عن أبي هريرة قال: قال رسول الله صلى الله عليه وسلم:
«حَقٌّ عَلَى كُلِّ مُسْلِمٍ أَنْ يَغْتَسِلَ فِي كُلِّ سَبْعَةِ أَيَّامٍ يَوْمًا، يَغْسِلُ فِيهِ رَأْسَهُ وَجَسَدَهُ».
[صحيح] - [متفق عليه] - [صحيح البخاري: 897]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ವಾರಕ್ಕೊಮ್ಮೆ ತಲೆ ಮತ್ತು ದೇಹವನ್ನು ತೊಳೆಯುವ ಮೂಲಕ ಸ್ನಾನ ಮಾಡುವುದು ಪ್ರತಿಯೊಬ್ಬ ಮುಸಲ್ಮಾನನ ಕರ್ತವ್ಯವಾಗಿದೆ."
[صحيح] - [متفق عليه] - [صحيح البخاري - 897]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಪ್ರತಿ ಏಳು ದಿನಗಳಿಗೊಮ್ಮೆ ಸ್ನಾನ ಮಾಡುವುದು ಪ್ರತಿಯೊಬ್ಬ ಪ್ರೌಢ, ಬುದ್ಧಿಯಿರುವ ಮುಸಲ್ಮಾನನ ಪ್ರಮುಖ ಕರ್ತವ್ಯವಾಗಿದೆ. ಶುದ್ಧಿ ಮತ್ತು ಸ್ವಚ್ಛತೆಗಾಗಿ ವಾರದಲ್ಲಿ ಒಂದು ದಿನ ತಲೆ ಮತ್ತು ದೇಹವನ್ನು ತೊಳೆಯಬೇಕು. ಕೆಲವು ವರದಿಗಳಿಂದ ತಿಳಿದು ಬರುವಂತೆ ಅದು ಶುಕ್ರವಾರ ಆಗಿರುವುದು ಶ್ರೇಷ್ಠವಾಗಿದೆ. ಶುಕ್ರವಾರ ಜುಮಾ ನಮಾಝಿಗೆ ಮೊದಲು ಸ್ನಾನ ಮಾಡುವುದು ಪ್ರಬಲ ಸುನ್ನತ್ತಾಗಿದೆ. ಗುರುವಾರ ಸ್ನಾನ ಮಾಡಿದ್ದರೂ ಸಹ. ಶುಕ್ರವಾರ ಸ್ನಾನ ಮಾಡುವುದು ಕಡ್ಡಾಯವೆಂದು ಹೇಳದಿರಲು ಕಾರಣ ಆಯಿಶ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ರವರ ಈ ಮಾತುಗಳು: "ಜನರು ತಮ್ಮ ಕೆಲಸ-ಕಾರ್ಯಗಳಲ್ಲಿ ಮುಳುಗಿರುತ್ತಿದ್ದರು. ಅವರು ಶುಕ್ರವಾರ ನಮಾಝಿಗೆ ಬರುವಾಗ ಅದೇ ಸ್ಥಿತಿಯಲ್ಲಿ ಬರುತ್ತಿದ್ದರು. ಆಗ ಅವರೊಂದಿಗೆ, "ನೀವು ಸ್ನಾನ ಮಾಡಿ ಬರುತ್ತಿದ್ದರೆ ಚೆನ್ನಾಗಿತ್ತು" ಎಂದು ಹೇಳಲಾಯಿತು. [ಬುಖಾರಿ]. ಬುಖಾರಿಯ ಇನ್ನೊಂದು ವರದಿಯಲ್ಲಿ ಹೀಗಿದೆ: "ಅವರಲ್ಲಿ ದುರ್ವಾಸನೆಯಿತ್ತು." ಅಂದರೆ, ಬೆವರಿನ ವಾಸನೆ ಇತ್ಯಾದಿ. ಆದರೂ ಅವರೊಡನೆ, "ನೀವು ಸ್ನಾನ ಮಾಡಿ ಬರುತ್ತಿದ್ದರೆ ಚೆನ್ನಾಗಿತ್ತು" ಎಂದು ಹೇಳಲಾಯಿತು. ಹೀಗಿರುವಾಗ, ಅವರ ಹೊರತಾದವರು ಇದನ್ನು ಅನುಸರಿಸಲು ಹೆಚ್ಚು ಬಾಧ್ಯಸ್ತರಾಗಿದ್ದಾರೆ.