+ -

عن عَبْدِ اللهِ بْنِ عُمَرَ رضي الله عنهما قَالَ: سَمِعْتُ رَسُولَ اللهِ صلى الله عليه وسلم يَقُولُ:
«‌مَنْ ‌جَاءَ ‌مِنْكُمُ ‌الْجُمُعَةَ فَلْيَغْتَسِلْ».

[صحيح] - [متفق عليه] - [صحيح البخاري: 894]
المزيــد ...

ಅಬ್ದುಲ್ಲಾ ಬಿನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ನಿಮ್ಮಲ್ಲಿ ಯಾರಾದರೂ ಜುಮಾ ನಮಾಝ್‌ಗೆ ಬಂದರೆ ಸ್ನಾನ ಮಾಡಿ ಬರಲಿ."

[صحيح] - [متفق عليه] - [صحيح البخاري - 894]

ವಿವರಣೆ

ಜುಮಾ ನಮಾಝ್ ನಿರ್ವಹಿಸಲು ಬರುವವರಿಗೆ ದೊಡ್ಡ ಅಶುದ್ಧಿಗಾಗಿ (ಜನಾಬತ್) ಸ್ನಾನ ಮಾಡುವಂತೆ ಸ್ನಾನ ಮಾಡುವುದು ಅಪೇಕ್ಷಣೀಯವಾಗಿದೆ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಒತ್ತುಕೊಟ್ಟು ಹೇಳಿದ್ದಾರೆ.

ಹದೀಸಿನ ಪ್ರಯೋಜನಗಳು

  1. ಜುಮಾ ದಿನ (ಶುಕ್ರವಾರ) ಸ್ನಾನ ಮಾಡುವುದಕ್ಕೆ ಒತ್ತುಕೊಡಲಾಗಿದೆ. ಸತ್ಯವಿಶ್ವಾಸಿ ಶುಕ್ರವಾರ ಸ್ನಾನ ಮಾಡುವುದು ಸುನ್ನತ್ತಾಗಿದೆ. ಆ ಸ್ನಾನವು ಜುಮಾ ನಮಾಝ್‌ಗೆ ಹೊರಡುವಾಗ ನಿರ್ವಹಿಸುವುದು ಶ್ರೇಷ್ಠವಾಗಿದೆ.
  2. ಸ್ವಚ್ಛತೆಯನ್ನು ಪ್ರೋತ್ಸಾಹಿಸಲಾಗಿದೆ. ಉತ್ತಮ ಪರಿಮಳವನ್ನು ಹೊಂದಿರುವುದು ಮುಸಲ್ಮಾನನ ಗುಣ ಮತ್ತು ಶಿಷ್ಟಾಚಾರಗಳಲ್ಲಿ ಒಳಪಡುತ್ತದೆ. ಜನರನ್ನು ಭೇಟಿಯಾಗುವಾಗ ಮತ್ತು ಅವರೊಡನೆ ಕೂರುವಾಗ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ. ವಿಶೇಷವಾಗಿ ಜುಮಾ ಮತ್ತು ಜಮಾಅತ್ (ಸಾಮೂಹಿಕ) ನಮಾಝ್‌ಗಳಿಗೆ ಹಾಜರಾಗುವಾಗ.
  3. ಹದೀಸಿನಲ್ಲಿರುವ ವಿಷಯವು ಜುಮಾ ಕಡ್ಡಾಯವಿರುವವರಿಗೆ ಮಾತ್ರ ಅನ್ವಯವಾಗುತ್ತದೆ. ಏಕೆಂದರೆ, ಅವರೇ ಜುಮಾ ನಮಾಝ್ ನಿರ್ವಹಿಸಲು ಬರುವವರು.
  4. ಜುಮಾ ನಮಾಝ್ ನಿರ್ವಹಿಸಲು ಬರುವವರು ಸ್ವಚ್ಛವಾಗಿರುವುದು ಅಪೇಕ್ಷಣೀಯವಾಗಿದೆ. ದೇಹದ ದುರ್ಗಂಧವು ನಿವಾರಣೆಯಾಗುವಂತೆ ಸ್ನಾನ ಮಾಡಿ ನಂತರ ಸುಗಂಧ ಹಚ್ಚಬೇಕು. ಜುಮಾ ನಮಾಝ್ ನಿರ್ವಹಿಸಲು ಕೇವಲ ವುದೂ ನಿರ್ವಹಿಸಿ ಬಂದರೂ ಸಾಕಾಗುತ್ತದೆ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಜರ್ಮನ್ ಪಶ್ತೋ الأسامية السويدية الأمهرية الهولندية الغوجاراتية القيرقيزية النيبالية الرومانية المجرية الموري الأورومو الجورجية
ಅನುವಾದಗಳನ್ನು ತೋರಿಸಿ
ಇನ್ನಷ್ಟು