عَنْ مُعَاوِيَةَ رَضيَ اللهُ عنهُ قَالَ: سَمِعْتُ رَسُولَ اللهِ صَلَّى اللهُ عَلَيْهِ وَسَلَّمَ يَقُولُ:
«الْمُؤَذِّنُونَ أَطْوَلُ النَّاسِ أَعْنَاقًا يَوْمَ الْقِيَامَةِ».
[صحيح] - [رواه مسلم] - [صحيح مسلم: 387]
المزيــد ...
ಮುಆವಿಯಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ನಾನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ಕೇಳಿದ್ದೇನೆ:
"ಮುಅದ್ದಿನ್‌ಗಳು (ಅಝಾನ್ ಹೇಳುವವರು) ಪುನರುತ್ಥಾನ ದಿನದಂದು ಜನರಲ್ಲಿ ಅತ್ಯಂತ ಉದ್ದವಾದ ಕುತ್ತಿಗೆಯುಳ್ಳವರಾಗಿರುತ್ತಾರೆ".
[صحيح] - [رواه مسلم] - [صحيح مسلم - 387]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ನಮಾಝ್‌ಗಾಗಿ ಕರೆಯುವ ಮುಅದ್ದಿನ್‌ಗಳು, ತಾವು ಮಾಡುವ ಆ ಕರ್ಮದ ಶ್ರೇಷ್ಠತೆಯಿಂದಾಗಿ, ಅವರ ಆ ಒಳಿತಿನ ಹೆಚ್ಚಳದಿಂದಾಗಿ, ಮತ್ತು ಅವರ ಮಹಾನ್ ಪ್ರತಿಫಲದಿಂದಾಗಿ, ಪುನರುತ್ಥಾನ ದಿನದಂದು ಜನರಲ್ಲಿ ಅತ್ಯಂತ ಉದ್ದವಾದ ಕುತ್ತಿಗೆಯನ್ನು ಹೊಂದಿರುತ್ತಾರೆ.