عَنْ عَائِشَةَ أُمِّ المُؤمنينَ رضي الله عنها قَالَتْ:
دَخَلَ عَلَيَّ رَسُولُ اللهِ صَلَّى اللهُ عَلَيْهِ وَسَلَّمَ، وَقَدْ سَتَرْتُ سَهْوَةً لِي بِقِرَامٍ فِيهِ تَمَاثِيلُ، فَلَمَّا رَآهُ هَتَكَهُ وَتَلَوَّنَ وَجْهُهُ وَقَالَ: «يَا عَائِشَةُ، أَشَدُّ النَّاسِ عَذَابًا عِنْدَ اللهِ يَوْمَ الْقِيَامَةِ الَّذِينَ يُضَاهُونَ بِخَلْقِ اللهِ» قَالَتْ عَائِشَةُ: «فَقَطَعْنَاهُ فَجَعَلْنَا مِنْهُ وِسَادَةً أَوْ وِسَادَتَيْنِ».
[صحيح] - [متفق عليه] - [صحيح مسلم: 2107]
المزيــد ...
ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ಒಮ್ಮೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನ ಬಳಿಗೆ ಬಂದಾಗ, ನಾನು ಚಿತ್ರಗಳಿರುವ ಒಂದು ಪರದೆಯಿಂದ ನನ್ನ ಗೋಡೆಯಲ್ಲಿನ ರಂಧ್ರವನ್ನು ಮುಚ್ಚಿಟ್ಟಿದ್ದೆ. ಅವರು ಅದನ್ನು ನೋಡಿ ಅದನ್ನು ಹರಿದು ಹಾಕಿದರು. ಅವರ ಮುಖದ ಬಣ್ಣ ಬದಲಾಯಿತು. ಅವರು ಹೇಳಿದರು: “ಓ ಆಯಿಶಾ! ಅಲ್ಲಾಹನ ಸೃಷ್ಟಿಯನ್ನು ಅನುಕರಿಸುವವರು ಯಾರೋ ಅವರು ಪುನರುತ್ಥಾನ ದಿನದಂದು ಅಲ್ಲಾಹನಿಂದ ಕಠೋರವಾಗಿ ಶಿಕ್ಷಿಸಲ್ಪಡುವರು.” ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: “ಆದ್ದರಿಂದ ನಾವು ಅದನ್ನು ಕತ್ತರಿಸಿ, ಅದರಿಂದ ಒಂದೆರಡು ದಿಂಬುಗಳನ್ನು ಮಾಡಿದೆವು.”
[صحيح] - [متفق عليه] - [صحيح مسلم - 2107]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಮನೆಗೆ ಪ್ರವೇಶಿಸಿದಾಗ, ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ವಸ್ತುಗಳನ್ನು ಜೋಪಾನವಾಗಿಡುವ ಗೋಡೆಯಲ್ಲಿರುವ ರಂಧ್ರವನ್ನು (ಮಾಡ) ಜೀವಿಗಳ ಚಿತ್ರವಿರುವ ಬಟ್ಟೆಯಿಂದ ಮುಚ್ಚಿಟ್ಟಿದ್ದರು. ಆಗ ಅಲ್ಲಾಹನಿಗಾಗಿ ಕೋಪಿಸುತ್ತಾ ಅವರ ಮುಖದ ಬಣ್ಣ ಬದಲಾಯಿತು ಮತ್ತು ಅವರು ಅದನ್ನು ತೆಗೆದು ಹಾಕಿದರು. ಅವರು ಹೇಳಿದರು: "ಅಲ್ಲಾಹನ ಸೃಷ್ಟಿಯನ್ನು ತಮ್ಮ ಚಿತ್ರಗಳ ಮೂಲಕ ಅನುಕರಿಸುವವರು ಯಾರೋ ಅವರನ್ನು ಪುನರುತ್ಥಾನ ದಿನದಂದು ಅತ್ಯಂತ ಕಠೋರವಾಗಿ ಶಿಕ್ಷಿಸಲಾಗುವುದು." ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: “ಆದ್ದರಿಂದ ನಾವು ಅದರಿಂದ ಒಂದೆರಡು ದಿಂಬುಗಳನ್ನು ಮಾಡಿದೆವು.”