عن أبي هريرة رضي الله عنه: أن رسول الله صلى الله عليه وسلم قال:
«يَنْزِلُ رَبُّنَا تَبَارَكَ وَتَعَالَى كُلَّ لَيْلَةٍ إِلَى السَّمَاءِ الدُّنْيَا حِينَ يَبْقَى ثُلُثُ اللَّيْلِ الْآخِرُ، يَقُولُ: «مَنْ يَدْعُونِي فَأَسْتَجِيبَ لَهُ؟ مَنْ يَسْأَلُنِي فَأُعْطِيَهُ؟ مَنْ يَسْتَغْفِرُنِي فَأَغْفِرَ لَهُ؟».
[صحيح] - [متفق عليه] - [صحيح البخاري: 1145]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಸರ್ವಶಕ್ತನಾದ ನಮ್ಮ ಪರಿಪಾಲಕನು (ಅಲ್ಲಾಹು) ಪ್ರತಿ ರಾತ್ರಿಯೂ, ಅದರ ಮೂರನೇ ಒಂದು ಭಾಗ ಉಳಿದಿರುವಾಗ, ಅತಿಕೆಳಗಿನ ಆಕಾಶಕ್ಕೆ ಇಳಿಯುತ್ತಾನೆ. ನಂತರ ಹೇಳುತ್ತಾನೆ: "ನನ್ನನ್ನು ಕರೆದು ಪ್ರಾರ್ಥಿಸುವವರು ಯಾರು? ಅವರಿಗೆ ನಾನು ಉತ್ತರ ನೀಡುವೆನು. ನನ್ನಲ್ಲಿ ಬೇಡುವವರು ಯಾರು? ಅವರಿಗೆ ನಾನು ನೀಡುವೆನು. ನನ್ನಲ್ಲಿ ಕ್ಷಮೆ ಕೇಳುವವರು ಯಾರು? ಅವರಿಗೆ ನಾನು ಕ್ಷಮಿಸುವೆನು."
[صحيح] - [متفق عليه] - [صحيح البخاري - 1145]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಸರ್ವಶಕ್ತನಾದ ನಮ್ಮ ಪರಿಪಾಲಕನು (ಅಲ್ಲಾಹು) ಪ್ರತಿ ರಾತ್ರಿಯೂ, ಅದರ ಮೂರನೇ ಒಂದು ಭಾಗ ಉಳಿದಿರುವಾಗ, ಅತಿಕೆಳಗಿನ ಆಕಾಶಕ್ಕೆ ಇಳಿದು ಬರುತ್ತಾನೆ. ನಂತರ ತನ್ನನ್ನು ಕರೆದು ಪ್ರಾರ್ಥಿಸಲು ತನ್ನ ದಾಸರಿಗೆ ಒತ್ತಾಯಿಸುತ್ತಾನೆ. ಅವನನ್ನು ಕರೆದು ಪ್ರಾರ್ಥಿಸಿದವರಿಗೆ ಅವನು ಉತ್ತರ ನೀಡುತ್ತಾನೆ. ಅವರಿಗೆ ಬೇಕಾದುದನ್ನು ತನ್ನೊಡನೆ ಬೇಡಿಕೊಳ್ಳುವಂತೆ ಅವರಿಗೆ ಪ್ರೋತ್ಸಾಹಿಸುತ್ತಾನೆ. ಅವರು ಬೇಡಿದ್ದನ್ನು ಅವನು ಅವರಿಗೆ ನೀಡುತ್ತಾನೆ. ಅವರ ಪಾಪಗಳಿಗೆ ಕ್ಷಮೆ ಕೋರುವಂತೆ ಅವನು ಅವರಿಗೆ ಉತ್ತೇಜಿಸುತ್ತಾನೆ. ಅವನ ಸತ್ಯವಿಶ್ವಾಸಿ ದಾಸರಿಗೆ ಅವನು ಕ್ಷಮಿಸುತ್ತಾನೆ.