عن عائشة أم المؤمنين وعبد الله بن عباس رضي الله عنهما قالا:
لَمَّا نَزَلَ بِرَسُولِ اللَّهِ صَلَّى اللهُ عَلَيْهِ وَسَلَّمَ طَفِقَ يَطْرَحُ خَمِيصَةً لَهُ عَلَى وَجْهِهِ، فَإِذَا اغْتَمَّ بِهَا كَشَفَهَا عَنْ وَجْهِهِ، فَقَالَ وَهُوَ كَذَلِكَ: «لَعْنَةُ اللَّهِ عَلَى اليَهُودِ وَالنَّصَارَى، اتَّخَذُوا قُبُورَ أَنْبِيَائِهِمْ مَسَاجِدَ» يُحَذِّرُ مَا صَنَعُوا.
[صحيح] - [متفق عليه] - [صحيح البخاري: 435]
المزيــد ...
ಆಯಿಶ ಮತ್ತು ಅಬ್ದುಲ್ಲಾ ಬಿನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರಿಬ್ಬರು ಹೇಳಿದರು:
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮರಣಶಯ್ಯೆಯಲ್ಲಿದ್ದಾಗ, ಅವರು ತಮ್ಮ ಮುಖವನ್ನು ಬಟ್ಟೆಯಿಂದ ಮುಚ್ಚತೊಡಗಿದರು. ಅವರಿಗೆ ಅದರಿಂದ ಸಂಕಟವಾಗುವಾಗ ಅದನ್ನು ಮುಖದಿಂದ ತೆಗೆಯುತ್ತಾ ಹೇಳುತ್ತಿದ್ದರು: "ಯಹೂದಿಗಳು ಮತ್ತು ಕ್ರೈಸ್ತರ ಮೇಲೆ ಅಲ್ಲಾಹನ ಶಾಪವಿರಲಿ. ಏಕೆಂದರೆ, ಅವರು ತಮ್ಮ ಪ್ರವಾದಿಗಳ ಸಮಾಧಿಗಳನ್ನು ಆರಾಧನಾ ಸ್ಥಳಗಳನ್ನಾಗಿ ಮಾಡಿಕೊಂಡರು." ಅವರು ಮಾಡಿದ ಕಾರ್ಯದ ಬಗ್ಗೆ ಪ್ರವಾದಿಯವರು ಎಚ್ಚರಿಸುತ್ತಿದ್ದರು.
[صحيح] - [متفق عليه] - [صحيح البخاري - 435]
ಇಲ್ಲಿ ಆಯಿಶ ಮತ್ತು ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮರಣವು ಹತ್ತಿರವಾದಾಗ ಅವರು ತಮ್ಮ ಮುಖದ ಮೇಲೆ ಬಟ್ಟೆಯ ತುಂಡನ್ನು ಹಾಕುತ್ತಿದ್ದರು. ಮರಣದ ಕಡು ನೋವಿನಿಂದ ಉಸಿರಾಡಲು ಕಷ್ಟವಾಗುವಾಗ ಅದನ್ನು ಮುಖದಿಂದ ತೆಗೆಯುತ್ತಿದ್ದರು. ಆ ಕಠಿಣ ಪರಿಸ್ಥಿತಿಯಲ್ಲಿ ಅವರು ಹೇಳುತ್ತಿದ್ದರು: "ಯಹೂದಿಗಳು ಮತ್ತು ಕ್ರೈಸ್ತರ ಮೇಲೆ ಅಲ್ಲಾಹನ ಶಾಪವಿರಲಿ ಮತ್ತು ಅವನು ಅವರನ್ನು ತನ್ನ ದಯೆಯಿಂದ ದೂರವಿಡಲಿ. ಏಕೆಂದರೆ ಅವರು ತಮ್ಮ ಪ್ರವಾದಿಗಳ ಸಮಾಧಿಗಳ ಮೇಲೆ ಆರಾಧನಾಲಯಗಳನ್ನು ನಿರ್ಮಿಸಿದರು." ಈ ವಿಷಯವು ಅಷ್ಟೊಂದು ಅಪಾಯಕಾರಿಯಿಲ್ಲದಿದ್ದರೆ ಅವರು ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಅದರ ಬಗ್ಗೆ ಮಾತನಾಡುತ್ತಿರಲಿಲ್ಲ. ಅದು ಅಪಾಯಕಾರಿಯಾಗಿರುವುದರಿಂದಲೇ ಅವರು ಇಂತಹ ಕೃತ್ಯಗಳನ್ನು ಅನುಕರಣೆ ಮಾಡದಂತೆ ತಮ್ಮ ಸಮುದಾಯಕ್ಕೆ ಎಚ್ಚರಿಕೆ ನೀಡುತ್ತಿದ್ದರು. ಏಕೆಂದರೆ ಅದು ಯಹೂದಿಗಳು ಮತ್ತು ಕ್ರೈಸ್ತರ ಕೃತ್ಯಗಳಾಗಿದ್ದು, ಅದು ಅಲ್ಲಾಹನ ಜೊತೆ ಸಹಭಾಗಿತ್ವ (ಶಿರ್ಕ್) ಮಾಡುವುದಕ್ಕೆ ಕಾರಣವಾಗುತ್ತದೆ.