عن أبي هريرة رضي الله عنه قال:
كان رسولُ الله صلى الله عليه وسلم إذا عَطَس وضَعَ يَدَه -أو ثوبَهُ- على فيهِ، وخَفَضَ -أو غضَّ- بها صوتَهُ.
[صحيح] - [رواه أبو داود والترمذي وأحمد] - [سنن أبي داود: 5029]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸೀನುವಾಗ ತಮ್ಮ ಕೈಯನ್ನು—ಅಥವಾ ಬಟ್ಟೆಯನ್ನು—ಮುಖದ ಮೇಲಿಡುತ್ತಿದ್ದರು ಮತ್ತು ಶಬ್ದವನ್ನು ಕಡಿಮೆ ಮಾಡುತ್ತಿದ್ದರು—ಅಥವಾ ತಗ್ಗಿಸುತ್ತಿದ್ದರು.
[صحيح] - [رواه أبو داود والترمذي وأحمد] - [سنن أبي داود - 5029]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸೀನುವಾಗ:
ಮೊದಲನೆಯದಾಗಿ, ಅವರು ತಮ್ಮ ಬಾಯಿಯಿಂದ ಅಥವಾ ಮೂಗಿನಿಂದ ಏನಾದರೂ ಹೊರಬಂದು ತಮ್ಮ ಬಳಿಯಿರುವವರಿಗೆ ತೊಂದರೆಯಾಗದಿರಲು ತಮ್ಮ ಬಾಯಿಯ ಮೇಲೆ ಕೈ ಅಥವಾ ಬಟ್ಟೆಯನ್ನಿಡುತ್ತಿದ್ದರು.
ಎರಡನೆಯದಾಗಿ, ಶಬ್ದವನ್ನು ತಗ್ಗಿಸುತ್ತಿದ್ದರು, ಎತ್ತುತ್ತಿರಲಿಲ್ಲ.