+ -

عن ابن عباس رضي الله عنهما
عَنِ النَّبِيِّ صَلَّى اللهُ عَلَيْهِ وَسَلَّمَ فِيمَا يَرْوِي عَنْ رَبِّهِ عَزَّ وَجَلَّ قَالَ: قَالَ: «إِنَّ اللهَ كَتَبَ الْحَسَنَاتِ وَالسَّيِّئَاتِ، ثُمَّ بَيَّنَ ذَلِكَ، فَمَنْ هَمَّ بِحَسَنَةٍ فَلَمْ يَعْمَلْهَا كَتَبَهَا اللهُ لَهُ عِنْدَهُ حَسَنَةً كَامِلَةً، فَإِنْ هُوَ هَمَّ بِهَا فَعَمِلَهَا كَتَبَهَا اللهُ لَهُ عِنْدَهُ عَشْرَ حَسَنَاتٍ إِلَى سَبْعِمِائَةِ ضِعْفٍ، إِلَى أَضْعَافٍ كَثِيرَةٍ، وَمَنْ هَمَّ بِسَيِّئَةٍ فَلَمْ يَعْمَلْهَا كَتَبَهَا اللهُ لَهُ عِنْدَهُ حَسَنَةً كَامِلَةً، فَإِنْ هُوَ هَمَّ بِهَا فَعَمِلَهَا كَتَبَهَا اللهُ لَهُ سَيِّئَةً وَاحِدَةً».

[صحيح] - [متفق عليه] - [صحيح البخاري: 6491]
المزيــد ...

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸರ್ವಶಕ್ತನಾದ ಅವರ ಪರಿಪಾಲಕನಿಂದ (ಅಲ್ಲಾಹನಿಂದ) ವರದಿ ಮಾಡುತ್ತಾ ಹೇಳುತ್ತಾರೆ: "ನಿಶ್ಚಯವಾಗಿಯೂ ಅಲ್ಲಾಹು ಒಳಿತು ಮತ್ತು ಕೆಡುಕುಗಳನ್ನು ದಾಖಲಿಸಿದನು. ನಂತರ ಅವುಗಳನ್ನು (ಹೀಗೆ) ವಿವರಿಸಿದನು: ಒಬ್ಬ ವ್ಯಕ್ತಿ ಒಂದು ಒಳಿತನ್ನು ಮಾಡಲು ಉದ್ದೇಶಿಸಿ ಅದನ್ನು ಮಾಡದಿದ್ದರೆ ಅಲ್ಲಾಹು ಅವನ ಹೆಸರಲ್ಲಿ ಒಂದು ಪೂರ್ಣ ಒಳಿತನ್ನು ದಾಖಲಿಸುವನು. ಅವನು ಒಂದು ಒಳಿತನ್ನು ಮಾಡಲು ಉದ್ದೇಶಿಸಿ ಅದನ್ನು ಮಾಡಿದರೆ, ಅಲ್ಲಾಹು ಅದರ ಪ್ರತಿಫಲವನ್ನು ಹತ್ತರಿಂದ ಏಳು ನೂರರವರೆಗೆ ಇಮ್ಮಡಿಗೊಳಿಸಿ, ಅಥವಾ ಅದಕ್ಕಿಂತಲೂ ಹೆಚ್ಚು ಪ್ರತಿಫಲವನ್ನು ದಾಖಲಿಸುವನು. ಒಬ್ಬ ವ್ಯಕ್ತಿ ಒಂದು ಕೆಡುಕನ್ನು ಮಾಡಲು ಉದ್ದೇಶಿಸಿ ಅದನ್ನು ಮಾಡದಿದ್ದರೆ ಅಲ್ಲಾಹು ಅವನ ಹೆಸರಲ್ಲಿ ಒಂದು ಪೂರ್ಣ ಒಳಿತನ್ನು ದಾಖಲಿಸುವನು. ಅವನು ಒಂದು ಕೆಡುಕನ್ನು ಮಾಡಲು ಉದ್ದೇಶಿಸಿ ಅದನ್ನು ಮಾಡಿದರೆ ಅಲ್ಲಾಹು ಅವನ ಹೆಸರಲ್ಲಿ ಒಂದು ಕೆಡುಕನ್ನು ಮಾತ್ರ ದಾಖಲಿಸುವನು."

[صحيح] - [متفق عليه] - [صحيح البخاري - 6491]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಅಲ್ಲಾಹು ಒಳಿತು ಮತ್ತು ಕೆಡುಕುಗಳನ್ನು ನಿರ್ಣಯಿಸಿದ ನಂತರ ಅವುಗಳನ್ನು ದಾಖಲಿಸುವ ವಿಧಾನವನ್ನು ದೇವದೂತರಿಗೆ ಹೀಗೆ ವಿವರಿಸಿಕೊಟ್ಟನು:
ಒಬ್ಬ ವ್ಯಕ್ತಿ ಒಂದು ಒಳಿತನ್ನು ಮಾಡಲು ಉದ್ದೇಶಿಸಿ, ಮನಸ್ಸಿನಲ್ಲಿ ದೃಢವಾಗಿ ನಿರ್ಧರಿಸಿದರೆ ಅವನ ಹೆಸರಲ್ಲಿ ಒಂದು ಒಳಿತು ಮಾಡಿದ ಪುಣ್ಯವು ದಾಖಲಾಗುತ್ತದೆ. ಅವನು ಆ ಒಳಿತನ್ನು ಮಾಡದಿದ್ದರೂ ಸಹ. ಇನ್ನು ಅವನು ಅದನ್ನು ಮಾಡಿದರೆ ಅವನ ಹೆಸರಲ್ಲಿ ಹತ್ತರಿಂದ ತೊಡಗಿ ಏಳುನೂರರ ತನಕ ಒಳಿತುಗಳನ್ನು ಮಾಡಿದ ಪುಣ್ಯಗಳು ದಾಖಲಾಗುತ್ತವೆ. ಈ ಹೆಚ್ಚುವರಿಯು ಅವನ ಹೃದಯದಲ್ಲಿರುವ ನಿಷ್ಕಳಂಕತೆ ಮತ್ತು ಆ ಒಳಿತಿನಿಂದ ಇತರ ಜನರಿಗಿರುವ ಪ್ರಯೋಜನಗಳನ್ನು ಅವಲಂಬಿಸಿಕೊಂಡಿದೆ.
ಒಬ್ಬ ವ್ಯಕ್ತಿ ಒಂದು ಕೆಡುಕನ್ನು ಮಾಡಲು ಉದ್ದೇಶಿಸಿ, ಮನಸ್ಸಿನಲ್ಲಿ ದೃಢವಾಗಿ ನಿರ್ಧರಿಸಿ, ನಂತರ ಅಲ್ಲಾಹನ ಭಯದಿಂದ ಅದನ್ನು ಮಾಡದಿದ್ದರೆ, ಅವನ ಹೆಸರಲ್ಲಿ ಒಂದು ಒಳಿತು ಮಾಡಿದ ಪುಣ್ಯವು ದಾಖಲಾಗುತ್ತದೆ. ಸಂದರ್ಭಗಳು ಕೈತಪ್ಪಿದ್ದರಿಂದ, ಅಥವಾ ಇತರ ಕಾರ್ಯಗಳಲ್ಲಿ ಮಗ್ನನಾಗಿದ್ದರಿಂದ ಅವನು ಆ ಕೆಡುಕನ್ನು ಮಾಡದಿದ್ದರೆ ಅವನಿಗೆ ಈ ಪುಣ್ಯ ಸಿಗುವುದಿಲ್ಲ. ಆದರೆ, ಅದನ್ನು ಮಾಡಲು ಸಾಧ್ಯವಾಗದೆ ಅವನು ಅದನ್ನು ತೊರೆದರೆ, ಅವನ ಉದ್ದೇಶಕ್ಕೆ ಅನುಗುಣವಾಗಿ ಅವನಿಗೆ ಪ್ರತಿಫಲ ನೀಡಲಾಗುತ್ತದೆ. ಇನ್ನು ಅವನು ಆ ಕೆಡುಕನ್ನು ಮಾಡಿಯೇ ಬಿಟ್ಟರೆ ಅವನ ಹೆಸರಲ್ಲಿ ಕೇವಲ ಒಂದು ಕೆಡುಕು ಮಾತ್ರ ದಾಖಲಾಗುತ್ತದೆ.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ತಮಿಳು ಬರ್ಮೀ ಥಾಯ್ ಜರ್ಮನ್ ಜಪಾನೀ ಪಶ್ತೋ الأسامية الألبانية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الطاجيكية الكينياروندا الرومانية المجرية التشيكية الإيطالية الأورومو الأذربيجانية الأوزبكية الأوكرانية
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಒಳಿತಿನ ಕರ್ಮಗಳಿಗೆ ಹಲವು ಪಟ್ಟು ಪ್ರತಿಫಲಗಳನ್ನು ನೀಡುವುದು ಮತ್ತು ಕೆಡುಕಿನ ಕರ್ಮಗಳಿಗೆ ಹಲವು ಪಟ್ಟು ಶಿಕ್ಷೆಗಳನ್ನು ನೀಡದಿರುವುದು ಅಲ್ಲಾಹು ಈ ಸಮುದಾಯದ ಮೇಲೆ ತೋರಿದ ಮಹಾ ಅನುಗ್ರಹವೆಂದು ಈ ಹದೀಸ್ ವಿವರಿಸುತ್ತದೆ.
  2. ಕರ್ಮಗಳಲ್ಲಿ ಮತ್ತು ಅದರ ಪರಿಣಾಮಗಳಲ್ಲಿ ಉದ್ದೇಶವು (ನಿಯ್ಯತ್) ಹೊಂದಿರುವ ಪ್ರಮುಖ ಪಾತ್ರವನ್ನು ಈ ಹದೀಸ್ ತಿಳಿಸುತ್ತದೆ.
  3. ಒಳಿತನ್ನು ಮಾಡಲು ಉದ್ದೇಶಿಸಿ ನಂತರ ಅದನ್ನು ಮಾಡದಿದ್ದರೂ ಅವನ ಹೆಸರಲ್ಲಿ ಒಂದು ಒಳಿತು ಮಾಡಿದ ಪುಣ್ಯವನ್ನು ದಾಖಲಿಸುವುದು ಸರ್ವಶಕ್ತನಾದ ಅಲ್ಲಾಹನ ಅನುಕಂಪ ಮತ್ತು ಉದಾರತೆಯೆಂದು ಈ ಹದೀಸ್ ತಿಳಿಸುತ್ತದೆ.
ಇನ್ನಷ್ಟು