عَنْ عَائِشَةَ أُمِّ المؤمنين رضي الله عنها قَالَتْ:
كَانَ رَسُولُ اللَّهِ صَلَّى اللهُ عَلَيْهِ وَسَلَّمَ إِذَا اغْتَسَلَ مِنَ الجَنَابَةِ، غَسَلَ يَدَيْهِ، وَتَوَضَّأَ وُضُوءَهُ لِلصَّلاَةِ، ثُمَّ اغْتَسَلَ، ثُمَّ يُخَلِّلُ بِيَدِهِ شَعَرَهُ، حَتَّى إِذَا ظَنَّ أَنَّهُ قَدْ أَرْوَى بَشَرَتَهُ، أَفَاضَ عَلَيْهِ المَاءَ ثَلاَثَ مَرَّاتٍ، ثُمَّ غَسَلَ سَائِرَ جَسَدِهِ، وَقَالَتْ: كُنْتُ أَغْتَسِلُ أَنَا وَرَسُولُ اللَّهِ صَلَّى اللهُ عَلَيْهِ وَسَلَّمَ مِنْ إِنَاءٍ وَاحِدٍ، نَغْرِفُ مِنْهُ جَمِيعًا.
[صحيح] - [رواه البخاري] - [صحيح البخاري: 272]
المزيــد ...
ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
"ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ದೊಡ್ಡ ಅಶುದ್ಧಿಯಿಂದಾಗಿ (ಜನಾಬತ್) ಸ್ನಾನ ಮಾಡುವಾಗ, ಮೊದಲು ಕೈಗಳನ್ನು ತೊಳೆದು, ನಂತರ ನಮಾಝ್‌ಗಾಗಿ ವುದೂ (ಅಂಗಸ್ನಾನ) ಮಾಡುವಂತೆ ವುದೂ ಮಾಡುತ್ತಿದ್ದರು. ನಂತರ ಅವರು ಸ್ನಾನ ಮಾಡುತ್ತಿದ್ದರು. ನಂತರ ಅವರು ನೀರು ಕೂದಲಿನ ಬುಡದಲ್ಲಿರುವ ಚರ್ಮಕ್ಕೆ ತಲುಪಿದೆಯೆಂದು ಖಾತ್ರಿಯಾಗುವ ತನಕ ಕೈಬೆರಳುಗಳನ್ನು ಕೂದಲುಗಳ ಒಳಗೆ ತೂರಿಸಿ ತೊಳೆಯುತ್ತಿದ್ದರು. ನಂತರ ದೇಹದ ಮೇಲೆ ಮೂರು ಬಾರಿ ನೀರು ಸುರಿಯುತ್ತಿದ್ದರು. ನಂತರ ದೇಹದ ಉಳಿದ ಭಾಗಗಳನ್ನು ತೊಳೆಯುತ್ತಿದ್ದರು." ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳುತ್ತಾರೆ: "ನಾನು ಮತ್ತು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಬ್ಬರ ನಂತರ ಒಬ್ಬರು ನೀರು ಸೇದುತ್ತಾ ಒಂದೇ ನೀರಿನ ಪಾತ್ರೆಯಿಂದ ಸ್ನಾನ ಮಾಡುತ್ತಿದ್ದೆವು."
[صحيح] - [رواه البخاري] - [صحيح البخاري - 272]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ದೊಡ್ಡ ಅಶುದ್ಧಿಯಿಂದಾಗಿ ಸ್ನಾನ ಮಾಡಲು ಬಯಸಿದರೆ, ಮೊದಲು ಕೈಗಳನ್ನು ತೊಳೆಯುತ್ತಿದ್ದರು ನಂತರ ನಮಾಝಿಗೆ ವುದೂ ಮಾಡುವಂತೆ ವುದೂ ಮಾಡುತ್ತಿದ್ದರು. ನಂತರ ದೇಹದ ಮೇಲೆ ನೀರು ಸುರಿಯುತ್ತಿದ್ದರು. ನಂತರ ನೀರು ತಲೆಗೂದಲ ಬುಡಕ್ಕೆ ತಲುಪಿ ಚರ್ಮವು ಒದ್ದೆಯಾಗಿದೆಯೆಂದು ಖಾತ್ರಿಯಾಗುವ ತನಕ ಕೈಬೆರಳುಗಳನ್ನು ಕೂದಲಿಗೆ ತೂರಿಸಿ ತೊಳೆಯುತ್ತಿದ್ದರು. ನಂತರ ದೇಹದ ಉಳಿದ ಭಾಗವನ್ನು ತೊಳೆಯುತ್ತಿದ್ದರು. ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳುತ್ತಾರೆ: "ನಾನು ಮತ್ತು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಬ್ಬರ ನಂತರ ಒಬ್ಬರು ನೀರು ಸೇದುತ್ತಾ ಒಂದೇ ನೀರಿನ ಪಾತ್ರೆಯಿಂದ ಸ್ನಾನ ಮಾಡುತ್ತಿದ್ದೆವು."