+ -

عن عبد الله بن عمرو رضي الله عنهما أن النبي صلى الله عليه وسلم قال:
«الرَّاحِمُونَ يَرْحَمُهمُ الرَّحمنُ، ارحَمُوا أهلَ الأرضِ يَرْحْمْكُم مَن في السّماء».

[صحيح] - [رواه أبو داود والترمذي وأحمد] - [سنن أبي داود: 4941]
المزيــد ...

ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ದಯೆ ತೋರುವವರಿಗೆ ಪರಮ ದಯಾಮಯನು (ಅಲ್ಲಾಹು) ದಯೆ ತೋರುತ್ತಾನೆ. ಭೂಮಿಯಲ್ಲಿರುವವರಿಗೆ ದಯೆ ತೋರಿರಿ. ಆಕಾಶದಲ್ಲಿರುವವನು ನಿಮಗೆ ದಯೆ ತೋರುತ್ತಾನೆ."

[صحيح] - [رواه أبو داود والترمذي وأحمد] - [سنن أبي داود - 4941]

ವಿವರಣೆ

ಇತರ ಜನರಿಗೆ ದಯೆ ತೋರುವವರಿಗೆ ಪರಮ ದಯಾಮಯನಾದ ಅಲ್ಲಾಹು ಎಲ್ಲಾ ವಸ್ತುಗಳನ್ನು ಒಳಗೊಳ್ಳುವಷ್ಟು ವಿಶಾಲವಾದ ತನ್ನ ದಯೆಯಿಂದ ದಯೆ ತೋರುತ್ತಾನೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುತ್ತಿದ್ದಾರೆ.
ನಂತರ, ಭೂಮಿಯಲ್ಲಿರುವ ಮನುಷ್ಯರು, ಪ್ರಾಣಿಗಳು, ಹಕ್ಕಿಗಳು ಮುಂತಾದ ಎಲ್ಲಾ ಜೀವಿಗಳ ಮೇಲೆ ದಯೆ ತೋರಬೇಕೆಂದು ಅವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆದೇಶಿಸುತ್ತಾರೆ. ಅದಕ್ಕಿರುವ ಪ್ರತಿಫಲವಾಗಿ ಆಕಾಶದಲ್ಲಿರುವ ಅಲ್ಲಾಹು ಅವರಿಗೂ ದಯೆ ತೋರುತ್ತಾನೆ.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ತಮಿಳು ಬರ್ಮೀ ಥಾಯ್ ಜರ್ಮನ್ ಜಪಾನೀ ಪಶ್ತೋ الأسامية الألبانية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الكينياروندا الرومانية التشيكية الموري المالاجاشية الإيطالية الأورومو الولوف الأذربيجانية الأوكرانية الجورجية
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಇಸ್ಲಾಂ ಧರ್ಮವು ದಯೆಯ ಧರ್ಮವಾಗಿದೆ. ಅದು ಸಂಪೂರ್ಣವಾಗಿ ಅಲ್ಲಾಹನಿಗೆ ವಿಧೇಯತೆ ತೋರುವುದು ಮತ್ತು ಇತರ ಸೃಷ್ಟಿಗಳಿಗೆ ಒಳಿತು ಮಾಡುವುದರ ಮೇಲೆ ಸ್ಥಾಪಿತವಾಗಿದೆ.
  2. ಸರ್ವಶಕ್ತನಾದ ಅಲ್ಲಾಹನನ್ನು ರಹ್ಮತ್ (ದಯೆ) ಎಂಬ ಗುಣದಿಂದ ಬಣ್ಣಿಸಲಾಗಿದೆ. ಅವನು ಪರಮ ದಯಾಳು ಮತ್ತು ಕರುಣಾನಿಧಿಯಾಗಿದ್ದಾನೆ. ಅವನು ತನ್ನ ದಾಸರಿಗೆ ದಯೆ ತೋರುತ್ತಾನೆ.
  3. ಪ್ರತಿಫಲವು ಕರ್ಮಕ್ಕೆ ತಕ್ಕುದಾಗಿರುತ್ತದೆ. ದಯೆ ತೋರುವವರಿಗೆ ಅಲ್ಲಾಹು ದಯೆ ತೋರುತ್ತಾನೆ.
ಇನ್ನಷ್ಟು