عَنِ عَائِشَةَ أُمِّ المُؤْمِنين رَضيَ اللهُ عنها زَوْجَ النَّبِيِّ صَلَّى اللهُ عَلَيْهِ وَسَلَّمَ:
أَنَّ الْحَوْلَاءَ بِنْتَ تُوَيْتِ بْنِ حَبِيبِ بْنِ أَسَدِ بْنِ عَبْدِ الْعُزَّى مَرَّتْ بِهَا وَعِنْدَهَا رَسُولُ اللهِ صَلَّى اللهُ عَلَيْهِ وَسَلَّمَ، فَقُلْتُ: هَذِهِ الْحَوْلَاءُ بِنْتُ تُوَيْتٍ، وَزَعَمُوا أَنَّهَا لَا تَنَامُ اللَّيْلَ، فَقَالَ رَسُولُ اللهِ صَلَّى اللهُ عَلَيْهِ وَسَلَّمَ: «لَا تَنَامُ اللَّيْلَ! خُذُوا مِنَ الْعَمَلِ مَا تُطِيقُونَ، فَوَاللهِ لَا يَسْأَمُ اللهُ حَتَّى تَسْأَمُوا».
[صحيح] - [متفق عليه] - [صحيح مسلم: 785]
المزيــد ...
ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
ಹೌಲಾಅ್ ಬಿಂತ್ ತುವೈತ್ ಬಿನ್ ಹಬೀಬ್ ಬಿನ್ ಅಸದ್ ಬಿನ್ ಅಬ್ದುಲ್ ಉಝ್ಝಾ ನನ್ನ ಬಳಿಯಿಂದ ಹಾದುಹೋದರು. ಆಗ ನನ್ನೊಂದಿಗೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇದ್ದರು. ನಾನು ಹೇಳಿದೆನು: "ಇವಳು ಹೌಲಾಅ್ ಬಿಂತ್ ತುವೈತ್. ಅವಳು ರಾತ್ರಿ ನಿದ್ರಿಸುವುದಿಲ್ಲವೆಂದು ಅವರು (ಜನರು) ಹೇಳುತ್ತಾರೆ". ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ರಾತ್ರಿ ನಿದ್ರಿಸುವುದಿಲ್ಲವೇ?! ನಿಮಗೆ ನಿರಂತರವಾಗಿ ಮಾಡಲು ಸಾಧ್ಯವಾಗುವಷ್ಟು ಕರ್ಮಗಳನ್ನು ಮಾತ್ರ ಮಾಡಿಕೊಳ್ಳಿರಿ. ಅಲ್ಲಾಹನಾಣೆ, ನೀವು ಬೇಸರಗೊಳ್ಳುವವರೆಗೆ ಅಲ್ಲಾಹು ಬೇಸರಗೊಳ್ಳುವುದಿಲ್ಲ."
[صحيح] - [متفق عليه] - [صحيح مسلم - 785]
ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಬಳಿಯಿಂದ ಹೌಲಾಅ್ ಬಿಂತ್ ತುವೈತ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಇದ್ದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಂದಾಗ ಅವರು ಅಲ್ಲಿಂದ ಹೊರಟರು. ಆಗ ಆಯಿಷಾ ಪ್ರವಾದಿಯವರಿಗೆ ಹೇಳಿದರು: ಈ ಮಹಿಳೆ ರಾತ್ರಿ ನಿದ್ರಿಸುವುದಿಲ್ಲ, ಬದಲಿಗೆ ರಾತ್ರಿಯನ್ನು ನಮಾಝ್‌ನಿಂದ ಜೀವಂತವಾಗಿಡುತ್ತಾಳೆ. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವಳು ತನ್ನ ಮೇಲೆ ತಾನೇ ಕಠಿಣತೆಯನ್ನು ವಿಧಿಸಿದ್ದನ್ನು ಖಂಡಿಸುತ್ತಾ ಹೇಳಿದರು: ರಾತ್ರಿ ನಿದ್ರಿಸುವುದಿಲ್ಲವೇ! ನಿಮಗೆ ನಿರಂತರವಾಗಿ ಮಾಡಲು ಸಾಧ್ಯವಿರುವ ಕರ್ಮಗಳನ್ನೇ ಮಾಡಿರಿ. ಅಲ್ಲಾಹನಾಣೆ, ಅಲ್ಲಾಹು ತನ್ನ ವಿಧೇಯರಾದ ಸಜ್ಜನ ದಾಸರಿಗೆ ಅವರ ವಿಧೇಯತೆ, ಸತ್ಕರ್ಮಗಳು ಮತ್ತು ಒಳಿತಿನ ಕಾರ್ಯಗಳಿಗೆ ಪ್ರತಿಫಲ ಮತ್ತು ಪುಣ್ಯವನ್ನು ನೀಡುವುದರಲ್ಲಿ ಬೇಸರಗೊಳ್ಳುವುದಿಲ್ಲ, ಎಲ್ಲಿಯವರೆಗೆ ಎಂದರೆ ಅವರು (ದಾಸರು) ಬೇಸರಗೊಂಡು ಕರ್ಮವನ್ನು ಬಿಟ್ಟುಬಿಡುವವರೆಗೆ.