عن أبي الهيَّاج الأسدي قال:
قَالَ لِي عَلِيُّ بْنُ أَبِي طَالِبٍ: أَلَا أَبْعَثُكَ عَلَى مَا بَعَثَنِي عَلَيْهِ رَسُولُ اللهِ صَلَّى اللهُ عَلَيْهِ وَسَلَّمَ؟ أَنْ لَا تَدَعَ تِمْثَالًا إِلَّا طَمَسْتَهُ، وَلَا قَبْرًا مُشْرِفًا إِلَّا سَوَّيْتَهُ.
[صحيح] - [رواه مسلم] - [صحيح مسلم: 969]
المزيــد ...
ಅಬೂ ಹಯ್ಯಾಜ್ ಅಸದಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ಅಲೀ ಬಿನ್ ಅಬೂ ತಾಲಿಬ್ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ನನ್ನೊಂದಿಗೆ ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನನ್ನು ಕಳುಹಿಸಿದ ಅದೇ ಕೆಲಸಕ್ಕಾಗಿ ನಾನು ತಮ್ಮನ್ನು ಕಳುಹಿಸಲೇ? ತಾವು ಒಂದೇ ಒಂದು ಪ್ರತಿಮೆಯನ್ನು ಅಳಿಸದೆ ಬಿಡಬಾರದು ಮತ್ತು ಎತ್ತರಿಸಲ್ಪಟ್ಟ ಒಂದೇ ಒಂದು ಸಮಾಧಿಯನ್ನು ನೆಲಸಮ ಮಾಡದೆ ಬಿಡಬಾರದು."
[صحيح] - [رواه مسلم] - [صحيح مسلم - 969]
ಇಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಂಗಡಿಗರಿಗೆ (ಸಹಾಬಿಗಳಿಗೆ) ಆದೇಶಿಸುವುದೇನೆಂದರೆ, ಯಾವುದೇ ಪ್ರತಿಮೆಯನ್ನು — ಅಂದರೆ ಆತ್ಮವಿರುವ ಜೀವಿಯ ಮೂರ್ತ ಅಥವಾ ಅಮೂರ್ತ ರೂಪ — ತೊಲಗಿಸದೆ ಅಥವಾ ಅಳಿಸಿಹಾಕದೆ ಬಿಡಬಾರದು.
ಅದೇ ರೀತಿ, ಎತ್ತರಿಸಿ ಕಟ್ಟಲಾಗಿರುವ ಸಮಾಧಿಯನ್ನು ನೆಲಸಮಗೊಳಿಸದೆ ಮತ್ತು ಅದರ ಮೇಲೆ ಕಟ್ಟಲಾಗಿರುವುದನ್ನು ದ್ವಂಸಗೊಳಿಸದೆ ಬಿಡಬಾರದು; ಅಥವಾ ಸಮಾಧಿಯು ಭೂಮಿಯಿಂದ ಒಂದು ಗೇಣು ಮಾತ್ರ ಎತ್ತರವಾಗಿರುವಂತೆ ಮಾಡಬೇಕು.