತಿಫಲ ಮತ್ತು ಪುರಸ್ಕಾರವನ್ನು ಬಯಸುತ್ತಾ, ಅಲ್ಲಾಹನಿಗೆ ನಿಷ್ಕಳಂಕವಾಗಿ ಒಂದು ದಿನ ಉಪವಾಸವನ್ನು ಆಚರಿಸುತ್ತಾರೋ, ಖಂಡಿತವಾಗಿಯೂ ಅಲ್ಲಾಹು ತನ್ನ ಅನುಗ್ರಹದಿಂದ, ಅವನ ಮತ್ತು ನರಕಾಗ್ನಿಯ ನಡುವೆ ಎಪ್ಪತ್ತು ವರ್ಷಗಳ ಅಂತರವನ್ನು ಮಾಡುತ್ತಾನೆ.