عَنْ مَعْدَانَ بْنِ أَبِي طَلْحَةَ الْيَعْمَرِيُّ قَالَ:
لَقِيتُ ثَوْبَانَ مَوْلَى رَسُولِ اللهِ صَلَّى اللهُ عَلَيْهِ وَسَلَّمَ، فَقُلْتُ: أَخْبِرْنِي بِعَمَلٍ أَعْمَلُهُ يُدْخِلُنِي اللهُ بِهِ الْجَنَّةَ؟ أَوْ قَالَ قُلْتُ: بِأَحَبِّ الْأَعْمَالِ إِلَى اللهِ، فَسَكَتَ. ثُمَّ سَأَلْتُهُ فَسَكَتَ. ثُمَّ سَأَلْتُهُ الثَّالِثَةَ فَقَالَ: سَأَلْتُ عَنْ ذَلِكَ رَسُولَ اللهِ صَلَّى اللهُ عَلَيْهِ وَسَلَّمَ، فَقَالَ: «عَلَيْكَ بِكَثْرَةِ السُّجُودِ لِلَّهِ، فَإِنَّكَ لَا تَسْجُدُ لِلَّهِ سَجْدَةً، إِلَّا رَفَعَكَ اللهُ بِهَا دَرَجَةً، وَحَطَّ عَنْكَ بِهَا خَطِيئَةً» قَالَ مَعْدَانُ: ثُمَّ لَقِيتُ أَبَا الدَّرْدَاءِ فَسَأَلْتُهُ فَقَالَ لِي: مِثْلَ مَا قَالَ لِي: ثَوْبَانُ.
[صحيح] - [رواه مسلم] - [صحيح مسلم: 488]
المزيــد ...
ಮಅದಾನ್ ಬಿನ್ ಅಬೂ ತಲ್ಹ ಯಅಮರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ನಾನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸ್ವತಂತ್ರಗೊಳಿಸಿದ ಗುಲಾಮನಾದ ಸೌಬಾನ್‌ರನ್ನು ಭೇಟಿಯಾಗಿ ಹೇಳಿದೆ: ನನಗೆ ಒಂದು ಕರ್ಮವನ್ನು ತಿಳಿಸಿಕೊಡಿ. ನಾನು ಅದನ್ನು ಮಾಡಿದರೆ ಅದರ ಮೂಲಕ ಅಲ್ಲಾಹು ನನ್ನನ್ನು ಸ್ವರ್ಗಕ್ಕೆ ಪ್ರವೇಶಗೊಳಿಸಬೇಕು. ಅಥವಾ ನಾನು ಹೀಗೆ ಹೇಳಿದೆ: ಅಲ್ಲಾಹು ಅತ್ಯಂತ ಇಷ್ಟಪಡುವ ಕರ್ಮವನ್ನು ತಿಳಿಸಿಕೊಡಿ. ಅವರು ಮೌನವಾದರು. ನಾನು ಪುನಃ ಕೇಳಿದೆ. ಆದರೆ ಅವರು ಮೌನವಾದರು. ನಾನು ಮೂರನೇ ಬಾರಿ ಕೇಳಿದಾಗ ಅವರು ಹೇಳಿದರು: ನಾನು ಇದೇ ವಿಷಯವನ್ನು ಅಲ್ಲಾಹನ ಸಂದೇಶವಾಹಕರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದ್ದೆ. ಆಗ ಅವರು ಹೀಗೆ ಉತ್ತರಿಸಿದರು: "ಅಲ್ಲಾಹನಿಗೆ ಅತ್ಯಧಿಕವಾಗಿ ಸುಜೂದ್ ಮಾಡಿರಿ. ಏಕೆಂದರೆ ನೀವು ಅಲ್ಲಾಹನಿಗಾಗಿ ಒಂದು ಸುಜೂದ್ ಮಾಡಿದರೆ, ಅಲ್ಲಾಹು ಅದರಿಂದ ನಿಮಗೆ ಒಂದುಸ್ಥಾನಯನ್ನು ಏರಿಸುವನು ಮತ್ತು ನಿಮ್ಮಿಂದ ಒಂದು ಪಾಪವನ್ನು ಅಳಿಸುವನು." ಮಅದಾನ್ ಹೇಳಿದರು: ನಂತರ ನಾನು ಅಬೂ ದರ್ದಾಅ್‌ರನ್ನು ಭೇಟಿಯಾಗಿ ಇದೇ ಪ್ರಶ್ನೆಯನ್ನು ಕೇಳಿದೆ. ಅವರು ಕೂಡ ಸೌಬಾನ್ ಹೇಳಿದಂತೆಯೇ ಹೇಳಿದರು.
[صحيح] - [رواه مسلم] - [صحيح مسلم - 488]
ಸ್ವರ್ಗ ಪ್ರವೇಶಕ್ಕೆ ಕಾರಣವಾಗುವ ಅಥವಾ ಅಲ್ಲಾಹನಿಗೆ ಅತ್ಯಂತ ಇಷ್ಟವಾದ ಒಂದು ಕರ್ಮದ ಬಗ್ಗೆ ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಲಾಯಿತು.
ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಶ್ನೆ ಕೇಳಿದವನಿಗೆ ಹೀಗೆ ಉತ್ತರಿಸಿದರು: ಅಲ್ಲಾಹನಿಗೆ ಅತ್ಯಧಿಕ ಸುಜೂದ್ ಮಾಡುವ ಪರಿಪಾಠವನ್ನಿಟ್ಟುಕೋ. ಏಕೆಂದರೆ ನೀನು ಅಲ್ಲಾಹನಿಗಾಗಿ ಒಂದು ಸುಜೂದ್ ಮಾಡಿದರೆ, ಅಲ್ಲಾಹು ಅದರಿಂದ ನಿನಗೆ ಒಂದು ಸ್ಥಾನವನ್ನು ಏರಿಸುವನು ಮತ್ತು ನಿನ್ನ ಒಂದು ಪಾಪವನ್ನು ಕ್ಷಮಿಸುವನು."