عَنْ أَبِي هُرَيْرَةَ رَضِيَ اللَّهُ عَنْهُ أَنَّ رَسُولَ اللَّهِ صَلَّى اللهُ عَلَيْهِ وَسَلَّمَ قَالَ:
«مَنِ اغْتَسَلَ يَوْمَ الجُمُعَةِ غُسْلَ الجَنَابَةِ ثُمَّ رَاحَ، فَكَأَنَّمَا قَرَّبَ بَدَنَةً، وَمَنْ رَاحَ فِي السَّاعَةِ الثَّانِيَةِ، فَكَأَنَّمَا قَرَّبَ بَقَرَةً، وَمَنْ رَاحَ فِي السَّاعَةِ الثَّالِثَةِ، فَكَأَنَّمَا قَرَّبَ كَبْشًا أَقْرَنَ، وَمَنْ رَاحَ فِي السَّاعَةِ الرَّابِعَةِ، فَكَأَنَّمَا قَرَّبَ دَجَاجَةً، وَمَنْ رَاحَ فِي السَّاعَةِ الخَامِسَةِ، فَكَأَنَّمَا قَرَّبَ بَيْضَةً، فَإِذَا خَرَجَ الإِمَامُ حَضَرَتِ المَلاَئِكَةُ يَسْتَمِعُونَ الذِّكْرَ».
[صحيح] - [متفق عليه] - [صحيح البخاري: 881]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಶುಕ್ರವಾರ ದೊಡ್ಡ ಅಶುದ್ಧಿ (ಜನಾಬತ್) ಗಾಗಿರುವ ಸ್ನಾನವನ್ನು ಮಾಡಿ ನಂತರ (ಮಸೀದಿಗೆ) ಹೊರಡುವವನು, ಒಂಟೆಯನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ. ಎರಡನೇ ತಾಸಿನಲ್ಲಿ ಹೊರಡುವವನು ಹಸುವನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ. ಮೂರನೇ ತಾಸಿನಲ್ಲಿ ಹೊರಡುವವನು ಕೊಂಬುಗಳಿರುವ ಟಗರನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ. ನಾಲ್ಕನೇ ತಾಸಿನಲ್ಲಿ ಹೊರಡುವವನು ಕೋಳಿಯನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ. ಐದನೇ ತಾಸಿನಲ್ಲಿ ಹೊರಡುವವನು ಮೊಟ್ಟೆಯನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ. ನಂತರ, ಇಮಾಮರು ಹೊರ ಬಂದರೆ ದೇವದೂತರುಗಳು ಪ್ರವಚನವನ್ನು ಕೇಳಲು ಹಾಜರಾಗುತ್ತಾರೆ."
[صحيح] - [متفق عليه] - [صحيح البخاري - 881]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಜುಮಾ ನಮಾಝಿಗಾಗಿ ಬೇಗನೇ ಹೊರಡುವುದರ ಶ್ರೇಷ್ಠತೆಯನ್ನು ತಿಳಿಸುತ್ತಿದ್ದಾರೆ. ಈ ತ್ವರೆಯು ಸೂರ್ಯೋದಯದಿಂದ ತೊಡಗಿ ಇಮಾಮರು ಪ್ರವಚನ ನೀಡುವುದಕ್ಕಾಗಿ ಹೊರಬರುವ ತನಕ ಇದೆ. ಇದು ಐದು ತಾಸುಗಳನ್ನು ಹೊಂದಿದ್ದು, ಸೂರ್ಯೋದಯ ಮತ್ತು ಇಮಾಮರು ಪ್ರವಚನ ನೀಡುವುದಕ್ಕಾಗಿ ಪ್ರವಚನ ಪೀಠವನ್ನು ಏರುವುದರ ನಡುವಿನ ಸಮಯಕ್ಕೆ ಅನುಗುಣವಾಗಿ ಐದು ಭಾಗಗಳಾಗಿ ವಿಂಗಡಿಸಲಾಗಿದೆ.
ಒಂದು: ಒಬ್ಬ ವ್ಯಕ್ತಿ ದೊಡ್ಡ ಅಶುದ್ಧಿಗಾಗಿ ಸ್ನಾನ ಮಾಡುವಂತೆ ಸ್ನಾನ ಮಾಡಿ, ನಂತರ ಮೊದಲ ತಾಸಿನಲ್ಲಿ ಜುಮಾ ಮಸೀದಿಗೆ ಹೊರಟರೆ, ಅವನು ಒಂಟೆಯನ್ನು ದಾನ ಮಾಡಿದವನಿಗೆ ಸಮಾನನಾಗುತ್ತಾನೆ.
ಎರಡು: ಎರಡನೇ ತಾಸಿನಲ್ಲಿ ಹೊರಡುವವನು ಹಸುವನ್ನು ದಾನ ಮಾಡಿದವನಿಗೆ ಸಮಾನನಾಗುತ್ತಾನೆ.
ಮೂರು: ಮೂರನೇ ತಾಸಿನಲ್ಲಿ ಹೊರಡುವವನು ಕೊಂಬುಗಳಿರುವ ಟಗರನ್ನು ದಾನ ಮಾಡಿದವನಿಗೆ ಸಮಾನನಾಗುತ್ತಾನೆ.
ನಾಲ್ಕು: ನಾಲ್ಕನೇ ತಾಸಿನಲ್ಲಿ ಹೊರಡುವವನು ಕೋಳಿಯನ್ನು ದಾನ ಮಾಡಿದವನಿಗೆ ಸಮಾನನಾಗುತ್ತಾನೆ.
ಐದು: ಐದನೇ ತಾಸಿನಲ್ಲಿ ಹೊರಡುವವನು ಮೊಟ್ಟೆಯನ್ನು ದಾನ ಮಾಡಿದವನಿಗೆ ಸಮಾನನಾಗುತ್ತಾನೆ.
ಇಮಾಮರು ಪ್ರವಚನ ನೀಡಲು ಹೊರಟು ಬಂದರೆ, ಮಸೀದಿಯ ಬಾಗಿಲುಗಳಲ್ಲಿ ಕುಳಿತು ಜನರು ಮಸೀದಿಗೆ ಬರುವುದನ್ನು ಅವರ ಸಮಯಗಳಿಗೆ ಅನುಗುಣವಾಗಿ ದಾಖಲಿಸುತ್ತಿದ್ದ ದೇವದೂತರುಗಳು ಅದನ್ನು ನಿಲ್ಲಿಸಿ ಉಪದೇಶ ಮತ್ತು ಪ್ರವಚನವನ್ನು ಕೇಳಲು ಹಾಜರಾಗುತ್ತಾರೆ.