+ -

عن أبِي هُرَيرةَ رضي الله عنه أنَّ رسول الله صلى الله عليه وسلمَ قال:
«إذا قُلْتَ لِصَاحِبِكَ: أَنْصِتْ، يومَ الجمعةِ، والْإِمامُ يَخْطُبُ، فَقَدْ لَغَوْتَ».

[صحيح] - [متفق عليه] - [صحيح مسلم: 851]
المزيــد ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಶುಕ್ರವಾರ ಇಮಾಮರು ಪ್ರವಚನ ನಿರ್ವಹಿಸುತ್ತಿರುವಾಗ, ನೀನು ನಿನ್ನ ಬಳಿಯಿರುವವನಿಗೆ "ಮೌನವಾಗಿರು" ಎಂದು ಹೇಳಿದರೆ ನೀನು ಅನಗತ್ಯವಾದುದನ್ನು ಮಾಡಿದೆ."

[صحيح] - [متفق عليه] - [صحيح مسلم - 851]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಇಮಾಮರು ಪ್ರವಚನ ನೀಡುತ್ತಿರುವಾಗ ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಮೌನವಾಗಿ ಕೂರುವುದು ಶುಕ್ರವಾರದ ಪ್ರವಚನಕ್ಕೆ ಹಾಜರಾಗುವವರು ಪಾಲಿಸಬೇಕಾದ ಶಿಷ್ಟಾಚಾರಗಳಲ್ಲಿ ಒಂದಾಗಿದೆ. ಇನ್ನು ಇಮಾಮರು ಪ್ರವಚನ ನೀಡುತ್ತಿರುವಾಗ ಯಾರಾದರೂ ಮಾತನಾಡಿದರೆ, ಅದು "ಮೌನವಾಗಿರು" ಅಥವಾ "ಕಿವಿಗೊಟ್ಟು ಕೇಳು" ಎಂಬಂತಹ ಒಂದೆರಡು ಶಬ್ದಗಳಾದರೂ ಸಹ, ಅವರಿಗೆ ಶುಕ್ರವಾರದ ನಮಾಝಿನ ಪುಣ್ಯವು ನಷ್ಟವಾಗುತ್ತದೆ.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ತಮಿಳು ಬರ್ಮೀ ಥಾಯ್ ಜರ್ಮನ್ ಜಪಾನೀ ಪಶ್ತೋ الأسامية الألبانية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الكينياروندا الرومانية التشيكية الموري المالاجاشية الإيطالية الأورومو الولوف الأذربيجانية الأوكرانية الجورجية
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಶುಕ್ರವಾರದ ಪ್ರವಚನ ಕೇಳುತ್ತಿರುವಾಗ ಮಾತನಾಡುವುದು ನಿಷಿದ್ಧವಾಗಿದೆ. ಅದು ಕೆಡುಕನ್ನು ವಿರೋಧಿಸಲು, ಸಲಾಂಗೆ ಉತ್ತರಿಸಲು ಅಥವಾ ಸೀನಿದವನಿಗೆ ಯರ್ಹಮುಕಲ್ಲಾಹ್ ಎಂದು ಪ್ರಾರ್ಥಿಸುವುದಕ್ಕಾದರೂ ಸಹ.
  2. ಆದರೆ ಇಮಾಮರು ಸಭಿಕರೊಂದಿಗೆ ಮತ್ತು ಸಭಿಕರು ಇಮಾಮರೊಂದಿಗೆ ಮಾತನಾಡುವುದನ್ನು ಇದರಿಂದ ಹೊರತುಪಡಿಸಲಾಗಿದೆ.
  3. ಅತ್ಯಗತ್ಯದ ಸಂದರ್ಭಗಳಲ್ಲಿ ಎರಡು ಪ್ರವಚನಗಳ ನಡುವೆ ಮಾತನಾಡಬಹುದು.
  4. ಪ್ರವಚನದ ಮಧ್ಯೆ ಇಮಾಮರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೆಸರನ್ನು ಹೇಳಿದರೆ ಮೌನವಾಗಿ ಸಲಾತ್ ಹೇಳಬೇಕು. ಅದೇ ರೀತಿ, ಪ್ರಾರ್ಥನೆಗೆ ಮೌನವಾಗಿ ಆಮೀನ್ ಹೇಳಬೇಕು.