+ -

عن قيس بن عاصم رضي الله عنه قال:
أتيتُ النبيَّ صلى الله عليه وسلم أُريدُ الإسلامَ، فأَمَرَني أن أغتَسِلَ بماءٍ وسِدرٍ.

[صحيح] - [رواه أبو داود والترمذي والنسائي] - [سنن أبي داود: 355]
المزيــد ...

ಕೈಸ್ ಬಿನ್ ಆಸಿಂ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
"ನಾನು ಇಸ್ಲಾಂ ಸ್ವೀಕರಿಸಲು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದಾಗ, ಅವರು ನನಗೆ ನೀರು ಮತ್ತು ಸಿದ್ರ್ ಎಲೆಗಳಿಂದ ಸ್ನಾನ ಮಾಡಲು ಆದೇಶಿಸಿದರು."

[صحيح] - [رواه أبو داود والترمذي والنسائي] - [سنن أبي داود - 355]

ವಿವರಣೆ

ಕೈಸ್ ಬಿನ್ ಆಸಿಂ ಇಸ್ಲಾಂ ಸ್ವೀಕರಿಸುವ ಉದ್ದೇಶದಿಂದ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದಾಗ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ನೀರು ಮತ್ತು ಸಿದ್ರ್ ಮರದ ಎಲೆಗಳಿಂದ ಸ್ನಾನ ಮಾಡಲು ಆದೇಶಿಸಿದರು. ಇದೇಕೆಂದರೆ, ಅವರು ದೇಹವನ್ನು ಸ್ವಚ್ಛಗೊಳಿಸಲು ಸಿದ್ರ್ ಎಲೆಗಳನ್ನು ಬಳಸುತ್ತಿದ್ದರು ಮತ್ತು ಅದಕ್ಕೆ ಉತ್ತಮ ಪರಿಮಳವೂ ಇತ್ತು.

ಹದೀಸಿನ ಪ್ರಯೋಜನಗಳು

  1. ಮುಸ್ಲಿಮೇತರರು ಇಸ್ಲಾಂ ಧರ್ಮವನ್ನು ಪ್ರವೇಶಿಸುವಾಗ ಸ್ನಾನ ಮಾಡಬೇಕು.
  2. ಇಸ್ಲಾಂ ಧರ್ಮದ ಶ್ರೇಷ್ಠತೆಯನ್ನು ಮತ್ತು ಅದು ದೇಹ ಹಾಗೂ ಆತ್ಮ ಎರಡಕ್ಕೂ ಪ್ರಾಮುಖ್ಯತೆ ನೀಡುತ್ತದೆಯೆಂದು ತಿಳಿಸಲಾಗಿದೆ.
  3. ನೀರು ಶುದ್ಧ ವಸ್ತುಗಳೊಂದಿಗೆ ಬೆರೆತರೆ ಅದರ ಶುದ್ಧಿಯು ನಿವಾರಣೆಯಾಗುವುದಿಲ್ಲ.
  4. ಸ್ವಚ್ಛಗೊಳಿಸಲು ಸಿದ್ರ್ ಎಲೆಗಳ ಬದಲು ಸಾಬೂನು ಮುಂತಾದ ಆಧುನಿಕ ವಸ್ತುಗಳನ್ನು ಬಳಸಬಹುದು.
ಅನುವಾದ: ಆಂಗ್ಲ ಉರ್ದು ಇಂಡೋನೇಷಿಯನ್ ಉಯ್ಘರ್ ಬಂಗಾಳಿ ತುರ್ಕಿ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಮಲಯಾಳಂ ತೆಲುಗು ಸ್ವಾಹಿಲಿ ತಮಿಳು ಬರ್ಮೀ ಥಾಯ್ ಪಶ್ತೋ الأسامية الألبانية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الكينياروندا الرومانية المجرية التشيكية الموري المالاجاشية الإيطالية الأورومو الولوف الأذربيجانية الأوكرانية الجورجية
ಅನುವಾದಗಳನ್ನು ತೋರಿಸಿ